ಫ್ರಾನ್ಸ್ ಸೂಪರ್ ಮಾರ್ಕೆಟ್‌ಗಳು ಇನ್ನು ಆಹಾರ ಬಿಸಾಡುವಂತಿಲ್ಲ
Update: 2016-02-12 19:43 IST
ಪ್ಯಾರಿಸ್, ಫೆ. 12: ಫ್ರಾನ್ಸ್‌ನ ಸೂಪರ್ ಮಾರ್ಕೆಟ್‌ಗಳಲ್ಲಿ ಮಾರಾಟವಾಗದ ಆಹಾರವನ್ನು ಬಿಸಾಡುವುದನ್ನು ಅಥವಾ ಹಾಳು ಮಾಡುವುದನ್ನು ಕಾನೂನು ಮೂಲಕ ನಿಷೇಧಿಸಲಾಗಿದೆ.
ಇನ್ನು ಮುಂದೆ ಅಂಗಡಿಗಳು ಮಾರಾಟವಾಗದ ಆಹಾರ ಪದಾರ್ಥಗಳನ್ನು ದತ್ತಿ ಸಂಸ್ಥೆಗಳು ಮತ್ತು ಆಹಾರ ಬ್ಯಾಂಕ್‌ಗಳಿಗೆ ದಾನ ಮಾಡಬೇಕಾಗುತ್ತದೆ.
ಆಹಾರದ ಅಗತ್ಯವಿರುವವರು ತಮ್ಮ ಆಹಾರವನ್ನು ತಿನ್ನುವುದನ್ನು ತಡೆಯಲು ಕೆಲವು ಸೂಪರ್‌ಮಾರ್ಕೆಟ್‌ಗಳು ಬಿಸಾಡಿದ ಆಹಾರದ ಮೇಲೆ ಬ್ಲೀಚ್ ಸುರಿಯುತ್ತಿವೆ ಹಾಗೂ ಹಾಳಾದ ಆಹಾರ ಪದಾರ್ಥಗಳನ್ನು ಬೀಗ ಹಾಕಿದ ಉಗ್ರಾಣಗಳಲ್ಲಿ ಇರಿಸುತ್ತಿವೆ.
ಈ ಕುರಿತ ಮಸೂದೆಯನ್ನು ಫ್ರಾನ್ಸ್ ಸೆನೆಟ್‌ನಲ್ಲಿ ಬುಧವಾರ ಅವಿರೋಧವಾಗಿ ಅಂಗೀಕರಿಸಲಾಯಿತು.
400 ಚದರ ಮೀಟರ್ ಅಥವಾ ಅದಕ್ಕಿಂತ ದೊಡ್ಡದಾಗಿರುವ ಎಲ್ಲ ಸೂಪರ್ ಮಾರ್ಕೆಟ್‌ಗಳಿಗೆ ಇದು ಅನ್ವಯವಾಗುತ್ತದೆ.
ಕಾನೂನನ್ನು ಕಂಪೆನಿಗಳು ಉಲ್ಲಂಘಿಸಿದರೆ, ಅವುಗಳಿಗೆ 3750 ಯುರೋ (ಸುಮಾರು 2.87 ಲಕ್ಷ ರೂಪಾಯಿ)ವರೆಗಿನ ಮೊತ್ತದ ದಂಡ ವಿಧಿಸಬಹುದಾಗಿದೆ.