×
Ad

ತೊಕ್ಕೊಟ್ಟು ಎಸ್ಸೆಸ್ಸೆಫ್‌ನಿಂದ ಅಕ್ಕಿ ವಿತರಣೆ

Update: 2016-02-11 23:37 IST


ಉಳ್ಳಾಲ, ಫೆ.11: ಸಂಕಷ್ಟದಲ್ಲಿರುವ ಕುಟುಂಬಗಳಿಗೆ ಅನ್ನಾಹಾರ ವಿತರಣೆ ಮಾಡಿ ಸಹಕಾರ ನೀಡಿದವರಿಗೆ ಅಲ್ಲಾಹನ ರಕ್ಷಣೆ ಇದೆ. ಒಪ್ಪೊತ್ತಿನ ಊಟದ ಗತಿಯಿಲ್ಲದ ಕುಟುಂಬಗಳನ್ನು ಗುರುತಿಸಿ ಅಕ್ಕಿ ವಿತರಣೆ ಮಾಡುವುದು ಬಹು ದೊಡ್ಡ ಸೇವೆಯಾಗಿದೆ ಎಂದು ಕರ್ನಾಟಕ ರಾಜ್ಯಎಸ್‌ವೈಎಸ್ ಕಾರ್ಯದರ್ಶಿ ಎಂಎಸ್‌ಎಂ ಅಬ್ದುರ್ರಶೀದ್ ಝೈನಿ ಹೇಳಿದರು. ತೊಕ್ಕೊಟ್ಟು ಎಸ್ಸೆಸ್ಸೆಫ್ ವತಿಯಿಂದ ಸೇವಂತಿ ಗುಡ್ಡೆ ಹಯಾತುಲ್ ಇಸ್ಲಾಂ ಮದ್ರಸ ವಠಾರದಲ್ಲಿ ಸಅದಿಯ ಸಮ್ಮೇಳನದ ಪ್ರಚಾರಾರ್ಥ ಮತ್ತು ಸುಲ್ತಾನುಲ್ ಆರಿಫೀನ್ ಅಹ್ಮದುಲ್ ಕಬೀರ್ ರ್ರಿಫಾಯ್ಯಿಯ ಸ್ಮರಣಾರ್ಥ ಏರ್ಪಡಿಸಿದ ಅಕ್ಕಿ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ವಕ್ಫ್ ಬೋರ್ಡ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ವಹಿಸಿದ್ದರು. ದ.ಕ. ಜಿಲ್ಲಾ ಎಸ್ಸೆಸ್ಸೆಫ್ ಉಪಾಧ್ಯಕ್ಷ ಸಿರಾಜುದ್ದೀನ್ ಸಖಾಫಿ ಕನ್ಯಾನ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಕೆಸಿಎಫ್ ಮಲಝ್ ಕಮಿಟಿ ಪ್ರಧಾನ ಕಾರ್ಯದರ್ಶಿ ಝಮೀರ್, ಎಸ್‌ವೈಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್, ಅಬ್ದುಲ್ ಹಕೀಂ ಮದನಿ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಕೋಶಾಧಿಕಾರಿ ಶಮೀರ್ ಸೇವಂತಿಗುಡ್ಡೆ, ಕಾರ್ಯದರ್ಶಿ ಬಾತಿಷ್ ಮಂಚಿಲ, ಮುಹಮ್ಮದ್ ಮದನಿ, ಅಬೂಬಕರ್ ಜೆಪ್ಪುಉಪಸ್ಥಿತರಿದ್ದರು.
ಇಲ್ಯಾಸ್ ಸಖಾಫಿ ಅಂಬ್ಲಮೊಗರು ಸ್ವಾಗತಿಸಿದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಯು.ಎಸ್. ವಂದಿಸಿದರು. ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ರಿಲೀಫ್ ಸರ್ವಿಸ್ ಅಧ್ಯಕ್ಷ ಅಲ್ತಾಫ್ ಕುಂಪಲ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News