×
Ad

ಭಯೋತ್ಪಾದನೆಯ ಹಿಂದೆ ರಾಜಕೀಯ ಷಡ್ಯಂತರ ಅಡಗಿದೆ: ಸಮಸ್ತ-90 ಸಮಾವೇಶದಲ್ಲಿ ಅಬ್ದುಸ್ಸಮದ್ ಸಮದಾನಿ ವಿಷಾಧ

Update: 2016-02-12 20:16 IST

ಆಲಪ್ಪಝ, ಫೆ.12: ರಾಜಕೀಯ ಷಡ್ಯಂತರಗಳಿಂದಾಗಿ ಭಯೋತ್ಪಾದನಾ ಕೃತ್ಯಗಳ ನಡೆಯುತ್ತಿದೆಯೇ ಹೊರತು ಧರ್ಮಕ್ಕೂ ಭಯೋತ್ಪಾದನೆಗೂ ಸಂಬಂಧವಿಲ್ಲ. ತಮ್ಮ ಬೆಳೆ ಬೇಯಿಸಿಕೊಳ್ಳಲು ಸಮಾಜಘಾತುಕ ಶಕ್ತಿಗಳು ಧರ್ಮದ ಹೆಸರನ್ನು ದುರುಪಯೋಗಪಡಿಸಿಕೊಂಡರೆ, ಅದನ್ನು ಪ್ರಜ್ಞಾವಂತರು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ ಎಂದು ಖ್ಯಾತ ಸಾಹಿತಿ, ಹಾಲಿ ಶಾಸಕ ಅಬ್ದುಸ್ಸಮದ್ ಸಮದಾನಿ ಅಭಿಪ್ರಾಯಪಟ್ಟರು.

 ಆಲಪ್ಪುಯದ ವರಕ್ಕಲ್ ಮುಲ್ಲಕ್ಕೋಯ ನಗರದಲ್ಲಿ ನಡೆಯುತ್ತಿರುವ ಸಮಸ್ತ-90 ಸಮ್ಮೇಳನದ ಎರಡನೇ ದಿನ ನಡೆದ ವಿಚಾರಗೋಷ್ಟಿಯಲ್ಲಿ ಅವರು ಮಾತನಾಡುತ್ತಿದ್ದರು. ದೇಶದ ಸಾರ್ವಭೌಮತೆಯ ಮೇಲೆ ನಂಬಿಕೆಯಿಟ್ಟರುವ ಮುಸ್ಲಿಂ ಧರ್ಮಗಳು ಸ್ವಾತಂತ್ರ್ಯ ಚಳುವಳಿಯಲ್ಲಿ ತಮ್ಮತೊಡಗಿಸಿಕೊಳ್ಳುವ ಮೂಲಕ ಮುಸ್ಲಿಮರಿಗೆ ದೇಶಪ್ರೇಮವನ್ನು ಕಲಿಸಿಕೊಟ್ಟಿದ್ದರು. ಅದೇ ಹಾದಿಯಲ್ಲಿ ಸಾಗಿ ಬಂದ ಸಮಸ್ತದ ಉಲಮಾಗಳು ಭಾರತೀಯ ಸಂವಿಧಾನವನ್ನು ಗೌರವಿಸಿದವರಾಗಿದ್ದು, ದೇಶದ ಕಾನೂನನ್ನು ಗೌರವಿಸಿ ಬಾಳುವಂತಹ ಉತ್ತಮ ಸಮುದಾಯವೊಂದನ್ನು ಈ ದೇಶಕ್ಕೆ ಸಮರ್ಪಿಸಿದವರಾಗಿದ್ದಾರೆ ಎಂದು ಅವರು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದ ಖ್ಯಾತ ವಾಗ್ಮಿ ಎ.ಎಂ. ನೌಶಾದ್ ಬಾಖವಿ, ತಕ್ವಾದ ಮೇಲೆ ಸ್ಥಾಪಿತಗೊಂಡ ಸಮಸ್ತ ಎಂಬ ಉಲಮಾ ಸಂಘಟನೆಯು ತನ್ನ 90 ವರ್ಷಗಳ ಇತಿಹಾಸದಲ್ಲಿ ಆದರ್ಶದ ಪರಿಶುದ್ದತೆಯನ್ನು ಕಾಪಾಡಿಕೊಂಡು ಬಂದಿದ್ದು, ದಕ್ಷಿಣ ಭಾರತದ ಶೈಕ್ಷಣಿಕ ಜಾಗೃತಿಯಲ್ಲಿ ಅದ್ಭುತ ಕ್ರಾಂತಿಯನ್ನು ಸೃಷ್ಟಿಸಿದೆ. ಈ ಸಂಘಟನೆಯ ಸೇವಾ ಕಾರ್ಯವು ಇತರ ರಾಜ್ಯಗಳಿಗೂ ಮಾದರಿಯಾಗಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಸಮಸ್ತ ಕೋಶಾಧಿಕಾರಿ ಸೆಯ್ಯದ್ ಜಿಫ್ರಿ ಮುತ್ತುಕ್ಕೋಯ ತಂಙಳ್, ನೇತಾರಾದ ಕೋಟುಮಲ ಬಾಪು ಮುಸ್ಲಿಯಾರ್, ಪ್ರೊ. ಆಲಿಕುಟ್ಟು ಮುಸ್ಲಿಯರ್, ಹಂಝ ಭಾಫಕಿ ತಂಙಳ್, ಅಬ್ದುಸ್ಸಮದ್ ಪೂಕೋಟೂರು, ಶಾಸಕ ಕೆ.ಎನ್.ಎ ಖಾದರ್ ಮತ್ತಿತರ ಹಲವಾರು ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News