×
Ad

ವಿಟ್ಲ : ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ,ನೇತಾರರ ಅನುಸ್ಮರಣಾ ಸಮ್ಮೇಳನ

Update: 2016-02-09 20:23 IST

ವಿಟ್ಲ : ಎಸ್ಕೆಎಸ್ಸೆಸ್ಸೆಫ್ ಆಲಡ್ಕ-ಪಾಣೆಮಂಗಳೂರು ಶಾಖಾ ಅಧೀನದಲ್ಲಿ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಇದರ ನೂತನ ಕಛೇರಿ ಉದ್ಘಾಟನಾ ಸಮಾರಂಭ, ಶಂಸುಲ್ ಉಲಮಾ ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಹಾಗೂ ಬುರ್‌ದಾ ಮಜ್ಲಿಸ್ ಕಾರ್ಯಕ್ರಮವು ಆಲಡ್ಕ ಶಂಸುಲ್ ಉಲಮಾ ನಗರದ ಮರ್‌ಹೂಂ ಶೈಖುನಾ ಸಜಿಪ ಉಸ್ತಾದ್ ವೇದಿಕೆಯಲ್ಲಿ ಭಾನುವಾರ ನಡೆಯಿತು.
    ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಕಛೇರಿ ಉದ್ಘಾಟಿಸಿದರು. ಸಯ್ಯಿದ್ ಹಾದಿ ತಂಙಳ್ ಅಲ್-ಮಶ್‌ಹೂರ್ ಮೊಗ್ರಾಲ್ ದುವಾ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್ ಶಾಖಾಧ್ಯಕ್ಷ ಅಬ್ದುಲ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಸಜಿಪ ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ಫಾಕ್ ಫೈಝಿ ಅನುಸ್ಮರಣಾ ಭಾಷಣಗೈದರು.
    ಮುಖ್ಯ ಅತಿಥಿಗಳಾಗಿ ಹಾಜಿ ಜಿ. ಅಬೂಬಕ್ಕರ್ ಗೋಳ್ತಮಜಲು, ಹಾಜಿ ಕೆ.ಎಸ್. ಇಸ್ಮಾಯಿಲ್ ಕಲ್ಲಡ್ಕ, ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ನೆಹರುನಗರ, ಅಬೂಬಕ್ಕರ್ ಸಿದ್ದೀಕ್ ಗುಡ್ಡೆಅಂಗಡಿ, ಮುಹಮ್ಮದ್ ಹನೀಫ್ ಮೆಲ್ಕಾರ್, ಹಾಜಿ ಎಚ್.ಎಸ್. ಉಸ್ಮಾನ್ ಪಾಣೆಮಂಗಳೂರು, ಪಿ.ಎಂ. ಅಹ್ಮದ್ ಬಾವಾ ಯಾಸೀನ್, ಖಾದರ್ ಮಾಸ್ಟರ್ ಬಂಟ್ವಾಳ, ಅಬ್ದುಲ್ ರವೂಫ್ ನಂದಾವರ ಮೊದಲಾದವರು ಭಾಗವಹಿಸಿದ್ದರು.
    ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಶಾಖಾ ಉಪಾಧ್ಯಕ್ಷರಾದ ಪಿ.ಬಿ. ಹಾಮದ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಕಾರ್ಯದರ್ಶಿ ಮುಹಮ್ಮದ್ ಸ್ವಾದಿಖ್ ಗುಡ್ಡೆಅಂಗಡಿ, ಮುಹಮ್ಮದ್ ಹನೀಫ್ ಹಾಸ್ಕೋ, ಖಲೀಲ್ ದಾರಿಮಿ, ಶುಕೂರ್ ದಾರಿಮಿ, ಅಬೂಬಕ್ಕರ್ ಎನ್.ಬಿ. ಮೊದಲಾದವರು ಉಪಸ್ಥಿತರಿದ್ದರು. ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಅಝೀರ್ ಪಿ.ಐ. ಧ್ವಜಾರೋಹಣಗೈದರು. ಅಬ್ದುಲ್ ಬಶೀರ್ ಅರ್ಹರಿ ಸ್ವಾಗತಿಸಿ, ಅಬ್ದುಲ್ ಅಝೀರ್ ನಂದಾವರ ಕಿರಾಅತ್ ಪಠಿಸಿದರು. ಮುಹಮ್ಮದ್ ಶಫೀಕ್ ಆಲಡ್ಕ ವಂದಿಸಿದರು. ಶಹೀದ್ ಗುಡ್ಡೆಅಂಗಡಿ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೋಡಾರ್ ಶಂ-ಎ-ಮದೀನಾ ಬುರ್‌ದಾ ತಂಡದಿಂದ ಬುರ್‌ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News