×
Ad

ಬಜಪೆ : ಕಳವು ಹಾಗೂ ಕೊಲೆ ಪ್ರಕರರಣಗಳಲ್ಲಿ ಬಾಗಿಯಾಗಿದ್ದ ಓರ್ವನ ಬಂಧನ

Update: 2016-02-09 18:53 IST

ಬಜಪೆ, ಫೆ.9: ಬಜಪೆ ಮತ್ತು ಮುಲ್ಕಿ ಠಾಣಾ ವ್ಯಾಪ್ತಿಯ ಹಲವು ಕಡೆಗಳಲ್ಲಿ ಕಳವು ಹಾಗೂ ಕೊಲೆಯಂತಹಾ ಪ್ರಕರರಣಗಳಲ್ಲಿ ಬಾಗಿಯಾಗಿದ್ದ ಓರ್ವನನ್ನು ಬಂಧಿಸಿರುವ ಬಜಪೆ ಪೊಲೀಸರು 380 ಗ್ರಾಂ ಚಿನ್ನಾಭರಣ, 68 ಸಾವಿರ ರೂ. ಮೌಲ್ಯದ ವಿದೇಶಿ ನೋಟುಗಳು ಹಾಗೂ 30 ಸಾವಿರ ರೂ. ನಗದು ಸೇರಿ ಸುಮಾರು 11.36 ಲಕ್ಷ ರೂ. ಬೆಲೆಬಾಳುವ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.


ಬಂಧಿತನ್ನು ಬಜಪೆ ಜರಿನಗರ ನಿವಾಸಿ ಅಬ್ದುಲ್ ರಜಾಕ್ 45 ವರ್ಷ ಎಂದು ತಿಳಿದು ಬಂದಿದೆ. ಈತ ಮದುವೆ ನಡೆಯುವ ಮನೆಗಳ ಆಸು ಪಾಸಿನ ಮನೆಗಳನ್ನು ಕೇಂದ್ರಿಕರಿಸಿ ಕಳ್ಳತನ ನಡೆಸುತ್ತಿದ್ದು, ಮನೆಗಳ ಬಾಗಿಲು ಮುರಿಯದೆ ಉದ್ದನೆಯ ಕೋಲುಗಳನ್ನು ಬಳಸಿಕೊಂಡು ಕಿಟಕಿಗಳ ಮೂಲಕ ಕಳ್ಳತನ ನಡೆಸುತ್ತಿದ್ದ ಎಂದು ವಿಚಾರಣೆಯ ವೇಳೆ ಬಹಿರಂಗ ಪಡಿಸಿದ್ದಾನೆ ಎಂದು ಬಜಪೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News