ದಿನಾಂಕ 12 ರಂದು ಶ್ರೀ ಕೊಂಡೇಲ್ತಾಯ ಸೇವಾ ಸಮಿತಿ ಕೋಡೆಮೂಲ ಇವರ ಅಶ್ರಯದಲ್ಲಿ ವಾರ್ಷಿಕ ಮಹೋತ್ಸವ ಮತ್ತು ಮಹಾ ಪೂಜೆ
Update: 2016-02-11 18:19 IST
ಕಿನ್ನಿಗೋಳಿ, ಫೆ.11: ಶ್ರೀ ಕೊಂಡೇಲ್ತಾಯ ಸೇವಾ ಸಮಿತಿ ಕೋಡೆಮೂಲ ಇವರ ಅಶ್ರಯದಲ್ಲಿ ವಾರ್ಷಿಕ ಮಹೋತ್ಸವ ಮತ್ತು ಮಹಾ ಪೂಜೆ ದಿನಾಂಕ 12 ರಂದು ಶುಕ್ರವಾರ ಶ್ರೀ ಕೊಂಡೇಲ್ತಾಯ ದೈವದ ಸನ್ನಿಧಿಯಲ್ಲಿ ಅಜಾರು ನಾಗರಾಜ ರಾಯರ ಪೌರೋಹಿತ್ಯದಲ್ಲಿ ನಡೆಯಲಿದ್ದು ಬೆಳಿಗ್ಗೆ ಕೊಂಡೆಲ್ತಾಯ ದೇವರಿಗೆ ಕಲಶ ಪೂಜೆ, ಸತ್ಯನಾರಾಯಣ ಪೂಜೆ ಮದ್ಯಾಹ್ನ 1 ಗಂಟೆಗೆ ಅನ್ನಸಂತರ್ಪಣೆ, ಸಂಜೆ 4 ರಿಂದ ಭಜಾನಾ ಕಾರ್ಯಕ್ರಮ, ಸಾಯಂಕಾಲ 5 ರಿಂದ ಚೌತಿ ಹಬ್ಬ, ರಾತ್ರಿ 7 ರಿಂದ ಸಭಾ ಕಾರ್ಯಕ್ರಮ ಜರಗಲಿದೆ ಎಂದು ಶ್ರೀ ಕೊಂಡೆಲ್ತಾಯ ಸೇವಾ ಸಮಿತಿ ಪ್ರಕಟನೆ ತಿಳಿಸಿದೆ.