×
Ad

ಪುತ್ತೂರು: ವಿವೇಕಾನಂದ ಕಾಲೇಜಿನಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ

Update: 2016-02-09 23:52 IST

ಪುತ್ತೂರು, ಫೆ.9: ಭಾರತದಲ್ಲಿ ಎರಡು ಆರೋಗ್ಯ ನೀತಿಯಿದೆ. ಆದರೆ ದೇಶವೊಂದರಲ್ಲಿ ಎರಡೆರಡು ನೀತಿಗಳಿರುವುದು ಸ್ವಾಗತಾರ್ಹವಲ್ಲ. ಈ ಹಿನ್ನೆಲೆಯಲ್ಲಿ ಅನೇಕ ಚರ್ಚೆಗಳು ನಡೆಯುತ್ತಿವೆ ಎಂದು ಮಹಾರಾಷ್ಟ್ರ ಅಸೋಸಿಯೇಶನ್ ಆಫ್ ಆಂಥ್ರಾಪಾಲೊಜಿಕಲ್ ಸಯನ್ಸಸ್‌ನ(ಎಸ್‌ಐಎಂಎ) ಅಧ್ಯಕ್ಷ ಪ್ರೊ.ಆರ್.ಕೆ.ಮುಟತ್ಕರ್ ಹೇಳಿದರು.

ಅವರು ಇಲ್ಲಿನ ವಿವೇಕಾನಂದ ಕಾಲೇಜಿನಲ್ಲಿ ಮೈಸೂರಿನ ಸೊಸೈಟಿ ಫಾರ್ ಇಂಡಿಯನ್ ಮೆಡಿಕಲ್ ಆಂಥ್ರಾಪಾಲಜಿ, ವಿವೇಕಾನಂದ ಸಂಶೋಧನಾ ಕೇಂದ್ರ, ಕಾಲೇಜಿನ ಅರ್ಥಶಾಸ್ತ್ರ, ಜೀವಶಾಸ್ತ್ರ, ಸಸ್ಯಶಾಸ್ತ್ರ ವಿಭಾಗಗಳಲ್ಲದೆ ಅನ್ಯ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಲಾದ ನಾಟಿ ವೈದ್ಯಶಾಸ್ತ್ರದ ಬಗೆಗಿನ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣದ ಉದ್ಘಾಟನಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿವೇಕಾನಂದ ಕಾಲೇಜಿನ ಸ್ಥಾಪಕ ಸಂಚಾಲಕ ಕೆ.ರಾಮ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪಿ.ಎಸ್.ವೆಂಕಟ್ರಾಮ ದೈತೋಟ ರಚಿಸಿದ ‘ಔಷಧೀಯ ಸಸ್ಯ ಸಂಪತ್ತು’ ಹಾಗೂ ವಿ.ವಿ.ಭಟ್ ಅನುವಾದಿಸಿದ ‘ಅಡಿಕೆ ಔಷಧ’ ಎಂಬ ಕೃತಿಗಳನ್ನು ಕ್ಯಾಂಪ್ಕೊ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ನಾಟಿ ಶಾಸ್ತ್ರದ ಬಗೆಗೆ ಕೃತಿ ರಚಿಸಿದ ಪಿ.ಎಸ್.ವೆಂಕಟ್ರಾಮ ದೈತೋಟರಿಗೆ ‘ಸ್ವಾಸ್ಥ ಸೇವಾ ರತ್ನ’ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು. ಔಷಧೀಯ ಸಸ್ಯಸಂಪತ್ತು ಕೃತಿ ಪ್ರಕಟನೆಯಲ್ಲಿ ಸಹಕರಿಸಿದ ಪ್ರೊ.ಶಂಕರ ಭಟ್ ಹಾಗೂ ಡಾ.ಸತ್ಯನಾರಾಯಣ ಭಟ್‌ರನ್ನು ಗೌರವಿಸಲಾಯಿತು. ವೇದಿಕೆಯಲ್ಲಿ ಎಸ್‌ಐಎಂಎಯ ಮುಖ್ಯ ಕಾರ್ಯದರ್ಶಿ ಡಾ.ಎಚ್.ಕೆ.ಭಟ್, ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಪಿ.ಶ್ರೀನಿವಾಸ ಪೈ, ಕಾಲೇಜಿನ ಪ್ರಾಚಾರ್ಯ ಡಾ.ಪೀಟರ್ ವಿಲ್ಸನ್ ಪ್ರಭಾಕರ್ ಉಪಸ್ಥಿತರಿದ್ದರು.

 ವಿವೇಕಾನಂದ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ವಿಘ್ನೇಶ್ವರ ವರ್ಮುಡಿ ಪ್ರಸ್ತಾವನೆಗೈದು, ಸ್ವಾಗತಿಸಿದರು. ಸಂಶೋಧನಾ ಕೇಂದ್ರದ ಕಾರ್ಯಾಧ್ಯಕ್ಷ ವಿ.ವಿ.ಭಟ್ ವಿಚಾರ ಸಂಕಿರಣದ ವಸ್ತು-ವಿಷಯದ ಬಗ್ಗೆ ಮಾಹಿತಿ ನೀಡಿದರು. ಎಸ್‌ಐಎಂಎಯ ಉಪಾಧ್ಯಕ್ಷ ಡಾ.ಎಸ್.ಬಿ.ಕೊನಲೆ ವಂದಿಸಿದರು. ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಶ್ರೀಕೃಷ್ಣ ಗಣರಾಜ ಭಟ್ ಕಾರ್ಯಕ್ರಮ ನಿರ್ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News