×
Ad

ಬೆಳ್ತಂಗಡಿ: ನಾಮ ಪತ್ರ ಹಿಂಪಡೆಯುವ ಕಾರ್ಯ ಪೂರ್ಣ - ಅಂತಿಮವಾಗಿ 71 ಮಂದಿ ಕಣದಲ್ಲಿ

Update: 2016-02-11 20:15 IST

ಬೆಳ್ತಂಗಡಿ: ತಾಲೂಕು ಪಂಚಾಯತು ಚುನಾವಣೆಯ ನಾಮ ಪತ್ರ ಹಿಂಪಡೆಯುವ ಕಾರ್ಯ ಪೂರ್ಣಗೊಂಡಿದ್ದು ಸಲ್ಲಿಕೆಯಾಗಿದ್ದ 86 ನಾಮಪತ್ರ ಸಲ್ಲಿಕೆಯಾಗಿತ್ತು ಇದರಲ್ಲಿ 15 ಮಂದಿ ನಾಮಪತ್ರ ಹಿಂಪಡೆದುಕೊಂಡಿದ್ದು ಅಂತಿಮವಾಗಿ 71 ಮಂದಿ ಕಣದಲ್ಲಿದ್ದಾರೆ.

      ನಾರಾವಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ರೂಪಲತಾ, ಬಿಜೆಪಿಯಿಂದ ಯಶೋಧ. ಹೊಸಂಗಡಿ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಓಬಯ್ಯ, ಬಿಜೆಪಿಯಿಂದ ಗುರುಪ್ರಸಾದ್. ವೇಣೂರು ಕ್ಷೇತ್ರದಲ್ಲಿ ಬಿಜೆಪಿಯಿಂದ ತಾ.ಪಂ ಸದಸ್ಯ ವಿಜಯಗೌಡ, ಕಾಂಗ್ರೆಸ್‌ನಿಂದ ಸತೀಶ್ ಹೆಗ್ಡೆ, ಅಂಡಿಜೆ ಕ್ಷೇತ್ರದಲ್ಲಿ ಬಿಜೆಪಿಯಿಂದ ತಾ.ಪಂ ಸದಸ್ಯ ಸುಧೀರ್ ಸುವರ್ಣ, ಕಾಂಗ್ರೆಸ್‌ನಿಂದ ಶುಭಕರ ಪೂಜಾರಿ, ಸಂಯುಕ್ತ ಜನತಾದಳದಿಂದ ಜೇಮ್ಸ್, ಅಳದಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿನುಷ ಪ್ರಕಾಶ್, ಬಿಜೆಪಿಯಿಂದ ಪುಷ್ಪಾವತಿ ನಿತ್ಯಾನಂದ, ಶಿರ್ಲಾಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಯಶೀಲ, ಬಿಜೆಪಿಯಿಂದ ವೇದಾವತಿ ಗೌಡ, ಪಡಂಗಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸುಶೀಲ, ಬಿಜೆಪಿಯಿಂದ ಉಮಾವತಿ, ಲಾಯಿಲ ಕ್ಷೇತ್ರದಲ್ಲಿ ಬಿಜೆಪಿಯಿಂದ ಸುಧಾಕರ ಕಾಂಗ್ರೆಸ್‌ನಿಂದ ವಸಂತ ಸುವರ್ಣ, ಸಂಯುಕ್ತ ಜನತಾದಳದಿಂದ ಹರಿಶ್ಚಂದ್ರ ತಾಮಣ್ಕರ್, ಪಕ್ಷೇತರ ಅಶ್ರಫ್ ಲಾಯಿಲ. ನಡ ಕ್ಷೇತ್ರದಲ್ಲಿ ಬಿಜೆಪಿಯಿಂದ ವೇದಾವತಿ, ಕಾಂಗ್ರೆಸ್‌ನಿಂದ ಹೇಮಾವತಿ ಗೌಡ, ಮಿತ್ತಬಾಗಿಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಜಯರಾಮ, ಬಿಜೆಪಿಯಿಂದ ಆನಂದ ನಾಯ್ಕ, ಸಿಪಿಐಎಂ ನಿಂದ ಚನಿಯಪ್ಪ, ಉಜಿರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯು.ಹೆಚ್. ಇಬ್ರಾಹಿಂ, ಬಿಜೆಪಿಯಿಂದ ಶಶಿಧರ ಕಲ್ಮಂಜ, ಪಕ್ಷೇತರ ರವಿಕುಮಾರ್, ಮುಂಡಾಜೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪದ್ಮಾವತಿ, ಬಿಜೆಪಿಯಿಂದ ಲೀಲಾವತಿ, ಜನತಾದಳ (ಜಾ) ಅರುಣಕುಮಾರಿ. ನೆರಿಯ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ವಿ.ಟಿ ಸೆಬಾಸ್ಟಿನ್, ಬಿಜೆಪಿಯಿಂದ ಸುಲೋಚನ, ಸಿ.ಪಿ.ಐ.ಎಂ ನಿಂದ ವಸಂತ ನಡ. ಚಾರ್ಮಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಶೋಧರ, ಬಿಜೆಪಿಯಿಂದ ಕೊರಗಪ್ಪಗೌಡ, ಎಸ್.ಡಿ.ಪಿ.ಐ ಯಿಂದ ಹೈದರಾಲಿ, ಸಂಯುಕ್ತ ಜನತಾದಳದಿಂದ ರವಿ ಕೃಷ್ಣ ಬೆಂಡೆ, ಪಕ್ಷೇತರರಾಗಿ ಅಬ್ದುಲ್ ರಹೀಂ, ಆನಂದ ಮುಗೇರ. ಕುವೆಟ್ಟು ಕ್ಷೇತ್ರದಲ್ಲಿ ಬಿಜೆಪಿಯಿಂದ ಪ್ರಭಾಕರ ಶೆಟ್ಟಿ ಉಪ್ಪಡ್ಕ, ಕಾಂಗ್ರೆಸ್‌ನಿಂದ ಗೋಪಿನಾಧ ನಾಯಕ್, ಎಸ್‌ಡಿಪಿಐ ಯಿಂದ ಅಬ್ದುಲ್ ರಝಾಕ್, ಮಾಲಾಡಿ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪದ್ಮನಾಭ ಸಾಲಿಯಾನ್, ಬಿಜೆಪಿಯಿಂದ ಜೋಯಲ್ ಮೆಂಡೋನ್ಸ. ಕಳಿಯ ಕ್ಷೇತ್ರದಿಂದ ಬಿಜೆಪಿಯಿಂದ ದಾಮೋದರ ಗೌಡ, ಕಾಂಗ್ರೆಸ್‌ನಿಂದ ಪ್ರವೀಣ್ ಗೌಡ. ಮಡಂತ್ಯಾರು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಬೇಬಿ ವಸಂತ, ಬಿಜೆಪಿಯಿಂದ ವಸಂತಿ, ಬಾರ್ಯ ಕ್ಷೇತ್ರದಿಂದ ಬಿಜೆಪಿಯಿಂದ ಹೇಮಾವತಿ, ಕಾಂಗ್ರೆಸ್‌ನಿಂದ ಸುಜಾತ ಎನ್.ರೈ, ಉರುವಾಲು ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಹೇಮಲತಾ, ಬಿಜೆಪಿಯಿಂದ ಅಮಿತಾ ಕುಶಾಲಪ್ಪ. ಇಳಂತಿಲ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಮನೋಹರ ಕುಮಾರ್, ಬಿಜೆಪಿಯಿಂದ ಕೃಷ್ಣಯ್ಯ ಆಚಾರ್. ತಣ್ಣೀರು ಪಂತ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ತಾ.ಪಂ ಅಧ್ಯಕ್ಷೆ ಜಯಂತಿ ಪಾಲೇದು. ಕಾಂಗ್ರೆಸ್‌ನಿಂದ ಕೇಶವತಿ, ಎಸ್.ಡಿ.ಪಿ.ಐ ಯಿಂದ ಮರಿಯಮ್ಮ.

ಧರ್ಮಸ್ಥಳದಿಂದ ಹಾಲಿ ಜಿಪಂ ಸದಸ್ಯೆ, ಮಾಜಿ ಉಪಾಧ್ಯಕ್ಷೆ ಧನಲಕ್ಷ್ಮೀ ಜನಾರ್ಧನ್, ಕಾಂಗ್ರೆಸ್‌ನಿಂದ ಸುರೇಖ, ಸಿಪಿಐಎಂ ನಿಂದ ವೇದಾವತಿ ಹಾಗೂ ಪಕ್ಷೇತರರಾಗಿ ಸುನಿತ. ಕೊಕ್ಕಡ ಕ್ಷೇತ್ರದಿಂದ ಬಿಜೆಪಿಯಿಂದ ಲಕ್ಷ್ಮೀನಾರಾಯಣ. ಕಾಂಗ್ರೆಸ್‌ನಿಂದ ದಯಾನಂದ ಬೆಳಾಲು. ಸಿಪಿಐಎಂ ನಿಂದ ಮಹಮ್ಮದ್ ಅನಸ್. ಕಳೆಂಜ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಯಶೋಧ, ಬಿಜೆಪಿಯಿಂದ ಸುಶೀಲ. ಸಿಪಿಐಎಂ ನಿಂದ ದೇವಕಿ. ಅರಸಿನಮಕ್ಕಿ ಕ್ಷೇತ್ರದಲ್ಲಿ ಬಿಜೆಪಿಯಿಂದ ಬೇಬಿ ರಾಣ್ಯ, ಕಾಂಗ್ರೆಸ್‌ನಿಂದ ದಿವ್ಯಜ್ಯೋತಿ, ಸಿಪಿಐಎಂ ನಿಂದ ಮಮತ ಅಭ್ಯರ್ಥಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News