×
Ad

ದಲಿತರು ರಾಜಕೀಯ ಶಕ್ತಿಯಾಗುವುದು ಅಗತ್ಯ: ಜಯನ್ ಮಲ್ಪೆ

Update: 2016-02-09 23:48 IST


ಬ್ರಹ್ಮಾವರ, ಫೆ.9: ಕೇವಲ ಓಟು ಬ್ಯಾಂಕಿಗಾಗಿ ದಲಿತ ಸಮಾಜ, ಸಂಘಟನೆ ಹಾಗೂ ಸಂಘ ಸಂಸ್ಥೆ ಗಳನು ್ನದುರುಪಯೋಗಪಡಿಸಿಕೊಳ್ಳುವ ರಾಜಕೀಯ ಪಕ್ಷಗಳ ವಿರುದ್ಧ್ದ ದಲಿತರು ಭಿನ್ನಾಭಿಪ್ರಾಯ ಮರೆತು ರಾಜಕೀಯ ಶಕ್ತಿಯಾಗಬೇಕೆಂದು ದಲಿತ ಚಿಂತಕ ಜಯನ್ ಮಲ್ಪೆಕರೆ ನೀಡಿದ್ದಾರೆ.
 ಬ್ರಹ್ಮಾವರದ ಅಂಬೇಡ್ಕರ್ ಭವನದಲ್ಲಿ ರವಿವಾರ ಜಿಲ್ಲಾ ದಲಿತ ಸಂಘರ್ಷ ಸಮಿತಿ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಈವರೆಗೆ ಜಿಲ್ಲೆಯ ದಲಿತರ ಸಾಮಾಜಿಕ ಅಭಿವೃದ್ಧಿಗೆ ಯಾವುದೇ ರಾಜಕೀಯ ಪಕ್ಷಗಳು ಸ್ಪಂದಿಸಿಲ್ಲ. ಕೇವಲ ಓಟುಬ್ಯಾಂಕಿಗಾಗಿ ದಲಿತೋದ್ಧಾರದ ಬಗ್ಗೆ ಮಾತನಾಡುತ್ತಾರೆ. ಕಳೆದ 10 ವರ್ಷಗಳಲ್ಲಿ ಒಂದು ತುಂಡು ಭೂಮಿ ಹಂಚಿಲ್ಲ, ಉದ್ಯೋಗದ ಅವಕಾಶ ಕಲ್ಪಿಸಿಲ್ಲ, ಶೇ.21ರ ನಿಧಿ ಎಲ್ಲಾ ಕಡೆ ದುರುಪಯೋಗವಾಗಿದೆ. ಜನಪ್ರತಿನಿಧಿಗಳು ವಿದ್ಯೆ, ಸಂಪತ್ತು, ಅಧಿಕಾರ ಕೆಲವೇ ಜನರ ಕೈಯಲ್ಲಿ ಕೇಂದ್ರೀಕೃತಗೊಳ್ಳುವಂತೆ ಕಾಪಾಡಿಕೊಂಡು ಬರುತ್ತಿದ್ದಾರೆಂದು ಅವರು ಆರೋಪಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಮಂಜುನಾಥ ಗಿಳಿಯಾರು ಮಾತನಾಡಿ, ಕುಮ್ಕಿಹಕ್ಕಿನ ಬಗ್ಗೆ ಕೋರ್ಟ್ ತೀರ್ಪು ಸ್ವಾಗತಾರ್ಹ. ಈ ಭೂಮಿಯನ್ನು ಬಡಜನರಿಗೆ ನೀಡುವ ಕುರಿತು ವ್ಯಾಪಕ ಜನಾಂದೋಲನ ಮಾಡಬೇಕು ಎಂದು ತಿಳಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾ ಪ್ರಧಾನ ಸಂಚಾಲಕ ಶ್ಯಾಮರಾಜ್ ಬಿರ್ತಿ ವಹಿಸಿದ್ದರು. ಪದಾಧಿಕಾರಿಗಳಾದ ಚಂದ್ರಶೇಖರ ಹೆಬ್ರಿ, ವಿಠಲ ತೊಟ್ಟಂ, ರಾಘವ ಕಾರ್ಕಳ, ರಾಜು ಬೆಟ್ಟಿನಮನೆ, ಸಂಜೀವ ತೆಕ್ಕಟ್ಟೆ, ಪ್ರಸಾದ್ ಮಲ್ಪೆ, ಮೋಹನ್ ದಾಸ್, ಚಂದ್ರ ಹಳೆಗೇರಿ, ಸುರೇಶ್ ಬಿರ್ತಿ, ಸುಂದರ, ಶ್ಯಾಮ್‌ಸುಂದರ್ ತೆಕ್ಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News