ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್ - ಆಳ್ವಾಸ್ ಕಾಲೇಜಿಗೆ ಸಮಗ್ರ ಪ್ರಶಸ್ತಿ
ದಿನಾಂಕ 08.02.2016 ಮತ್ತು 09.02.2016ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ತೆಂಕನಿಡಿಯೂರು ಮತ್ತು ಮಂಗಳೂರು ವಿ.ವಿ. ಜಂಟಿ ಆಶ್ರಯದಲ್ಲಿ ಜರುಗಿದ ಅಂತರ್ ಕಾಲೇಜು ಪವರ್ ಲಿಫ್ಟಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಆಳ್ವಾಸ್ ಕಾಲೇಜು, ಮೂಡುಬಿದ್ರೆ ತಂಡವು ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ತಂಡ ಪ್ರಶಸ್ತಿಯನ್ನು ಪಡೆದು ಸಮಗ್ರ ಪ್ರಶಸ್ತಿಯನ್ನು ಪಡೆದುಕೊಂಡಿತು.
ಆಳ್ವಾಸ್ ಕಾಲೇಜು ಪುರುಷರ ವಿಭಾಗದಲ್ಲಿ ಒಟ್ಟು 53 ಅಂಕ ಸಂಪಾದಿಸಿದರೆ ದ್ವಿತೀಯ ತಂಡ ಪ್ರಶಸ್ತಿ ಪಡೆದ ಅಲೋಶಿಯಸ್ ಕಾಲೇಜು ಮಂಗಳೂರು 18 ಅಂಕವನ್ನು ಪಡೆಯಿತು. ಮಹಿಳಾ ವಿಭಾಗದಲ್ಲಿ ಆಳ್ವಾಸ್ ಕಾಲೇಜು 54 ಅಂಕ ಪಡೆದರೆ, ದ್ವಿತೀಯ ತಂಡ ಪ್ರಶಸ್ತಿಯನ್ನು 23 ಅಂಕಗಳೊಂದಿಗೆ ಮಂಗಳೂರು ವಿಶ್ವವಿದ್ಯಾನಿಲಯ ಕ್ಯಾಂಪಸ್ ತಂಡ ಪಡೆಯಿತು.
ಪುರುಷರ ವಿಭಾಗದ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಎಸ್.ಡಿ.ಎಂ. ಕಾಲೇಜಿನ ಮಂಜುನಾಥ ಪಡೆದರೆ, ಮಹಿಳಾ ವಿಭಾಗದ ಬೆಸ್ಟ್ ಲಿಫ್ಟರ್ ಪ್ರಶಸ್ತಿಯನ್ನು ಆಳ್ವಾಸ್ ಕಾಲೇಜಿನ ಮೆರಿನಾ ದೇವಿ ಪಡೆದರು. ಮೆರಿನಾ ದೇವಿ ಜನವರಿಯಲ್ಲಿ ಗುಂಟೂರಿನಲ್ಲಿ ಜರುಗಿದ ಅಖಿಲ ಭಾರತ ಅಂತರ್ ವಿ.ವಿ. ಪವರ್ ಲಿಫ್ಟಿಂಗ್‌ನಲ್ಲೂ ಚಿನ್ನದ ಪದಕವನ್ನು ಪಡೆದಿದ್ದರು.