ಪರ ಧರ್ಮ ಸಹಿಘ್ಣತೆ ಇಸ್ಲಾಮಿನ ಅಡಿಗಲ್ಲು::ಸಮಸ್ತ ಸಮ್ಮೇಳನ
ಆಲಪ್ಪುಝ-ಪರ ದರ್ಮ ಸಹಿಘ್ಣತೆಯು ಇಸ್ಲಾಮಿನ ಅಡಿಗಲ್ಲಾಗಿದೆಯೆಂದು ಸಮಸ್ತ ಕೇರಳ ಜಂಯ್ಯತುಲ್ ಉಲಮಾದ 90ನೇ ವಾರ್ಷಿಕೋತ್ಸವ ಸಮ್ಮೇಳನದ ನಮ್ಮ ಧರ್ಮವೆಂಬ ಅದ್ಯಯನ ಶಿಬಿರವು ಘೋಷಿಸಿತು ಮೂರು ವಿಷಯದಲ್ಲಿ ನಡೆದ ಅದ್ಯಯನ ಶಿಬಿರದಲ್ಲಿ ಇಸ್ಲಾಂ ಏನು ಹೇಳುತ್ತದೆ ಎಂಬ ವಿಷಯದಲ್ಲಿ ಸಲಾಂ ಫೈಝಿ ವಳವಟ್ಟೂರ್ ಇಸ್ಲಾಂ ಮತ್ತು ಉಗ್ರವಾದವೆಂಬ ವಿಷಯದಲ್ಲಿ ನಾಸಿರ್ ಫೈಝಿ ಕೂಡತ್ತಾಯಿ ಮತ್ತು ಇಸ್ಲಾಂನಲ್ಲಿ ಹಣಕಾಸು ವ್ಯವಹಾರವೆಂಬ ವಿಷಯದಲ್ಲಿ ರಫೀಖ್ ಫೈಝಿ ಪೆರಾಂಬ್ರಾರವರು ಉಪನ್ಯಾಸ ಕೋಟ್ಟರು ಇಸ್ಲಾಮನ್ನು ನಿರ್ನಾಮಗೋಳಿಸಲು ಯಾರು ಏನೇ ಯತ್ನಿಸಿದರೂ ದಿನದಿಂದ ದಿನಕ್ಕೆ ಇಸ್ಲಾಂ ಸ್ವೀಕರಿಸುವವರ ಸಂಖೈ ಹೆಚ್ಚುತ್ತಲೇಯಿದೆಯೆಂದು ತನ್ನ ಸ್ವಾಗತ ಭಾಷಣದಲ್ಲಿ ಡಾ ಅಬ್ದುಲ್ ಖಾದಿರ್ ಹೇಳಿದರು ಟೀಕೆ ಆಕ್ಷೇಪಗಳಿಗೆ ಸಹಿಘ್ಣತೆಯಿಂದ ಉತ್ತರಿಸಬೇಕೆಂದೂ ಇಸ್ಲಾಂ ಮನುಷ್ಯನ ಜೀವನಕ್ಕೆ ಋಜು ಪಧವನ್ನು ತೋರಿಸುತ್ತದೆಯೆಂದೂ ಹಣಕಾಸು ವ್ಯವಹಾರಗಳಲ್ಲಿ ಇಸ್ಲಾಮಿನ ನಿಯಮವಳಿಗಳೂ ಆರ್ಧಿಕ ಸುವ್ಯವಸ್ಧೆಗೆ ಪಕ್ಷವಾಗಿದೆಯೆಂದೂ ಅದ್ಯಯನ ಶಿಬಿರವು ಸಾರಿತು ಅದ್ಯಕ್ಷತೆಯನ್ನು ಎಂ ಎಂ ಮುಹ್ಯುದ್ದೀನ್ ಮುಸ್ಲಿಯಾರ್ ಆಲುವ ವಹಿಸಿದರು ವಿ ವಿ ಪೂಕೋಯ ತಂಗಳ್ ಅಲ್ ಐನ್ರವರನ್ನೋಳಗೋಂಡ ಗಣ್ಯ ಅಧಿತಿಗಳು ಉಪಸ್ಧಿತರಿದ್ದರು.