ಮೂಡಬಿದಿರೆ: ಅಲಂಗಾರು ಗುರುಮಠದಲ್ಲಿ ಸಹಸ್ರ ಮೃತ್ಯುಂಜಯ ಯಜ್ಞ
Update: 2016-02-11 19:04 IST
ಮೂಡಬಿದಿರೆ, ಫೆ.11: ಅಲಂಗಾರು ಶ್ರೀ ಅಯ್ಯ (ನಾಗಲಿಂಗ) ಸ್ವಾಮೀ ಮಠದಲ್ಲಿ ಗುರುವಾರ ಸಹಸ್ರ ಮೃತ್ಯುಂಜಯ ಯಜ್ಞವು ಬ್ರಹ್ಮಶ್ರೀ ವೇ.ಮೂ. ಕೇಶವ ಪುರೋಹಿತರ ಆಚಾರ್ಯತ್ವದಲ್ಲಿ ಜರಗಿತು. ಕ್ಷೇತ್ರದ ವ್ಯವಸ್ಥಾಪಕ ಬಿ. ವಿಶ್ವನಾಥ ಪುರೋಹಿತ, ಬಿ. ಆರ್. ಗುರುಪ್ರಸಾದ್, ಭಕ್ತಾದಿಗಳು ಪಾಲ್ಗೊಂಡಿದ್ದರು. ಶ್ರೀ ಮಠದಲ್ಲಿ ಶುಕ್ರವಾರ ಶ್ರೀ ಗುರುಆರಾಧನಾ ಉತ್ಸವ ನಡೆಯಲಿದೆ.