×
Ad

ಹೊಸಂಗಡಿ: ಸಾರ್ವಜನಿಕ ಶನಿಪೂಜೆ - ಸನ್ಮಾನ ಕಾರ್ಯಕ್ರಮ

Update: 2016-02-11 17:45 IST

ಸಾರ್ವಜನಿಕ ಶನಿಪೂಜೆ - ಸನ್ಮಾನ ಮಾರೂರು ಹೊಸಂಗಡಿ ಕೃಷ್ಣ ಗೆಳೆಯರ ಬಳಗ, ಪಾರಿಜಾತ ಮಹಿಳಾ ಭಜನಾ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ ನಾಲ್ಕನೇ ವರ್ಷದ ಸಾರ್ವಜನಿಕ ಶನೀಶ್ವರ ಪೂಜೆಯು ಶನಿವಾರ ಗೋಪಿನಾಥ ದೇವಸ್ಥಾನದ ಪೂಜಾ ಕಟ್ಟೆಯಲ್ಲಿ ನಡೆಯಿತು. ಬಳಿಕ ನಡೆದ ಧಾರ್ಮಿಕ ಸಭೆಯಲ್ಲಿ ಶ್ರೀ ಕ್ಷೇತ್ರ ಕರಿಂಜೆಯ ಶ್ರೀ ಶ್ರೀ ಮುಕ್ತಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದ್ದರು. ಭಜರಂಗದಳದ ರಾಜ್ಯ ಸಂಚಾಲಕ ಶರಣ್ ಪಂಪ್‌ವೆಲ್ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಭಜರಂಗದಳ ಮೂಡುಬಿದಿರೆ ಪ್ರಖಂಡ ಸಂಚಾಲಕ ಸೋಮನಾಥ ಕೋಟ್ಯಾನ್ ಭಾಗವಹಿಸಿದರು.

ಇದೇ ಸಂಧರ್ಭದಲ್ಲಿ ಉದ್ಯಮಿ ಸಂತೋಷ್‌ಕುಮಾರ್, ರಾಷ್ಟ್ರ ಪ್ರಶಸ್ತಿ ವಿಜೇತ ಪಂಚಮಿ ಮಾರೂರು ಅವರನ್ನು ಗೌರವಿಸಲಾಯಿತು. ಸಮಿತಿಯ ಅಧ್ಯಕ್ಷ ಧನಂಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News