×
Ad

ಮೂವರು ಉಗ್ರರ ಕಳೇಬರ ದಫನ ಮಾಡಲು ಅವಕಾಶ ನೀಡದ ಕಾಶ್ಮೀರದ ಪುಟ್ಟ ಗ್ರಾಮ ಬರಿಯನ್... !

Update: 2016-02-09 19:28 IST

 ಶ್ರೀನಗರ, ಫೆ.9: ಹಜ್ಜಿನ್ ಬಂಡೀಪುರದಲ್ಲಿ ಎನ್‌ಕೌಂಟರ್‌ನಲ್ಲಿ ಸಾವೀಗೀಡಾದ ಮೂವರು ಉಗ್ರರ ಮೃತದೇಹವನ್ನು ಬರಿಯಾನ್ ಗ್ರಾಮಸ್ಥರು ಗುರುವಾರ ನಿರಾಕರಿಸಿದ ಘಟನೆ ವರದಿಯಾಗಿದೆ.
    ಕಾರಣವಿಷ್ಟೇ ಪೊಲೀಸರು ಬಹಳ ಹಿಂದಿನಿಂದಲೂ ನಕಲಿ ಎನ್‌ಕೌಂಟರ್‌ನಲ್ಲಿ ನಾಗರಿಕರನ್ನು ಕೊಂದು ಅವರಿಗೆ ಉಗ್ರರ ಹಣೆಪಟ್ಟಿ ಕಟ್ಟುತ್ತಾರೆ. ಉಗ್ರರ ಮೃತದೇಹಗಳೆಂದು ಎಲ್ಲವನ್ನು ಇಲ್ಲಿ ದಫನ ಮಾಡುತ್ತಾರೆ.  ಅದು ಯಾರದ್ದು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಈ ಕಾರಣದಿಂದಾಗಿ ಗ್ರಾಮಸ್ಥರು ಮೃತದೇಹಗಳನ್ನು ದಫನ ಮಾಡಲು ಅವಕಾಶ ನೀಡಲಿಲ್ಲ.
ಗ್ರಾಮಸ್ಥರ ವಿರೋಧದಿಂದಾಗಿ ಪೊಲೀಸರು ಬೊನಿಯಾರ್‌ನ ಸರಕಾರಿ ಪ್ರೌಢ ಶಾಲೆಯ ಪಕ್ಕದ ಜಮೀನಿನಲ್ಲಿ ಉಗ್ರರ ಕಳೇಬರವನ್ನು ದಫನ ಮಾಡಿದರು.
    ಕಳೆದ ನವೆಂಬರ್‌ನಲ್ಲಿ ಲಷ್ಕರ್ ಎ ತೋಬ್ಬಾದ ಕಾಶ್ಮೀರ ಘಟಕದ ಮುಖ್ಯಸ್ಥ ಅಬೂ ಖಾಸಿಮ್ ಮೃತದೇಹವನ್ನು ಇಲ್ಲಿ ದಫನ ಮಾಡಿದ ಬಳಿಕ ಸೈನಿಕರು ಎನ್‌ಕೌಂಟರ್‌ನಲ್ಲಿ ಮಡಿದ ವಿದೇಶಿಯರ ಮೃತದೇಹವನ್ನು ಇಲ್ಲಿ ತಂದು ದಫನ ಮಾಡುತ್ತಿದ್ದಾರೆ. ಖಾಸೀಮ್‌ನ ಮೃತದೇಹವನ್ನು ಪಡೆಯಲು ಎರಡು ಗ್ರಾಮಗಳ ನಡುವೆ ಪೈಪೋಟಿ ನಡೆದಿತ್ತು. ಖಾಸೀಮ್ ಈ ಕಾಶ್ಮೀರದ ಮಣ್ಣಿನ ಮಗ ಈ ಕಾರಣಕ್ಕೆ ಅಂತಿಮ ನಮನ ಸಲ್ಲಿಸಲು ಭಾರೀ ಸಂಖೆಯಲ್ಲಿ ಜನ ಸೇರಿದ್ದರು ಎಂದು ಗ್ರಾಮಸ್ಥರು ಹೇಳುತ್ತಾರೆ.
 ಶ್ರೀನಗರದಿಂದ 90 ಕಿ.ಮೀ ದೂರದ ಬರಿಯಾನ್ ಗ್ರಾಮದಲ್ಲಿ ಖಾಸೀಮ್‌ನ ಮೃತದೇಹದ ಅಂತ್ಯ ಸಂಸ್ಕಾರ ಸಂದರ್ಭದಲ್ಲಿ ಸುಮಾರು 35 ಸಾವಿರ ಮಂದಿ ಪಾಲ್ಗೊಂಡಿದ್ದರು. ಆದರೆ ಖಾಸೀಮ್‌ನಿಂದ ಹತ್ಯೆಗೀಡಾದ ಪೊಲೀಸ್ ಅಧಿಕಾರಿ ಅಲ್ತಾಫ್ ಅಹ್ಮದ್ ಅವರ ಮೃತದೇಹದ ಅಂತ್ಯಸಂಸ್ಕಾರ ಸಂದರ್ಭದಲ್ಲಿ ಕೆಲವೇ ಡಜನ್ ಜನರು ಇದ್ದರು.
ಗಡಿ ನಿಯಂತ್ರಣ ರೇಖೆಯಿಂದ 2 ಕಿ.ಮೀ ದೂರದಲ್ಲಿರುವ ಬರಿಯಾನ್‌ನಲ್ಲಿ ವಿದೇಶಿ ಉಗ್ರರ ಕಳೇಬರವನ್ನು ತಂದು ದಫನ ಮಾಡುತ್ತಿರುವ ಕಾರಣದಿಂದಾಗಿ ಹೀರೋಗಳ ಕಳೆಬರವನ್ನು ದಫನ ಮಾಡಲು ಸ್ಥಳದಂತಾಗಿದೆ. ಬರಿಯಾನ್‌ನ್ನು ಸೈನಿಕರು ವಿದೇಶಿ ಉಗ್ರರ ಮೃತದೇಹಗಳನ್ನು ದಫನ ಮಾಡುವ ದಫನ ಭೂಮಿಯನ್ನಾಗಿ ಮಾಡುತ್ತಿದ್ದಾರೆ.
 ಹಜ್ಜಿನ್‌ನಲ್ಲಿ ಮೂವರನ್ನು ಕೊಲ್ಲಲಾಗಿತ್ತು. ಸತ್ತವರು ಪಾಕಿಸ್ತಾನದ ಲಷ್ಕರ್ ಇ ತೋಬ್ಬಾದ ಉಗ್ರರು ಎಂದು ಪೊಲೀಸರು ಹೇಳುತ್ತಾರೆ. ಆದರೆ ಬರಿಯಾನ ಗ್ರಾಮಸ್ಥರು ಇದನ್ನು ಒಪ್ಪಲು ತಯಾರಿಲ್ಲ. ‘‘ ನಾವು ಅವರನ್ನು ಉಗ್ರರೆಂದು ಹೇಳುವುದು ಹೇಗೆ. ಅವರೆಲ್ಲ ನಾಗರಿಕರು ಇರಬಹುದು. ಪೊಲೀಸರು ಅದು ಯಾರ ಮೃತದೇಹಗಳೆಂದು ಸ್ಪಷ್ಟಪಡಿಸಬೇಕು. ಪೊಲೀಸರು ನಮ್ಮ ದಫನ ಭೂಮಿಯಲ್ಲಿ ಹಲವು ಮೃತದೇಹಗಳನ್ನು ದಫನ ಮಾಡಿದ್ಧಾರೆ. ಅವೆಲ್ಲವೂ ಉಗ್ರರ ಮೃತದೇಹಗಳೆಂದು ನಮಗೆ ಹೇಳಿದ್ದಾರೆ, ಆದರೆ ಈ ಬಾರಿ ನಾವು ಅವುಗಳು ಯಾರ ಮೃತದೇಹಗಳೆಂದು ತಿಳಿಯಲು ಬಯಸಿದ್ದೆವು. ಯಾರಾ ಮೃತದೇಹಗಳೆಂದು ಗೊತ್ತಾಗದೆ ಇನ್ನು ಯಾವುದೇ ಅಪರಿಚಿತ ಮೃತದೇಹಗಳನ್ನು ದಫನ ಮಾಡಲು ನಾವು ಅವಕಾಶ ನೀಡುವುದಿಲ್ಲ’’ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News