ಜಮೀಯ್ಯತುಲ್ ಫಲಾಹ್: ‘ಗೆಲುವಿನ ಗುಟ್ಟು’ ಸಮಾರೋಪ
ಮೂಡುಬಿದಿರೆ, ಫೆ.11: ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಹಾಗೂ ಜೆ.ಸಿ.ಐ ಮೂಡುಬಿದಿರೆ ತ್ರಿಭುವನ್ ಇದರ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳಿನಿಂದ ಮೂಡುಬಿದಿರೆ ವಲಯದಲ್ಲಿ ಸುಮಾರು 31 ಪ್ರೌಢ ಶಾಲೆ ಹಾಗೂ 2 ಪದವಿ ಪೂರ್ವ ಕಾಲೇಜುಗಳಲ್ಲಿ ಎಸೆಸೆಲ್ಸಿ ಹಾಗೂ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ತರಬೇತಿ ಶಿಬಿರ ‘ಗೆಲುವಿನ ಗುಟ್ಟು 2016’ ಸರಣಿ ಕಾರ್ಯಕ್ರಮದ ಸಮಾರೋಪ ಸಮಾರಂಭ ಹಾಗೂ ತರಬೇತುದಾರರಿಗೆ ಗೌರವ ಸಮರ್ಪಣೆ ಕಾರ್ಯಕ್ರಮವು ನಡೆಯಿತು.
ಸಚಿವ ಕೆ. ಅಭಯಚಂದ್ರ ಜೈನ್ ತರಬೇತುದಾರರನ್ನು ಸನ್ಮಾನಿಸಿ ಮಾತನಾಡಿದರು. ಮೂಡುಬಿದಿರೆ ಜೈನ್ ಪ್ರೌಢ ಶಾಲಾ ಅಧ್ಯಾಪಕ ಮುನಿರಾಜ್ ರೆಂಜಾಳ ದಿಕ್ಸೂಚಿ ಭಾಷಣ ಮಾಡಿದರು.
ಕೋಶಾಧಿಕಾರಿ ಅಸದುಲ್ಲಾ ಇಸ್ಮಾಯೀಲ್ ಪ್ರಾಸ್ತಾವಿಕವಾಗಿ ಮಾತಾಡಿದರು.ಅತಿಥಿಗಳಾಗಿ ಜಮೀಯತುಲ್ ಫಲಾಹ್ ದ.ಕ ಮತ್ತು ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಗಫೂರ್, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಗೋವಿಂದ ಮಡಿವಾಳ, ಜೆಸಿಐ ಮೂಡುಬಿದಿರೆ ತ್ರಿಭುವನ್ ಅಧ್ಯಕ್ಷೆ ರಶ್ಮಿತಾ ಜೈನ್, ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ. ಥೋಮಸ್, ಜಮೀಯ್ಯತುಲ್ ಫಲಾಹ್ ಸ್ಥಾಪಕ ನಿರ್ದೇಶಕ ಅಬ್ದುರ್ರವೂಫ್ ಉಪಸ್ಥಿತರಿದ್ದರು.
ಮೂಡುಬಿದಿರೆ ರೋಟರಿ ಕ್ಲಬ್, ಬಡವರಿಗಾಗಿ ಹಮ್ಮಿಕೊಂಡಿರುವ ಶೌಚಾಲಯ ನಿರ್ಮಾಣ ಯೋಜನೆಗೆ ಜಮೀಯ್ಯತುಲ್ ಪಲಾಹ್ ಮೂಡುಬಿದಿರೆ ಘಟಕದ ವತಿಯಿಂದ 25,000 ರೂ. ಚೆಕ್‌ನ್ನು ಅಧ್ಯಕ್ಷ ಶೇಖ್ ಅಬ್ದುಲ್ ಗಫೂರ್, ರೋಟರಿ ಕ್ಲಬ್ ಅಧ್ಯಕ್ಷ ಪಿ.ಕೆ.ಥೋಮಸ್‌ರಿಗೆ ಹಸ್ತಾಂತರಿಸಿದರು.
ಜಮೀಯ್ಯತುಲ್ ಫಲಾಹ್ ಮೂಡುಬಿದಿರೆ ಘಟಕದ ಕಾರ್ಯದರ್ಶಿ ಸಲೀಮ್ ಹಂಡೇಲ್ ಸ್ವಾಗತಿಸಿದರು. ರಿಯಾಝ್ ಕಿರಾಅತ್ ಪಠಿಸಿದರು. ಎಂ.ಎಚ್. ಮುಹಮ್ಮದ್ ಶರೀಫ್ ವಂದಿಸಿದರು. ನಯೀಮ್ ಕಾರ್ಯಕ್ರಮ ನಿರೂಪಿಸಿದರು.