ಮೇಲಂಗಡಿಯಲ್ಲಿ ಬುರ್ದಾ ಮಜ್ಲಿಸ್

Update: 2016-02-09 18:27 GMT


ಉಳ್ಳಾಲ, ಫೆ.9: ಮೇಲಂಗಡಿ ಎಸ್ಸೆಸ್ಸೆಫ್ ಶಾಖೆಯ ವತಿಯಿಂದ ಮೇಲಂಗಡಿ ತಾಜುಲ್ ಉಲಮಾ ನಗರದಲ್ಲಿ ತಾಜುಲ್ ಉಲಮಾ ಅನುಸ್ಮರಣೆ, ಬುರ್ದಾ ಮಜ್ಲಿಸ್ ಹಾಗೂ ಮತ ಪ್ರಭಾಷಣ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
ಉಳ್ಳಾಲ ಖಾಝಿ ಅಸ್ಸೈ ಯದ್ ಹಾಮಿದ್ ಫಝ ಕೋಯಮ್ಮ ತಂಙಳ್ ಅಲ್ ಬುಖಾರಿ ನೇತೃತ್ವ ವಹಿಸಿದ್ದರು. ಖುತುಬುಝ್ಝಮಾನ್ ಬುರ್ದಾ ಇಖ್ವಾನ್ ತಂಡದಿಂದ ಮುಹಿಯುದ್ದೀನ್ ಮಾಲೆ ಆಲಾಪನೆ, ಅಲ್ ಹಾಫಿಳ್ ಸ್ವಾದಿಖ್ ಅಲಿ ಫಾಳ್‌ಲಿ ಗೂಡಲ್ಲೂರು ಸಿಂಗಾಪುರ ತಂಡದಿಂದ ಬುರ್ದಾ ಮಜ್ಲಿಸ್ ನೆರವೇರಿತು. ತಾಜುಲ್ ಉಲಮಾರ ಹಿರಿಯ ಪುತ್ರ ಅಸ್ಸೈಯ್ಯದ್ ಹಾಮಿದ್ ಇಂಬಿಚ್ಚಿ ಕೋಯ ತಂಙಳ್ ಮದನಿ ಅಲ್‌ಬುಖಾರಿ ದುಆ ನೆರವೇರಿಸಿದರು. ಉಳ್ಳಾಲ ದರ್ಗಾದ ಅಧ್ಯಕ್ಷ ಯು.ಎಸ್.ಹಂಝ ಹಾಜಿ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಚಿವ ಯು.ಟಿ.ಖಾದರ್, ಮುಸ್ತಫಾ ಮದನಿ, ಪೇಟೆ ಮಸೀದಿಯ ಇಮಾಮ್ ಮುಹಮ್ಮದ್ ಹನೀಫ್ ಮದನಿ, ಉಸ್ಮಾನ್ ಸಖಾಫಿ ಪೊಳಲಿ, ಜಲಾಲ್ ಮದನಿ ಕೈಕೊ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಅಬ್ದುಸ್ಸಮದ್ ಅಹ್ಸನಿ, ಪ್ರಧಾನ ಕಾರ್ಯದರ್ಶಿ ಸಯ್ಯಿದ್ ಖುಬೈಬ್ ತಂಙಳ್, ಸಲೀಮ್ ಸಅದಿ, ನವಾಝ್ ಸಖಾಫಿ, ಅಬ್ದುಲ್ ಕರೀಂ ಹಾಜಿ, ಯು.ಎ. ಹುಸೈನ್ ಮೋನು, ಮಾಸ್ಟರ್ ಶಿಹಾನ್ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದ ಅಂಗವಾಗಿ ಆರು ದಿನಗಳ ಕಾಲ ವಿವಿಧ ವಿಷಯಗಳಲ್ಲಿ ಮತಪ್ರವಚನ ನಡೆಯಿತು.
ಎಸ್ಸೆಸ್ಸೆಫ್ ಮೇಲಂಗಡಿ ಅಧ್ಯಕ್ಷ ಹಾಫಿಝ್ ಝೈನುಲ್ ಆಬಿದೀನ್ ಸಖಾಫಿ ಸ್ವಾಗತಿಸಿದರು. ಮುಸ್ತಫಾ ಮಾಸ್ಟರ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News