ಇದು ಸರ್ವಾಧಿಕಾರಿ ಹಿಟ್ಲರನ ರೋಚಕ ಪ್ರೇಮ ಕತೆ!
ಅಡಾಲ್ಫ್ ಹಿಟ್ಲರ್‌ನ ಹೆಸರು ಕೇಳದಿದ್ದವರಿರಲಾರು. ಅವನು ಸರ್ವಾಧಿಕಾರಿ ಹಾಗೂ ಕ್ರೌರ್ಯಕ್ಕೆ ಪರ್ಯಾಯ ಹೆಸರಾಗಿದ್ದ. ಆದರೆ ಇದೇ ವ್ಯಕ್ತಿಯ ಖಾಸಗಿ ವಿಚಾರ ಬೇರೆಯೂ ಇದೆ. ಅವನ ಹೃದಯದಲ್ಲಿ ಪ್ರೀತಿ ಕೂಡ ಹರಿದಾಡುತ್ತಿತ್ತು.ಇವಾ ಬ್ರೌನ್ ಎಂಬ ಮಹಿಳೆ ಜರ್ಮನಿಯ ಈ ಸರ್ವಾಧಿಕಾರಿಯನ್ನು ಸಮ್ಮೋಹಕಗೊಳಿಸಿದ್ದವಳು. ಹಿಟ್ಲರ್‌ನಂತಹ ದೈತ್ಯನ ಮನಸು ಕದಿಯುವುದೆಂದರೆ ಚಿಕ್ಕ ವಿಷಯವಲ್ಲ. ಆದರೆ ಅವಳು ಕದ್ದಿದ್ದಳು! ಅವಳಿಗಿಂತ ಮೊದಲು ಹಿಟ್ಲರ್‌ನಿಗೆ ಎರಡು ಅಫೇರ್‌ಗಳಿದ್ದವು. ಗೆಲಿ ರಾಬಲ್ ಹಾಗೂ ಅರ್ನಾ ಹೇಸ್ಟಿಂಗ್ಸ್‌ರ ಜೊತೆ ಅವನು ಸಂಪರ್ಕ ಇಟ್ಟುಕೊಂಡಿದ್ದ.
ಜರ್ಮನಿಯ ಮ್ಯೂನಿಚ್‌ನಲ್ಲಿ 1912 ಫೆ.6ರಂದು ಹುಟ್ಟಿದ್ದ ಇವಾ ಮಾಡೆಲ್ ಆಗಿದ್ದಳು. ಅವರಿಬ್ಬರು 1929ರಲ್ಲಿ ಮ್ಯೂನಿಚ್‌ನಲ್ಲಿ ಹಾಫ್‌ಮೈನ್ಸ್ ಸ್ಟುಡಿಯೋದಲ್ಲಿ ಪ್ರಥಮವಾಗಿ ಭೇಟಿಯಾಗಿದ್ದರು. ಆದರೆ ಜರ್ಮನಿಯ ಜನರಿಗೆ ಈ ಸಂಬಂಧದ ಕುರಿತು ಸ್ವಲ್ಪವೂ ಗೊತ್ತಿರಲಿಲ್ಲ. ಅವರಿಬ್ಬರಲ್ಲಿ ಹದಿನಾಲ್ಕು ವರ್ಷಗಳವರೆಗೆ ಸಂಬಂಧ ಮುಂದುವರಿದಿತ್ತು.
ಎಲ್ಲ ಪ್ರೇಮ ಕತೆಗಳಂತೆ ಅವರ ಪ್ರೇಮದಲ್ಲಿಯೂ ಏರು ಪೇರು ಇದ್ದೇ ಇತ್ತು. ಇವಾ ಆತ್ಮಹತ್ಯೆ ಮಾಡಲು ಎರಡು ಬಾರಿ ಯೋಚಿಸಿದ್ದಳನ್ನೆಲಾಗಿದೆ. 1931ರಲ್ಲಿ ಗೆಲಿ ರಾಬಲ್‌ಳು ನಿಧನಾನಂತರ ಹಿಟ್ಲರ್ ನಿರುತ್ಸಾಹಗೊಂಡಿದ್ದ. ಇದರ ಪ್ರಭಾವ ಇವಾಳ ಮೇಲೆಯೂ ಆಗಿತ್ತು. ಇವಾ ಎರಡು ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದೂ ಹಿಟ್ಲರನಲ್ಲಿ ಜಿಗುಪ್ಸೆಗೆ ಕಾರಣವಾಗಿತ್ತು. 1930-1940ರ ನಡುವೆ ಹಿಟ್ಲರ್‌ನ ಮನೆಯನ್ನು ಇವಾಳೇ ನೋಡಿಕೊಳ್ಳುತ್ತಿದ್ದಳು. ಇಬ್ಬರೂ ಜೊತೆಯಾಗಿ ಪಾರ್ಟಿ ಮಾಡಿಕೊಳ್ಳುತ್ತಿದ್ದರು. ಯುರೋಪ್‌ನಲ್ಲಿ ವಿಧ್ವಂಸಕಾರಿ ಸ್ಥಿತಿ ನಿರ್ಮಾಣವಾದ ಮೇಲೆ ಅವರಿಬ್ಬರೂ ಒಂಟಿಯಾಗಿ ಬಿಟ್ಟಿದ್ದರು. ಇಬ್ಬರೂ ಬರ್ಚ್‌ಸಗೆಡನ್‌ನ ತಮ್ಮ ಮನೆಯಲ್ಲಿ ಕದ್ದು ಮುಚ್ಚಿ ಭೇಟಿಯಾಗುತ್ತಿದ್ದರು.
ಹಿಟ್ಲರ್ ತನ್ನಸ್ಟಡೀ ರೂಮ್‌ನಲ್ಲಿ ಇವಾಳೊಂದಿಗೆ ಹೆಚ್ಚಿನ ಸಮಯ ಕಳೆಯುತ್ತಿದ್ದ. ಸಂಘರ್ಷ ವಾತಾವರಣ ಹೆಚ್ಚಳಗೊಂಡ ನಂತರ 29 ಎಪ್ರಿಲ್ 1944ರಲ್ಲಿ ಇವಾಳೊಂದಿಗೆ ರೆಚ್‌ಚಾನ್ಸೆಲರಿ ಬಂಕರ್‌ನಲ್ಲಿ ವಾಸಿಸತೊಡಗಿದ. 1945ರಲ್ಲಿ ಹಿಟ್ಲರ್ ಬಂಕರ್‌ನೊಳಗೆ ಇವಾಳೊಂದಿಗೆ ಮದುವೆಯಾದ. ಅವಳಿಗೆ ಪತ್ನಿಯ ಸ್ಥಾನವನ್ನು ಕೊಟ್ಟ. ಮದುವೆ ಪಾರ್ಟಿಯಾಗಿ ಉಪಹಾರ ವ್ಯವಸ್ಥೆ ಮಾಡಲಾಗಿತ್ತು. ಆದರೆ ಈ ಮದುವೆ ಕೇವಲ 46ಗಂಟೆ ಮಾತ್ರ ಉಳಿದಿತ್ತು.
1945 ಎಪ್ರಿಲ್ 30ರಂದು ತನ್ನ ಕೆಲಸಗಾರರಿಗೆ ಮಧ್ಯಾಹ್ನದ ಒಂದು ಗಂಟೆವೇಳೆ ಕೊನೆಯ ವಿದಾಯ ಹೇಳಿದ್ದ. ಸ್ವಲ್ಪಹೊತ್ತಿನ ನಂತರ ಗುಂಡು ಹಾರಾಟದ ಸದ್ದು ಕೇಳಿಸಿತ್ತು. ಬಾಗಿಲು ತೆರೆದಾಗ ಇವಾ ಮತ್ತು ಹಿಟ್ಲರ್ ಸತ್ತು ಬಿದ್ದಿದ್ದರು. ಹಿಟ್ಲರ್ ಗುಂಡು ಹಾರಿಸಿಕೊಂಡಿದ್ದರೆ, ಇವಾ ಸಯನೈಡ್ ಸೇವಿಸಿ ಸತ್ತಿದ್ದಳು. ಇದು ಇಪ್ಪತ್ತನೆ ಶತಮಾನದ ರೋಮಾಂಚಕ ಪ್ರೇಮ ಕತೆಗಳಲ್ಲೊಂದಾಗಿದೆ. ಕ್ರೂರಿ ಸರ್ವಾಧಿಕಾರಿಯೊಳಗಿದ್ದ ಪ್ರೇಮ ಕತೆ ಹೀಗೆ ಕೊನೆಗೊಂಡಿತ್ತು.