×
Ad

ಬಿಜೆಪಿಯ ಕಪಟ ನಾಟಕ, ಪೊಲ್ಲು ಭರವಸೆಗಳನ್ನು ನೀಡುತ್ತಾ ಜನರ ಮನವೊಲಿಸಲು ಪ್ರತ್ನಿಸುತ್ತಿದೆ: ಅಭಯ ಚಂದ್ರ ಜೈನ್

Update: 2016-02-11 18:17 IST

ಕಟೀಲು, ಫೆ.11: ಬಿಜೆಪಿಯ ಕಪಟ ನಾಟಕ, ಪೊಲ್ಲು ಭರವಸೆಗಳನ್ನು ನೀಡುತ್ತಾ ಜನರ ಮನವೊಲಿಸಲು ಪ್ರತ್ನಿಸುತ್ತಿದ್ದು, ಜನತೆ ನಂಬುವ ಅವಶ್ಯಕತೆ ಇಲ್ಲ ಎಂದು ಮುಲ್ಕಿ ಮೂಡಬಿದ್ರೆ ಶಾಸಕ; ಯುವಜನ ಸೇವೆ, ಕ್ರೀಡೆ, ಮೀನುಗಾರಿಕಾ ಸಚಿವ ಅಭಯ ಚಂದ್ರ ಜೈನ್ ತಿಳಿಸಿದರು.

  ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಿಮಿತ್ತ ಕಟೀಲಿನಲ್ಲಿ ಗುರವಾರ ನಡೆದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದರು.

  ರಾಜ್ಯದಲ್ಲಿ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದರೂ ಕೇಂದ್ರ ಬಿಜೆಪಿ ಸರಕಾರ ಯಾವುದೇ ರೀತಿಯಲ್ಲಿ ತಲೆ ಕೆಡಿಸಿಕೊಂಡಿಲ್ಲ ಎಂದ ಸಚಿವರು, ಯಡಿಯೂರಪ್ಪನವರ ಸರಕಾರದ ವೇಳೆ ಕಳಪೆಗುಣಮಟ್ಟದ ಸೈಕಲ್‌ಗಳನ್ನು ನೀಡಿ ಮಕ್ಕಳನ್ನು ಅಂದಿನ ಬಿಜೆಪಿ ಮುಗ್ಧ ಮಕ್ಕಳನ್ನೂ ಮೋಸ ಮಾಡಿದ್ದರು ಎಂದು ಸಚಿವರು ಟೀಕೆ ಮಾಡಿದರು.

  ಕಾರ್ಯಕರ್ತರು ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರಕಾರ ಕಲ್ಪಿಸಿರುವ ಉಚಿತ ಅಕ್ಕಿ ವಿತರಣೆ, ಗ್ರಾಮೀಣ ಭಾಗದಲ್ಲಾದ ರಸ್ತೆಗಳ ಅಭಿವೃದ್ಧಿ ಸೇರಿದಂತೆ ಉತ್ತಮ ಕಾರ್ಯಗಳನ್ನು ಜನತೆಯ ಮುಂದಿಟ್ಟು ಮತಯಾಚಿಸಿದೆ ಕಾಂಗ್ರೆಸ್‌ನ ಎಲ್ಲಾ ಅಭ್ಯರ್ಥಿಗಳು ಸುಲಭದಲ್ಲಿ ಬಹುಮತಗಳಿಂದ ಆರಿಸಿ ಬರುತ್ತಾರೆ ಎಂದು ಕಾಯ್ಕತ್ರಿಗೆ ಕಿವಿಮಾತು ಹೆಲಿದರು.

  ಸಭೆಯಲ್ಲಿ ಅಬೂಬಕರ್ ಕಾರ್ನಾಡ್, ಗುಣಪಾಲ ಶೆಟ್ಟಿ, ಉಮಾವತಿ, ಜಿಲ್ಲಾ ಪಂಚಾಯತ್ ಅಭ್ಯರ್ಥಿ ಪ್ರಮೋದ್ ಕುಮಾರ್, ಸುಬ್ರಹ್ಮಣ್ಯ ಭಟ್ ಕೋರಿಯಾರ್, ಮೊಣಪ್ಪ ಶೆಟ್ಟಿ ಎಕ್ಕಾರು, ಬಾಳಾದಿತ್ಯ ಆಳ್ವ, ಅಭ್ಯರ್ಥಿ ಶೈಲಾ ಸಿಕ್ವೇರಾ, ಸುಕುಮಾರ್, ಮಾಲತಿ ಶೆಟ್ಟಿ, ಮಯ್ಯದಿ ಗುತ್ತಕಾಡು, ತಿಮ್ಮಪ್ಪ ಕೊಟ್ಯಾನ್, ಸುನಿಲ್ ಸಿಕ್ವೇರಾ, ಕೆ.ಪಿ.ಸಿ.ಸಿ ಕಾರ್ಯದರ್ಶಿ ಗುುರಾಜ್ ಪೂಜಾರಿ, ವಸಂತ್ ಬೆರ್ನಾರ್ಡ್ ಮೊದಲಾದವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News