×
Ad

ಬೈದಶ್ರೀ ತಂಡಕ್ಕೆ ‘ಆದರ್ಶ್ ಫ್ರೆಂಡ್ಸ್ ಟ್ರೋಫಿ’

Update: 2016-02-09 23:54 IST
Editor : ಉಡುಪಿ



ಉಡುಪಿ, ಫೆ.9: ಕಾಡಬೆಟ್ಟು ಆದರ್ಶ್ ಫ್ರೆಂಡ್ಸ್ ಎಸೋಸಿಯೇಶನ್ ಆಶ್ರಯದಲ್ಲಿ ಉಡುಪಿ ಕ್ರಿಶ್ಚಿಯನ್ ಹೈಸ್ಕೂಲ್ ಮೈದಾನದಲ್ಲಿ ಇತ್ತೀಚೆಗೆ ಜರಗಿದ ವಾಲಿಬಾಲ್ ಪಂದ್ಯಾಟದಲ್ಲಿ ಬೈದಶ್ರೀ ಕಟ್ಟೆಗುಡ್ಡೆ ಪ್ರಥಮ ಹಾಗೂ ವಿಷ್ಣುಮೂರ್ತಿ ಫ್ರೆಂಡ್ಸ್ ನಿಟ್ಟೂರು ದ್ವಿತೀಯ ಪ್ರಶಸ್ತಿ ಗೆದ್ದುಕೊಂಡಿತು. ಸಮಾರೋಪ ಸಮಾರಂಭದಲ್ಲಿ ಉಡುಪಿ ನಗರಸಭಾ ಸದಸ್ಯ ವಿಜಯ ಪೂಜಾರಿ ಬೈಲೂರು ವಿಜೇತರಿಗೆ ಬಹುಮಾನ ವಿತರಿಸಿದರು. ಪಂದ್ಯಾಟವನ್ನು ಗುತ್ತಿಗೆದಾರ ಶಿವಪ್ರಸಾದ್ ಉದ್ಘಾಟಿಸಿದರು. ಆದರ್ಶ್ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಎ.ಜೆ. ಕಾಡಬೆಟ್ಟು ಅಧ್ಯಕ್ಷತೆ ವಹಿಸಿದ್ದರು. ಕ್ರೀಡಾಕೂಟದ ರೆಫ್ರಿಯಾಗಿ ಜಯ ಹಾಗೂ ರೋಶನ್ ಪಿಂಟೊ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಹರೀಶ್ ಸೇರಿಗಾರ್ ನಿಟ್ಟೂರು, ಸುಧಾಕರ ಸೇರಿಗಾರ್

Writer - ಉಡುಪಿ

contributor

Editor - ಉಡುಪಿ

contributor

Similar News