×
Ad

ಮಂಗಳೂರು: ಫೆ.13 ಕರಾವಳಿ ಕಾಲೇಜುಗಳ ಸಮೂಹದಲ್ಲಿ ಅಂತರ್ ಕಾಲೇಜು ಕ್ರೀಡಾಕೂಟ

Update: 2016-02-11 19:28 IST

 ಮಂಗಳೂರು,ಫೆ.11:ನಗರದ ಪ್ರತ್ಠಿತ ಕರಾವಳಿ ಕಾಲೇಜುಗಳ ಸಮೂಹದಲ್ಲಿ ಅಂತರ್ ಕಾಲೇಜು ಕ್ರೀಡಾಕೂಟವು ಫೆ.13ರಂದು ಮ ಂಗಳ ಕ್ರೀಡಾಂಗಣದಲ್ಲಿ ನಡೆಯಲಿದೆ.

  ಕಾರ್ಯಕ್ರಮದ ಉದ್ಫಾಟನೆಯನ್ನು ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜುಕೇಶನ್ ಟ್ರಸ್ಟ್‌ನ ಸ್ಥಾಪಕಾಧಕ್ಷ ಎಸ್. ಗಣೇಶ್ ರಾವ್ ನೆರವೇರಿಸಲಿದ್ದಾರೆ. ಕಾಲೇಜಿನ ನಿರ್ದೇಶಕಿ ಲತಾ ಜಿ. ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿರುವರು. ಕ್ರೀಡಾಕೂಟದಲ್ಲಿ 100 ಮಿ, 200ಮಿ., 400ಮಿ ಹಾಗೂ 800ಮಿ ,4X   100ರಿಲೆ, ಶಾಟ್‌ಪುಟ್, ಲಾಂಗ್‌ಜಂಪ್, ಹೈಜಂಪ್, ಡಿಸ್ಕ್‌ತ್ರೋ ಮತು ಆಕರ್ಷಕ ಹಗ್ಗ ಜಗ್ಗಾಟ ಸರ್ಧೆ ನಡೆಯಲಿದೆ.

           ಕ್ರೀಡಾಕೂಟದ ಪ್ರತಿಯೊಂದು ಸರ್ಧೆಯ ವಿಜೇತರಿಗೆ ಪ್ರಥಮ, ದೀತಿಯ ಹಾಗೂ ತೃತೀಯ ಬಹುಮಾನವಾಗಿ ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಲಾಗುವುದು, ಹಾಗೂ ಸರ್ಧೆಯಲ್ಲಿ ಸಮಗ್ರ ಪ್ರಥಮ ಪ್ರಶಸ್ತಿ ಮತ್ತು ಸಮಗ್ರ ದ್ವಿತೀಯ ಪ್ರಶಸ್ತಿಯಾಗಿ ಪದಕ ಮತ್ತು ಟ್ರೋಫಿ ನೀಡಿ ಗೌರವಿಸಲಾಗುವುದು. ಸರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಲ್ಲಿ ಅತ್ಯಂತ ಅಧಿಕ ಅಂಕ ಗಳಿಸಿದ ಒಬ್ಬ ವಿದ್ಯಾರ್ಥಿ ಮತ್ತು ಒಬ್ಬಳು ವಿದ್ಯಾರ್ಥಿನಿಗೆ ವೈಯಕ್ತಿಕ ಚಾಂಪಿಯನ್‌ಶಿಪ್ ಪ್ರಶಸ್ತಿಯಾಗಿ ಪದಕ, ಪ್ರಶಸ್ತಿ ಪತ್ರ ಮತ್ತು ನೆನಪಿನ ಕಾಣಿಕೆಯನ್ನು ನೀಡಿ ಗೌರಸಲಾಗುವುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News