×
Ad

ಸಮಸ್ತ 90ನೇ ಮಹಾ ಸಮ್ಮೇಳನ : ಸಹಸ್ರಾರು ಮಂದಿಯ ಉಪಸ್ಧಿತಿಯಲ್ಲಿ ಸಾಮುಹಿಕ ಸೂರ ಅಲ್ ಕಹ್ಫ್ ಪಾರಾಯಣ

Update: 2016-02-12 16:40 IST

ಆಲಪ್ಪುಝದ ವರಕ್ಕಲ್ ಮುಲ್ಲಕೋಯ ತಂಗಳ್ ನಗರದಲ್ಲಿ ಪ್ರತ್ಯೇಕವಾಗಿ ಸಜ್ಜುಗೊಳಿಸಲಾದ ವಿಶಾಲವಾದ ಸಭಾಂಗಣದಲ್ಲಿ ಸಾಮುಹಿಕ ಸುಭಹ್ ನಮಾಝ್ನ ಬಳಿಕ ಲೋಕ ವಿದ್ವಾಂಸರೂ ಬಹು ಭಾಷಾ ಪಂಡಿತರೂರಾದ ಶೈಖುಲ್ ಜಾಮಿಅಃ ಆಲಿಕುಟ್ಟಿ ಉಸ್ತಾದರ ಪ್ರಾರ್ಧನೆಯೊಂದಿಗೆ ಸೂರ ಅಲ್ ಕಹ್ಫ್ ನ ಸಾಮೂಹಿಕ ಪಾರಾಯಣ ಮತ್ತು ಮಂಕೂಸ್ ಮೌಲಿದಿನ ಪಾರಾಯಣ ನಡೆಯಿತು ತದ ನಂತರ ಝೈನುಲ್ ಉಲಮಾ ಚೆರುಶ್ಶೇರಿ ಉಸ್ತಾದರ ಆರೋಗ್ಯ ಕ್ಷೇಮಕ್ಕಾಗಿ ವಿಶೇಷ ಪ್ರಾರ್ಧನೆ ನಡೆಸಲಾಯಿತು ಪ್ರಸ್ತುತ ಕಾರ್ಯಕ್ರಮದಲ್ಲಿ ಸಮಸ್ತ ಮುಶಾವರಾಂಗರಾದ ಶೈಖುನಾ ಮರಕ್ಕಾರ್ ಮುಸ್ಲಿಯಾರ್ ಆತ್ಮಸಂಸ್ಕರಣೆ ಬಗ್ಗೆ ಉಪನ್ಯಾಸವನ್ನು ನೀಡಿದರು ಮನಷ್ಯನ ಆತ್ಮೀಯ ಸುಖ ಮತ್ತು ಅಲ್ಲಾಹನ ವಿರೋಧಾಜ್ಞೆಗಳ ಕಟ್ಟು ನಿಟ್ಟಿನ ಪಾಲನೆ ಅತ್ಯಗತ್ಯ ಆತ್ಮೀಯ ಶುದ್ದೀಕರಣದಿಂದ ಮಾತ್ರ ಮನುಷ್ಯನಿಗೆ ನೆಲೆ ಬೆಲೆವಿದೆಯೆಂದರು ಸಮಸ್ತದ  ಸರ್ವಾಂಗಿಕೃತ ಸ್ವೀಕಾರಕ್ಕೆ ಅದರ ನಾಯಕರ ನಿರ್ಮಲ ಚಿತ್ತವೇ ಕಾರಣವೆಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News