ಸುಳ್ಯ : ಆನೆ ದಾಳಿ - ಕೃಷಿ ನಾಶ
Update: 2016-02-12 18:15 IST
ಸುಳ್ಯ: ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ನವೀನ್ ರೈ ಮೇನಾಲ ಅವರ ತೋಟಕ್ಕೆ ಆನೆ ದಾಳಿ ನಡೆಸಿ ಕೃಷಿಗೆ ಹಾನಿಯದ ಘಟನೆ ನಡೆದಿದೆ.
ವಾರಗಳ ಹಿಂದೆ ಆಲೆಟ್ಟಿ ಗ್ರಾಮದ ವಿವಿಧ ಪ್ರದೇಶಗಳಲ್ಲಿ ಕೃಷಿಕರ ತೋಟಕ್ಕೆ ದಾಳಿ ನಡೆಸುತ್ತಿದ್ದ ಆನೆಗಳ ಹಿಂಡು ಫೆ.11ರಂದು ರಾತ್ರಿ ನವೀನ್ ರೈ ಮೇನಾಲರ ಮೇದಿನಡ್ಕದಲ್ಲಿರುವ ತೋಟಕ್ಕೆ ದಾಳಿ ನಡೆಸಿ ತೆಂಗಿನ ಸಸಿ ಹಾಗೂ ಅಡಿಕೆ ಗಿಡಗಳಿಗೆ ಹಾನಿಯುಂಟು ಮಾಡಿದೆ. ಫೆ.9ರಂದು ರಾತ್ರಿಯೂ ಆನೆಗಳ ಹಿಂಡು ತೋಟಕ್ಕೆ ಬಂದು ಕೃಷಿ ಹಾನಿಗೆಡವಿರುವುದಾಗಿ ನವೀನ್ ರೈಯವರು ತಿಳಿಸಿದ್ದಾರೆ.