ಉಳ್ಳಾಲ : ಫೆ,14: ಸೌಹಾರ್ದ ರಕ್ತದಾನ ಶಿಬಿರ
Update: 2016-02-11 20:11 IST
ಉಳ್ಳಾಲ. ಫೆ, 11: ಸೋಲಿಡಾರಿಟಿ ಯೂತ್ ಮೂವ್‌ಮೆಂಟ್ ಉಳ್ಳಾಲ ಮತ್ತು ಯೆನಪೋಯ ವೈದ್ಯಕೀಯ ಕಾಲೇಜು ಅಸ್ಪತ್ರೆ ದೇರಳಕಟ್ಟೆ
ಮೆರೀಡಿಯನ್ ಕಾಲೇಜ್ ಅಶ್ರಯದಲ್ಲಿ ಸೌಹಾರ್ದ ರಕ್ತದಾನ ಶಿಬಿರ ಫೆ,14ರಂದು ಬೆಳಗ್ಗೆ 8;30ರಿಂದ ಮಧಾಹ್ನ 1ಗಂಟೆವರೆಗೆ ಉಳ್ಳಾಲ ನಗರ ಸಭೆ ಮೈದಾನಲ್ಲಿ ನಡೆಯಲಿದೆ.
ರಾಜ್ಯ ಅರೋಗ್ಯ ಸಚಿವ ಯು.ಟಿ ಖಾದರ್, ಮೆರೀಡಿಯನ್ ಕಾಲೇಜಿನ ಪ್ರಾಂಶುಪಾಲ ಡಾ.ಜೋಬಿ ಇ.ಸಿ, ಮೊಗವೀರ ಸಂಘದ ಮಾಜಿ ಅಧ್ಯಕ್ಷ ಸದಾನಂದ ಬಂಗೇರ, ಸಮಾಜ ಸೇವಕ ರಾಝಿಕ್ ಉಳ್ಳಾಲ್,ಸೋಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ಅಧಕ್ಷ ಮುಶ್ತಾಕ್ ಪಟ್ಲ ಮುಂತಾದರು ಭಾಗವಹಿಸಲಿದ್ದಾರೆ.