ಕಾರ್ಕಳ : ಹನುಮಂತಪ್ಪ ಕೊಪ್ಪದ್ ಶ್ರದ್ದಾಂಜಲಿ ಸಮರ್ಪಣೆ
Update: 2016-02-12 16:33 IST
ಕಾರ್ಕಳ : ವೀರ ಯೋಧ ಹನುಮಂತಪ್ಪ ಕೊಪ್ಪದ್ ಅವರಿಗೆ ಶ್ರದ್ದಾಂಜಲಿ ಸಮರ್ಪಣೆಯು ಆನೆಕೆರೆ ಹುತಾತ್ಮರ ಸ್ಮಾರಕದ ಬಳಿ ಶುಕ್ರವಾರ ನಡೆಯಿತು.
ಸ್ಥಳೀಯ ಪುರಸಭೆ ಸದಸ್ಯ ಶುಭದ ರಾವ್ ನೇತೃತ್ವದಲ್ಲಿ ಪುರಸಭೆ ಸದಸ್ಯರಾದ ಸುನೀಲ್ ಕೋಟ್ಯಾನ್, ಯೋಗೀಶ್ ಹೆಗ್ಡೆ, ರೋಟರಿ ಕ್ಲಬ್ ಅಧ್ಯಕ್ಷ ಚಂದ್ರಶೇಖರ್ ಹೆಗ್ಡೆ, ಜ್ಯೋತಿ ಯುವಕ ಮಂಡಲ ಅಧ್ಯಕ್ಷ ಸುನಿಲ್ ಕೋಟ್ಯಾನ್, ಉದ್ಯಮಿ ಚಂದ್ರಾಕರ ಕಾಮತ್ ಉಪಸ್ಥಿತರಿದ್ದರು. ಜತೆಗೆ ಸ್ಥಳೀಯರು ಕೂಡಾ ಭಾಗವಹಿಸಿದ್ದರು.