ದಿಲ್ಲಿಗೆ ಸಾಧ್ಯವಿದ್ದರೆ..ನಮಗ್ಯಾಕ್ಕಿಲ್ಲ..? ತೆಲಂಗಾಣ ಶಾಸಕರಿಂದ ವೇತನವನ್ನು 3ಲಕ್ಷ ರೂ.ಗೆ ಏರಿಸಲು ಆಗ್ರಹ...!

Update: 2016-02-10 09:05 GMT


ಹೊಸದಿಲ್ಲಿ, ಫೆ.10: ತೆಲಂಗಾನದ ಶಾಸಕರು ತಮಗೆ ಈಗ ಇರುವ ತಿಂಗಳ ವೇತನವನ್ನು 95 ಸಾವಿರ ರೂ.ಗಳಿಂದ 3 ಲಕ್ಷ ರೂ.ಗೆ ಏರಿಸುವಂತೆ ಆಗ್ರಹಿಸಿದ್ದಾರೆ.
ಆನೇಕ ಮಂದಿ ಎಂಎಲ್‌ಎ ಮತ್ತು ಎಂಎಲ್‌ಸಿಗಳು ಮುಖ್ಯ ಮಂತ್ರಿ ಚಂದ್ರಶೇಖರ್ ರಾವ್ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಮುಖ್ಯ ಮಂತ್ರಿ ಚಂದ್ರಶೇಖರ ರಾವ್ ಅಧ್ಯಕ್ಷತೆಯಲ್ಲಿ  ಮಂಗಳವಾರ ನಡೆದ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಗೊಂಡಿದೆ. ತೆಲಂಗಾನದ ಶಾಸಕರು ಪ್ರಸ್ತುತ 95 ಸಾವಿರ ರೂ. ಮಾಸಿಕ ವೇತನ ಪಡೆಯುತ್ತಿದ್ದಾರೆ. ಕ್ಯಾಬಿನೆಟ್ ಶ್ರೇಣಿ ಹೊಂದಿರುವವರಿಗೆ ಇದರ ದುಪ್ಪಟ್ಟು ವೇತನ ದೊರೆಯುತ್ತಿವೆ. ಮನೆ ಖರ್ಚು, ಸಿಬ್ಬಂದಿಗಳಿಗೆ ವೇತನ, ಸಹಾಯಧನ ನೀಡಿಕೆ, ಬೇರೆ ಬೇರೆ ವ್ಯಕ್ತಿಗಳ ಭೇಟಿ, ಕ್ಷೇತ್ರದಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಈಗ ದೊರೆಯುವ ವೇತನ ಸಾಕಾಗುತ್ತಿಲ್ಲ. ಈ ಕಾರಣದಿಂದ ತಿಂಗಳ ವೇತನವನ್ನು 3 ಲಕ್ಷ ರೂಗಳಿಗೆ ಏರಿಕೆ ಮಾಡಬೇಕು.ದಿಲ್ಲಿಯಲ್ಲಿ ಶಾಸಕರ ವೇತನವನ್ನು 4 ಲಕ್ಷ ರೂ.ಗಳಿಗೆ ಏರಿಸಲು ಸಾಧ್ಯವಿದ್ದರೆ ನಮಗೆ ಇಲ್ಲಿ ಯಾಕೆ ಸಾಧ್ಯವಿಲ್ಲ ಎಂದು ತೆಲಂಗಾನದ ಶಾಸಕರು ಮುಖ್ಯ ಮಂತ್ರಿ ಮಂದೆ ಪ್ರಶ್ನೆ ಎತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News