ಸ್ಕೂಟರ್ ಢಿಕ್ಕಿ: ಬೈಕ್ ಸವಾರ ಗಂಭೀರ
Update: 2016-02-09 23:51 IST
ಮಂಜೇಶ್ವರ, ಫೆ.9: ಸ್ಕೂಟರ್-ಬೈಕ್ ಪರಸ್ಪರ ಢಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ತಲಪಾಡಿ ಕೆ.ಸಿ.ನಗರದ ಮುಹಮ್ಮದ್ ಸಂಶೀರ್ ಎಂಬವರ ಪುತ್ರ ನೌಫಲ್(21)ಗಾಯಗೊಂಡ ಯುವಕ.
ನೌಫಲ್ ಕಾಸರಗೋಡಿನಿಂದ ತಲಪಾಡಿಗೆ ಬೈಕ್‌ನಲ್ಲಿ ಸಂಚರಿಸುತ್ತಿರುವ ಸಂದರ್ಭ ಕುಂಬಳೆ ರೈಲು ನಿಲ್ದಾಣ ರಾಷ್ಟ್ರೀಯ ಹೆದ್ದಾರಿಯಲ್ಲಿ ಢಿಕ್ಕಿ ಸಂಭವಿಸಿ ಅಪಘಾತ ನಡೆದಿದೆ.