ವೀರರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು ವೀರರಾಣಿ ಅಬ್ಬಕ್ಕ ಪುರಸ್ಕಾರಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಮಂಗಳೂರು,ಫೆ.12 :ವೀರರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು ವೀರರಾಣಿ ಅಬ್ಬಕ್ಕ ಪುರಸ್ಕಾರಗಳಿಗೆ ಅರ್ಹರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ವೀರರಾಣಿ ಅಬ್ಬಕ್ಕ ಉತ್ಸವ 2016 ಮೇ ತಿಂಗಳಲ್ಲಿ ಜರಗಲಿದ್ದು ಈ ಸಂದರ್ಭ ಇಬ್ಬರು ಮಹಿಳಾ ಸಾಧಕರಿಗೆ ವೀರರಾಣಿ ಅಬ್ಬಕ್ಕ ಪ್ರಶಸ್ತಿ ಮತ್ತು ವೀರರಾಣಿ ಅಬ್ಬಕ್ಕ ಪುರಸ್ಕಾರ ನೀಡಲಾಗುವುದು. ಪ್ರಶಸ್ತಿ ತಲಾ 20 ಸಾವಿರ ರೂ. ನಗದು ಮತ್ತು ಲಕನ್ನೊಳಗೊಂಡಿದೆ.
ಅಬ್ಬಕ್ಕ ಪ್ರಶಸ್ತಿಗೆ ಅರ್ಜಿ ಸಲ್ಲಿಸುವವರು ತುಳುನಾಡಿನಲ್ಲಿ ಹುಟ್ಟಿ ಸಾಹಿತ್ಯ, ಸಂಸ್ಕೃತಿ ಮತ್ತು ಸಂಶೋಧನಾ ವಿಭಾಗಗಳಲ್ಲಿ ಗಣನೀಯ ಸಾಧನೆ ಮಾಡಿರಬೇಕು. ನಾಡು,ನುಡಿ ಹಾಗೂ ಪರಂಪರೆಗೆ ನೀಡಿದ ಸೇವೆಯನ್ನು ಪರಿಗಣಿಸಲಾಗುವುದು.
ಅಬ್ಬಕ್ಕ ಪುರಸ್ಕಾರಕ್ಕೆ ತುಳು ಸಂಸ್ಕೃತಿಯ ಹಿನ್ನೆಲೆಯೊಂದಿಗೆ ಕಲೆ, ಕ್ರೀಡೆ, ಸಮಾಜ ಸೇವೆ ಮೊದಲಾದ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆ ಮಾಡಿರಬೇಕು. ಚಲನಚಿತ್ರ, ನಾಟಕ, ಲಲಿತ ಕಲೆಗಳು, ಕ್ರೀಡಾರಂಗ, ನಾಟಿವೈದ್ಯ, ಜಾನಪದ ಪ್ರಕಾರಗಳಲ್ಲಿ ಸೇವೆಯನ್ನು ಪರಿಗಣಿಸಲಾಗುವುದು.
ಆಸಕ್ತರು ಮಾ.14 ರೊಳಗಾಗಿ ‘ ಕಾರ್ಯಾಧ್ಯಕ್ಷರು, ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ, ಅಪ್ಪಯ್ಯ ಮೆನ್ಶನ್, ಪೆರ್ಮನ್ನೂರು ಅಂಚೆ, ಮಂಗಳೂರು -575017 ದ.ಕ. ’ ಗೆ ಅರ್ಜಿಯನ್ನು ಕಳುಹಿಸಿಕೊಡಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ 0824-2466957,2212192, 9880088333, 9449016616 ನ್ನು ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.
==============