ವಿಶ್ವವಿದ್ಯಾನಿಲಯ ಪರೀಕ್ಷಾ ಫಲಿತಾಂಶ ತಕ್ಷಣವೆ ತಕ್ಷಣವೆ ಪ್ರಕಟಿಸಬೇಕೆಂದು ಎನ್ .ಎಸ್.ಯು.ಐ ನಿಂದ ಮನವಿ
ಮಂಗಳೂರು,ಫೆ.12: ಮಂಗಳೂರು ವಿಶ್ವವಿದ್ಯಾನಿಲಯದಿಂದ ವಿಳಂಬವಾಗುತ್ತಿರುವ ಪರೀಕ್ಷಾ ಫಲಿತಾಂಶವನ್ನು ತಕ್ಷಣವೆ ಪ್ರಕಟಿಸಬೇಕೆಂದು ಎನ್ .ಎಸ್.ಯು.ಐ ನಿಂದ ಇಂದು ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷಾಂಗ ವಿಭಾಗದ ಕುಲಸಚಿವ ಪ್ರೊ.ಎ.ಎಂ. ಖಾನ್ ಅವರಿಗೆ ಮನವಿ ಸಲ್ಲಿಸಿದರು .
ಪ್ರಸಕ್ತ ಶೈಕ್ಷಣಿಕ ವರ್ಷದ 1,3 ಹಾಗೂ 5 ನೇ ಸೆಮಿಸ್ಟರ್‌ನ ಪರೀಕ್ಷೆಗಳು ನಡೆದು 2 ತಿಂಗಳುಗಳಾದರೂ ಈವರೆಗೂ ಪರೀಕ್ಷಾ ಫಲಿತಾಂಶ ಬಂದಿಲ್ಲ. ಇದರಿಂದ ವಿದ್ಯಾರ್ಥಿಗಳ ಭವಿಷ್ಯತ್ತಿಗೆ ತೊಂದರೆಯಾಗಿದ್ದು ವಿದ್ಯಾರ್ಥಿಗಳಲ್ಲಿ ಗೊಂದಲದ ವಾತವರಣ ಉಂಟುಮಾಡಿದೆ. ಈ ಹಿನ್ನೆಲೆಯಲ್ಲಿ ಫಲಿತಾಂಶವನ್ನು ತಕ್ಷಣವೆ ಪ್ರಕಟಿಸುವಂತೆ ವಿನಂತಿಸಿದರು. ಮನವಿಯನ್ನು ಸ್ವೀಕರಿಸಿದ ಕುಲಸಚಿವರು ಫೆ.15ರೊಳಗೆ ಫಲಿತಾಂಶ ಪ್ರಕಟಿಸುವ ಭರವಸೆಯನ್ನು ನೀಡಿದರು.
ಎನ್.ಎಸ್.ಯು.ಐ ಜಿಲ್ಲಾಧ್ಯಕ್ಷ ಆಶಿತ್ ಜಿ.ಪಿರೇರ, ಮಖಂಡರುಗಳಾದ ಶೌವಾದ್ ಗೂನಡ್ಕ, ಆಸ್ವಿನ್ ಡಿಸೋಜ, ಅಭಿಜಿತ್ ಕೆ.ಆರ್, ಸ್ವಸ್ತಿಕ್ ಸುವರ್ಣ ಮತ್ತಿತರರು ಮನವಿಯನ್ನು ಸಲ್ಲಿಸುವ ಸಂದರ್ಭ ಉಪಸ್ಥಿತರಿದ್ದರು.