ಸಮಸ್ತ 90ನೇ ಮಹಾ ಸಮ್ಮೇಳನ : ಸಮಸ್ತದ ಘನತೆ ತತ್ವಾರ್ದದಲ್ಲಿರುವ ಪಾವಿತ್ರತೆ:ನೌಶಾದ್ ಬಾಖವಿ
Update: 2016-02-12 21:36 IST
ಆಲಪ್ಪುಝ:ಮಾನವೀಯತೆ,ಕರುಣೆ,ವಿನಯ ಹಾಗು ಸತ್ಯಸಂಧತೆಯಿಂದಾಗಿ ಮಿಕ್ಕೆಲ್ಲಾ ಧಾರ್ಮಿಕ ಮತ್ತು ರಾಜಕೀಯ ಸಂಘಟನೆಗಳಿಗಿಂತ ಸಮಸ್ತ ಕೇರಳ ಜಂಯತುಲ್ ಉಲಮಾ ಜನರೆಡೆಗೆ ನಿಕಟವಾಗಿದೆ ತತ್ವಾದರ್ಶಗಳಲ್ಲಿನ ಕಟಿಬಧ್ಧತೆ ಸಮಸ್ತವನ್ನು ದಿನದಿಂದ ದಿನಕ್ಕೆ ಪ್ರಗತಿಯ ಪಧದತ್ತ ಕೊಂಡೊಯ್ಯುತ್ತಿದೆ ಈ ಪವಿತ್ರ ಸಂಘಟನೆ ಇಷ್ಟರ ಮಟ್ಟಿಗೆ ಮುಟ್ಟಲು ಕಾರಣ ಸಂಘಟನೆಯನ್ನು ಮುನ್ನಡೆಸಿದ ಅತಿರಧ ಮಹಾ ನಾಯಕರ ಕಾಪಟ್ಯ ರಹಿತ ನಿಷ್ಕಳಂಕತೆ ಮತ್ತು ಅವರ್ಣನೀಯ ಸತ್ಯ ಸಂದತೆ ವಿಷಯುಕ್ತ ವಾತಾವರಣದಿಂದ ಬಳಲುತ್ತಿರುವ ಈ ಕಾಲದಲ್ಲಿ ಸಮಸ್ತದ ನಾಯಕತ್ವದಲ್ಲಿರುವ ಎಲ್ಲರೂ ಆರೋಪ ರಹಿತರೂ ಶುದ್ದ ಹಸ್ತರೂರಾಗಿದ್ದಾರೆ ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು ವೇದಿಕೆಯಲ್ಲಿ ಸಯ್ಯದ್ ಹಮೀದಲಿ ಶಿಹಾಬಾ ತಙಳ್,ಫ್ರೊ.ಆಲಿಕುಟ್ಟಿ ಉಸ್ತಾದ್ ಶೈಖುನಾ ಕೊಯ್ಯೊಡ್ ಉಸ್ತಾದ್ ಹಾಗೂ ಹಲವು ಗಣ್ಯರು ಉಪಸ್ಧಿತರಿದ್ದರು.