ಚುಟುಕು ಸುದ್ದಿಗಳು
ಇಂದು ಕ್ರಿಕೆಟ್ ಪಂದ್ಯ
ವಿಟ್ಲ,ಫೆ.12: ಬೋಳಂತೂರು-ಕಲ್ಪನೆಯ ದುನಿಯಾ ಫ್ರೆಂಡ್ಸ್ ಆಶ್ರಯದಲ್ಲಿ ನಿಗದಿತ ಓವರ್‌ಗಳ ಹೊನಲು ಬೆಳಕಿನ 8 ಜನರ ಅಂಡರ್ ಆರ್ಮ್ ದುನಿಯಾ ಟ್ರೋಫಿ-2016 ಕ್ರಿಕೆಟ್ ಪಂದ್ಯಾಟವು ಫೆ.13ರಂದು ಬೋಳಂತೂರು-ನೆಕ್ಕರಾಜೆಯ ಬಿಂದಾಸ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ನಾಳೆಯಿಂದ ಗುರುಪುರ ಬಂಡಿ ಜಾತ್ರೆ
ಮಂಗಳೂರು, ಫೆ.12: ಗುರುಪುರ ಶ್ರೀ ಮೂಳೂರು ಮುಂಡಿತ್ತಾಯ ದೈವಸ್ಥಾನದಲ್ಲಿ ಫೆ.14ರಂದು ಕಾಲಾವಧಿ ಬಂಡಿ ಜಾತ್ರೆ ಮತ್ತು ಫೆ.15ರಂದು ರಾತ್ರಿ 10ಕ್ಕೆ ಶ್ರೀ ಧೂಮಾವತಿ, ಬಂಟ ಮತ್ತು ಪರಿವಾರ ದೈವಗಳ ನೇಮ ನೆರವೇರಲಿದೆ ಎಂದು ಪ್ರಕಟನೆ ತಿಳಿಸಿದೆ.=
ಪದಾಧಿಕಾರಿಗಳ ಆಯ್ಕೆ
ಮಂಗಳೂರು, ಫೆ.12: ವಿಶ್ವವಿದ್ಯಾನಿಲಯ ಕಾಲೇಜು ಮತ್ತು ಮಂಗಳೂರು ಹಳೆ ವಿದ್ಯಾರ್ಥಿ ಸಂಘದ 2016-17ನೆ ಸಾಲಿಗೆ ಅಧ್ಯಕ್ಷರಾಗಿ ಬಿ. ಧರ್ಮಣ ನಾಕ್, ಉಪಾಧ್ಯಕ್ಷರುಗಳಾಗಿ ಕರ್ನಲ್ ನಿಟ್ಟೆಗುತ್ತು ಶರತ್ ಭಂಡಾರಿ ಹಾಗೂ ಎಂ. ಗಣೇಶ್, ಕಾರ್ಯದರ್ಶಿಯಾಗಿ ಆರ್.ಲೋಹಿದಾಸ್, ಕೋಶಾಧಿಕಾರಿಯಾಗಿ ರಾಮಮೋಹನ್ ರೈ, ಜೊತೆ ಕಾರ್ಯದರ್ಶಿಗಳಾಗಿ ಎನ್.ಶಶಿಧರ್ ಶೆಟ್ಟಿ ಮತ್ತು ಶೇಖ್ ನಝೀರ್ ಹೈದರ್ ಆಯ್ಕೆಯಾಗಿರುತ್ತಾರೆ ಎಂದು ಪ್ರಕಟನೆ ತಿಳಿಸಿದೆ.
ತಂತ್ರಾಂಶದಲ್ಲಿ ಆಸ್ತಿ ವಿವರ ಸೇರ್ಪಡೆಗೆ ಅವಕಾಶ
ಕಾರ್ಕಳ, ಫೆ.12: ಪಂಚತಂತ್ರ ತಂತ್ರಾಂಶದಲ್ಲಿ ಇದುವರೆಗೆ ನಮೂದಿಸದಿರುವ ನಿಯಮಾನುಸಾರವಿರುವ ಆಸ್ತಿಗಳನ್ನು ದಾಖಲಿಸಲು ಹಾಗೂ ಆಸ್ತಿ ತೆರಿಗೆ ವಿವರವನ್ನು ಬದಲಾವಣೆ ಮಾಡಲು ಮಾ.15ರವರೆಗೆ ಸರಕಾರ ಅವಕಾಶ ಕಲ್ಪಿಸಿದೆ ಎಂದು ಪ್ರಕಟನೆ ತಿಳಿಸಿದೆ.
ಕಾಂಗ್ರೆಸ್ ಚುನಾವಣಾ ಪ್ರಚಾರ
ಪುತ್ತೂರು, ಫೆ.12: ನೆಟ್ಟಣಿಗೆ ಮುಡ್ನೂರು ಕ್ಷೇತ್ರದ ಜಿಪಂ ಅಭ್ಯರ್ಥಿ ಅನಿತಾ ಹೇಮನಾಥ ಶೆಟ್ಟಿ ಪರ ಕಾಂಗ್ರೆಸ್ ಮುಖಂಡರು ಗಾಳಿಮುಖ ಎಂಬಲ್ಲಿ ಪ್ರಚಾರ ನಡೆಸಿದರು. ಈ ಸಂದರ್ಭ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಫಝಲ್‌ರಹೀಂ, ನಿಕಟಪೂರ್ವ ಅಧ್ಯಕ್ಷ ಹೇಮನಾಥ ಶೆಟ್ಟಿ, ನಗರಸಭಾ ಸದಸ್ಯ ಮುಹಮ್ಮದ್ ಅಲಿ , ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮೊಹಿದಿನ್ ಹರ್ಷದ್ ದರ್ಬೆ, ಶ್ರೀರಾಂ ಪಕ್ಕಳ ಉಪಸ್ಥಿತರಿದ್ದರು.
ಬಿಜೆಪಿ ಚುನಾವಣಾ ಪ್ರಚಾರ ಸಭೆ
ಕಡಬ, ಫೆ.12: ಜಿಪಂ ಹಾಗೂ ತಾಪಂ ಚುನಾವಣೆ ಹಿನ್ನೆಲೆಯಲ್ಲಿ ಕಡಬ ತಾಪಂ ವ್ಯಾಪ್ತಿಯ ಕೋಡಿಂಬಾಳ ಗ್ರಾಮದ 4 ಮತ್ತು 5ನೆ ವಾರ್ಡಿನಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯು ಕೋಡಿಂಬಾಳ ಮಾಲೇಶ್ವರದಲ್ಲಿ ನಡೆಯಿತು.
ಕಡಬ ಜಿಪಂ ಕ್ಷೇತ್ರದ ಅಭ್ಯರ್ಥಿ ಕೃಷ್ಣ ಶೆಟ್ಟಿ, ತಾಪಂ ಅಭ್ಯರ್ಥಿ ಸತೀಶ್ ನಾಯಕ್ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯದರ್ಶಿ ಪುಲಸ್ಯಾ ರೈ, ಕಡಬ ಗ್ರಾಪಂ ಸದಸ್ಯರಾದ ಆದಂ ಕುಂಡೋಳಿ, ಜಯಲಕ್ಷ್ಮೀ, ಪಕ್ಷದ ಮುಖಂಡರಾದ ಸೀತಾರಾಮ ಗೌಡ, ಎ.ಪಿ. ಗಿರೀಶ್, ಸೋಮಯ್ಯ, ಲೋಕಯ್ಯ ಗೌಡ ಕೊಲ್ಲೆಸಾಗು, ಅಬ್ದುರ್ರಹ್ಮಾನ್ ಪನ್ಯ, ಸುಂದರ ನಾಕ್, ಸಿದ್ದೀಕ್ ಜೆ.ಕೆ, ಇದ್ದಿನಬ್ಬ, ಆದಂ ಸಾಹೇಬ್ ಪೊರಂತು, ಇಂಜಿನಿಯರ್ ಪ್ರಸಾದ್ ಎನ್.ಕೆ, ಯತೀಶ್ ಹೊಸಮನೆ, ಹಂಝ ಕುಂಡೋಳಿ, ವಾಸು, ಅಶೋಕ್ ಕುಮಾರ್, ಫಯಾಝ್ ಕೆನರಾ ಉಪಸ್ಥಿತರಿದ್ದರು.
ಬಾಯಾರು-ಕೈಕಂಬ ರಸ್ತೆ ದುರಸ್ತಿಯಲ್ಲಿ ನಿರ್ಲಕ್ಷ: ಸಿಪಿಎಂ
ಮಂಜೇಶ್ವರ, ಫೆ.12: ಕೈಕಂಬದಿಂದ ಬಾಯಾರು ಮುಳಿಗದ್ದೆಯವರೆಗಿನ 15 ಕಿ.ಮೀ ಅಂತಾರಾಜ್ಯ ರಸ್ತೆ ಡಾಮರೀಕರಣವಾಗದೆ ಸಂಪೂರ್ಣ ಹದಗೆಟ್ಟು ನಾಲ್ಕು ವರ್ಷಗಳು ಕಳೆದಿದೆ. ಈ ಬಾರಿಯೂ ಡಾಮರೀಕರಣ ಮಾಡದಿರುವುದು ಜವಾಬ್ದಾರಿಯುತ ಶಾಸಕರ, ಸರಕಾರದ ನಿರ್ಲಕ್ಷ ಎಂದು ಸಿಪಿಎಂ ಪ್ರಾದೇಶಿಕ ಸಮಿತಿ ಆರೋಪಿಸಿದೆ. ಸುಮಾರು 50ರಷ್ಟು ಬಸ್‌ಗಳು ಪ್ರತಿದಿನ 300ಕ್ಕಿಂತಲೂ ಹೆಚ್ಚು ಬಾರಿ ಟ್ರಿಪ್ ನಡೆಸುತ್ತಿದ್ದು, ಅಷ್ಟೇ ಸಂಖ್ಯೆಯಲ್ಲಿ ರಿಕ್ಷಾ ಚಾಲಕರು, ಮಾಲಕರು ತಮ್ಮ ಸಂಪಾದನೆಯನ್ನೆಲ್ಲಾ ವಾಹನಗಳ ದುರಸ್ತಿಗೆಂದೇ ವ್ಯಯಿಸುತ್ತಿದ್ದಾರೆ. ಸಿಪಿಎಂ ಮತ್ತು ಡಿವೈಎಫ್‌ಐ ನಾಲ್ಕು ವರ್ಷಗಳಿಂದ ಡಾಮರೀಕಣಕ್ಕೆ ಒತ್ತಾಯಿಸಿ ಧರಣಿ ಮುಷ್ಕರಗಳನ್ನು ನಡೆಸಿದೆ. ಶಾಸಕರ ನಿವಾಸಕ್ಕೆ ಪ್ರತಿಭಟನಾ ರ್ಯಾಲಿಯನ್ನೂ ಆಯೋಜಿಸಿತ್ತು. ಆದರೆ ಈ ತನಕ ಅದಕ್ಕೆ ಲಭಿಸಿದ್ದು ವಂಚನಾತ್ಮಕ ಪೊಳ್ಳು ಭರವಸೆಗಳು ಮಾತ್ರ ಎಂದು ಪೈವಳಿಕೆ ಇ.ಕೆ.ನಾಯರ್ ಸ್ಮಾರಕ ಮಂದಿರದಲ್ಲಿ ಇತ್ತೀಚೆಗೆ ಜರಗಿದ ಸಭೆಯಲ್ಲಿ ಅಭಿಪ್ರಾಯಪಡಲಾಗಿದೆ.
ಬಾಬು ಕೋರಿಕ್ಕಾರ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ವಲಯ ಕಾರ್ಯದರ್ಶಿ ಅಬ್ದುರ್ರಝಾಕ್ ಚಿಪ್ಪಾರ್, ರೈತ ಸಂಘದ ಮುಖಂಡ ಅಬೂಬಕ್ಕರ್ ಉಪಸ್ಥಿತರಿದ್ದರು. ಲೋಕಲ್ ಸಮಿತಿ ಕಾರ್ಯದರ್ಶಿ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಜಗದೀಶ್ ವಂದಿಸಿದರು
ಕಾನೂನು ಪದವೀಧರರಿಗೆ ಪ್ರೋತ್ಸಾಹಧನ
ಉಡುಪಿ, ಫೆ.12: ನೂತನ ಕಾನೂನು ಪದವಿಯನ್ನು ಪಡೆದು ಹೊರಬರುವ ವಕೀಲರಿಗೆ ವೃತ್ತಿ ಜೀವನ ಪ್ರಾರಂಭ ಮಾಡುವ ಮೊದಲು ನುರಿತ ಹಿರಿಯ ವಕೀಲರ ಜೊತೆಗೆ ಅವರ ವೃತ್ತಿ ಜೀವನದಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ಪ್ರೋತ್ಸಾಹ ಧನ ಯೋಜನೆಯನ್ನು ಪಾವತಿಸಲು ತಿಂಗಳಿಗೆ 2,000 ರೂ.ನಂತೆ ಸಹಾಯಧನ ನೀಡಲು ಅವಕಾಶವಿದೆ.
ಇದಕ್ಕೆ ವಾರ್ಷಿಕ ವರಮಾನ 40,000 ರೂ. ಮೀರದ ನೂತನ ಕಾನೂನು ಪದವೀಧರರು ಹಾಗೂ 2014ರ ಎ.1ರ ಬಳಿಕ ಬಾರ್ ಅಸೋಸಿಯೇಶನ್‌ನಲ್ಲಿ ಹೆಸರು ನೋಂದಾಯಿಸಿದ ವಕೀಲರಿಗೆ ಈ ಯೋಜನೆ ಅನ್ವಯವಾಗುತ್ತದೆ. ಅರ್ಜಿಗಳನ್ನು ಸಂಬಂಧಪಟ್ಟ ತಾಲೂಕಿನ ತಹಶೀಲ್ದಾರರ ಕಚೇರಿ ಅಥವಾ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಬಾರ್ ಅಸೋಸಿಯೇಶನ್‌ನ ದೃಢಪತ್ರ ದೊಂದಿಗೆ ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್. ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಉಳ್ಳಾಲ ಇಸ್ಲಾಹಿ ಕಾಲೇಜ್: ಬಹುಮಾನ ವಿತರಣೆ
ಮಂಗಳೂರು,ಫೆ.12: ಉಳ್ಳಾಲದ ಇಸ್ಲಾಹಿ ಮಹಿಳಾ ಸಂಯುಕ್ತ ಪದವಿ ಪೂರ್ವ ಕಾಲೇಜು ಹಾಗೂ ಇಸ್ಲಾಹಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ 2015-16ನೆ ಸಾಲಿನ ಬಹುಮಾನ ವಿತರಣೆಯು ಇತ್ತೀಚೆಗೆ ಜರಗಿತು.
ಮುಖ್ಯ ಅತಿಥಿಯಾಗಿ ಉಳ್ಳಾಲ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಬ್ದುಲ್ ಫತಾಕ್ ಭಾಗವಹಿಸಿದ್ದರು. ಸಭಾಧ್ಯಕ್ಷತೆಯನ್ನು ಶಾಲೆಯ ಅಧ್ಯಕ್ಷ ಜಿ.ಅಬ್ದುಲ್ ರಝಾಕ್ ವಹಿಸಿದ್ದರು. ಶಾಲಾ ಉಪಾಧ್ಯಕ್ಷ ಯು.ಎಮ್.ಅಬ್ದುರ್ರಹ್ಮಾನ್ ಬಾಷಾ , ಕಾರ್ಯದರ್ಶಿ ಯು.ಎ. ಕಾಸಿಮ್ ಉಳ್ಳಾಲ್, ಮಂಡಳಿಯ ಸದಸ್ಯರುಗಳಾದ ಕೆ.ಎಚ್.ಸಲೀಮ್, ಅಬ್ದುಲ್ ವಹಾಬ್ ಉಳ್ಳಾಲ್, ಅಬ್ದುಲ್ಲತೀಫ್ ಭಾಗವಹಿಸಿದ್ದರು.
ಶಿಕ್ಷಕಿ ಖತೀಜಾ ಶಮೀನಾ ಸ್ವಾಗತಿಸಿದರು. ಉಪನ್ಯಾಸಕಿ ಸೌದತ್ ವಂದಿಸಿದರು. ಶಿಕ್ಷಕಿ ನಿತಾಶ, ಅಬಿದ್ ಜಲೀಲ್ ಕಾರ್ಯಕ್ರಮ ನಿರೂಪಿಸಿದರು.
ಉಡುಪಿ: ಕಾಂಗ್ರೆಸ್ ಕಾರ್ಯಕರ್ತರ ಸಭೆ
ಉಡುಪಿ, ಫೆ.12: ರಾಜ್ಯ ಸರಕಾರ ಜಾರಿಗೆ ತಂದಿರುವ ಜನಪರ ಕಾರ್ಯಕ್ರಮಗಳನ್ನು ಜನರಿಗೆ ತಿಳಿಸುವ ಮೂಲಕ ಪಕ್ಷದ ಅಭ್ಯರ್ಥಿಯ ಪರವಾಗಿ ಮತ ಯಾಚಿಸುವಂತೆ ಶಾಸಕ ಪ್ರಮೋದ್ ಮಧ್ವರಾಜ್ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಬ್ಲಾಕ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ಮಾತನಾಡಿದರು. ಸಭೆಯಲ್ಲಿ ಉದ್ಯಾವರ ಕ್ಷೇತ್ರದ ಜಿಪಂ ಅಭ್ಯರ್ಥಿ ಆನಂದ್ ಹಾಗೂ ಕಡೆಕಾರು ತಾಪಂ ಅಭ್ಯರ್ಥಿ ಸರಸ್ವತಿ ಸತೀಶ್ ಕೋಟ್ಯಾನ್ ಮತಯಾಚಿಸಿದರು. ಪಕ್ಷದ ಮುಖಂಡರಾದ ದಿವಾಕರ ಕುಂದರ್, ಕೇಶವ ಕೋಟ್ಯಾನ್, ವಾಮನ ಬಂಗೇರ, ಲಕ್ಷ್ಮೀಕಾಂತ್, ಮೀನಾಕ್ಷಿ ಮಾಧವ ಬನ್ನಂಜೆ, ಧರ್ಮಪಾಲ, ವನಜಾ ಜಯಕರ, ತಾರಾನಾಥ ಸುವರ್ಣ, ಕುಶಲ್ ಶೆಟ್ಟಿ, ಜನಾರ್ದನ ಭಂಡಾರ್ಕರ್, ಭಾಸ್ಕರ್ ರಾವ್ ಕಿದಿಯೂರು, ವಿಜಯ ಪೂಜಾರಿ, ಯುವರಾಜ್, ಅಮೃತಾ ಕೃಷ್ಣಮೂರ್ತಿ, ಗಣೇಶ್ ನೆರ್ಗಿ, ಬಿ.ಕೆ. ಸೋಮನಾಥ್, ಲಕ್ಷ್ಮಣ್, ಸುರೇಶ್, ಸುಜಯ ಪೂಜಾರಿ, ಭಾಸ್ಕರ, ಪ್ರಶಾಂತ್ ಪೂಜಾರಿ ಮತ್ತಿತರರುಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರ ಖಾಯಮಾತಿಗೆ ಆಗ್ರಹ
ಉಡುಪಿ, ಫೆ.12: ಜಿಲ್ಲೆಯ ಆಶಾ ಕಾರ್ಯಕರ್ತೆಯರಿಗೆ ತಿಂಗಳಿಗೆ ಕನಿಷ್ಠ ವೇತನ ನಿಗದಿ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಆಶಾ ಕಾರ್ಯಕರ್ತೆಯರ ಸಂಘ (ಸಿಐಟಿಯು)ದ ಕುಂದಾಪುರ ತಾಲೂಕು ಸಮಿತಿಯ ವತಿಯಿಂದ ಜಿಪಂನ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಆಶಾ ಕಾರ್ಯಕರ್ತೆಯರ ಹಕ್ಕೊತ್ತಾಯಗಳ ಸಾಮೂಹಿಕ ಮನವಿ ಅರ್ಪಿಸಲಾಯಿತು.
ಆಶಾ ಕಾರ್ಯಕರ್ತೆಯರು ಕಳೆದ 8 ವರ್ಷಗಳಿಂದ ಎನ್‌ಆರ್‌ಎಚ್‌ಎಂ ಯೋಜನೆಯಲ್ಲಿ ಬದುಕಲು ಸಾಕಾಗದಷ್ಟು ಕೂಲಿಯನ್ನು ಪಡೆದು ತಾಯಿ ಮತ್ತು ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿಯಿಂದ ದುಡಿಯುತ್ತಿದ್ದಾರೆ. ಗ್ರಾಮೀಣ ಜನರ ಆರೋಗ್ಯದ ದೃಷ್ಠಿಯಿಂದ ಜಾರಿಯಾದ ಯೋಜನೆಯಲ್ಲಿ ಗ್ರಾಮೀಣ ಭಾಗದ ಮಹಿಳೆಯರು ರಾತ್ರಿ ಹಗಲು ದುಡಿಯುತ್ತಿದ್ದಾರೆ. ಇಂತಹ ಮಹಿಳೆಯರಿಗೆ ಯಾವುದೇ ರೀತಿಯ ಕನಿಷ್ಠ ಸೌಲಭ್ಯಗಳು ದೊರೆಯುತ್ತಿಲ್ಲ ಎಂದು ಮನವಿಯಲ್ಲಿ ತಿಳಿಸಲಾಗಿದೆ. ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿ ಆಶಾ ಕಾರ್ಯಕರ್ತೆಯರನ್ನು ಖಾಯಂಗೊಳಿಸಬೇಕು. ತಿಂಗಳಿಗೆ ಕನಿಷ್ಠ ವೇತನ ಜಾರಿಗೊಳಿಸಬೇಕು. ಉಚಿತ ಮೊಬೈಲ್ ಫೋನ್ ನೀಡಬೇಕು. ವಿವಿಧ ಇಲಾಖೆಗಳ ಇತರ ಕೆಲಸಗಳಿಗೆ ಹುದ್ದೆಗಳನ್ನು ತುಂಬಿಕೊಳ್ಳುವಾಗ ಆಶಾ ಕಾರ್ಯಕರ್ತೆಯರಿಗೆ ಆದ್ಯತೆ ನೀಡಬೇಕು. ಮೆಡಿಕಲ್ ಕಿಟ್ ಕೊಡಬೇಕು. ಎನ್‌ಆರ್‌ಎಚ್‌ಎಂ ಯೋಜನೆಯ ಬಜೆಟ್‌ನಲ್ಲಿ ಅನುದಾನ ಹೆಚ್ಚಿಸಬೇಕು ಇತ್ಯಾದಿ ಬೇಡಿಕೆಗಳ ಮನವಿಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಆಶಾ ಕಾರ್ಯ ಕರ್ತೆಯರ ಸಂಘದ ತಾಲೂಕು ಅಧ್ಯಕ್ಷೆ ವಸಂತಿ ಶೆಟ್ಟಿ, ಕಾರ್ಯದರ್ಶಿ ಶೀಲಾವತಿ, ಮುಖಂಡರಾದ ಸರಸ್ವತಿ ಕಿರಿಮಂಜೇಶ್ವರ, ಕುಸುಮ ನಾಡ, ಪ್ರಕಾಶಿನಿ ಬೈಂದೂರು, ಗಿರಿಜಾ ಶಿರೂರು ಉಪಸ್ಥಿತರಿದ್ದರು.
ಫೆ.17ರಂದು ವಾಹನಗಳ ಹರಾಜು
ಮಂಗಳೂರು, ಫೆ.12: ವಾಣಿಜ್ಯ ತೆರಿಗೆ ಜಂಟಿ ಆಯುಕ್ತರ ಕಚೇ ರಿಯಲ್ಲಿ ಹಳೆಯ ಅನುಪಯುಕ್ತ 4 ವಾಹನಗಳನ್ನು ಟೆಂಡರು ಮತ್ತು ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
ಟೆಂಡರು ಸಲ್ಲಿಸಲು ಫೆ.15 ಕಡೆಯದಿನ. ಹರಾಜು ಫೆ.17 ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವಾಣಿಜ್ಯ ತೆರಿಗೆ ಕಚೇರಿ, ಆರ್‌ಟಿಒ ಬಳಿ, ಮಂಗಳೂರು ಇಲ್ಲಿಂದ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.
ಕಿರು ಸೇತುವೆಯ ವಿಸ್ತರಣೆಗೆ ಆಗ್ರಹ
ಕಾಸರಗೋಡು, ಫೆ.12: ರಾಷ್ಟ್ರೀಯ ಹೆದ್ದಾರಿಯ ಕುಂಬಳೆ ಮಾವಿನಕಟ್ಟೆ ಮತ್ತು ದೇವಿನಗರದ ಕಿರು ಸೇತುವೆಯ ಅಗಲ ಹೆಚ್ಚಿಸಬೇಕು ಎಂದು ಸಂಯುಕ್ತ ಜನತಾದಳ ಮಂಜೇಶ್ವರ ಮಂಡಲ ಸಮಿತಿ ಪದಾಧಿಕಾರಿಗಳ ಸಭೆ ಒತ್ತಾಯಿಸಿದೆ. ಯುವ ಜನತಾದಳ ರಾಜ್ಯ ಅಧ್ಯಕ್ಷ ಸಲೀಮ್ ಮಡವೂರು ನೇತೃತ್ವದ ರಾಜ್ಯ ಮಟ್ಟದ ಮಾನವ ಐಕ್ಯಯಾತ್ರೆ ಫೆ. 19ರಂದು ಕುಂಬಳೆಯಿಂದ ಹೊರಡಲಿದ್ದು, ಉದ್ಘಾಟನಾ ಕಾರ್ಯಕ್ರಮ ಯಶಸ್ವಿಗೊಳಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಜೆಡಿಯು ಜಿಲ್ಲಾಧ್ಯಕ್ಷ ಎ.ವಿ. ರಾಮಕೃಷ್ಣನ್ ಸಭೆ ಉದ್ಘಾಟಿಸಿದರು. ಮುಹಮ್ಮದ್ ಕುಂಞಿ ಕೆ. ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಸಿದ್ದೀಕ್ ಅಲಿ ಮೊಗ್ರಾಲ್, ಸಿದ್ದೀಕ್ ರಹ್ಮಾನ್, ಮುಹಮ್ಮದ್ ಸಾಲಿ, ಭಾಸ್ಕರನ್ ಕೋಟೂರು, ಎಂ.ಎಚ್. ಜನಾರ್ದನ, ಇಬ್ರಾಹೀಂ ಕೊಪ್ಪಳ, ಪಿ. ಕರುಣಾಕರನ್, ಹಂಝ, ಮುಹಮ್ಮದ್ ಶಾರ್ಜಾ, ಅಬ್ದುಲ್ಲ , ದಾಮೋದರ, ಅಬ್ದುಲ್ ಕುಂಞಿ ಮಾತನಾಡಿದರು.
ಅಹ್ಮದ್ ಅಲಿ ಸ್ವಾಗತಿಸಿದರು. ಫವಾಝ್ ಇಬ್ರಾಹೀಂ ವಂದಿಸಿದರು.
ಎಸ್ಸೆಸ್ಸೆಫ್ ಡಿವಿಜನ್ ಕಾನ್ಫರೆನ್ಸ್ ಚಾಲನಾ ಸಮಾವೇಶ
ಉಳ್ಳಾಲ,ಫೆ.12:ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ವತಿಯಿಂದ ‘ಮರಳಿ ಬಾ ಪರಂಪರೆಗೆ’ ಎಂಬ ಧ್ಯೇಯ ಘೋಷಣೆಯೊಂದಿಗೆ ಎ.22ಕ್ಕೆ ನಡೆಯುವ ಡಿವಿಜನ್ ಕಾನ್ಫರೆನ್ಸ್‌ನ ಚಾಲನಾ ಸಮಾವೇಶ ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ನಾಯಕ ಇಬ್ರಾಹೀಂ ಅಹ್ಸನಿ ಮಂಜನಾಡಿಯ ಅಧ್ಯಕ್ಷತೆಯಲ್ಲಿ ತಿಬ್ಲೆಪದವು ಅಲ್ ಮದೀನ ಹಾಲ್‌ನಲ್ಲಿ ಇತ್ತೀಚೆಗೆ ನಡೆಯಿತು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಜನ್ ನಾಯಕ ಮುನೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ. ಜಿಲ್ಲಾಧ್ಯಕ್ಷ ಹಾಫಿಳ್ ಯಾಕೂಬ್ ಸಅದಿ ನಾವೂರು ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಮಾಜಿ ದ.ಕ. ಜಿಲ್ಲಾಧ್ಯಕ್ಷ ಇಸ್ಮಾಯೀಲ್ ಸಅದಿ ಉರುಮಣೆ, ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ, ಡಿವಿಜನ್ ಉಪಾಧ್ಯಕ್ಷ ಜಮಾಲುದ್ದೀನ್ ಸಖಾಫಿ, ಕೋಶಾಧಿಕಾರಿ ಫಾರೂಕ್ ಸಖಾಫಿ, ಕಾರ್ಯದರ್ಶಿಗಳಾದ ಸೈಯದ್ ಖುಬೈಬ್ ತಂಙಳ್, ಶರೀಫ್ ಮುಡಿಪು, ಹನೀಫ್ ಸಖಾಫಿ, ಮಜೀದ್ ಕೊಣಾಜೆ, ಅಝೀಝ್ ಮದನಿ ಉಪಸ್ಥಿತರಿದ್ದರು. ಡಿವಿಜನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯೀಲ್ ಮಾಸ್ಟರ್ ಮೊಂಟೆಪದವು ಸ್ವಾಗತಿಸಿ, ವಂದಿಸಿದರು.
‘ಕುಮ್ಕಿ ಹಕ್ಕು ಕೊಡಲು ಇನ್ನೆಷ್ಟು ವರ್ಷ ಬೇಕು?’
ಕಾರ್ಕಳ, ಫೆ.12: ಕಳೆದ 150 ವರ್ಷಗಳಿಂದ ರೈತರು ಹಕ್ಕಾಗಿ ಅನುಭವಿಸಿಕೊಂಡು, ಕಾಯ್ದು ಕೊಂಡು ಬಂದಿರುವ ಕುಮ್ಕಿ ಭೂಮಿಯ ಮಂಜೂರಾತಿಗೆ ಇನ್ನೆಷ್ಟು ವರ್ಷ ಬೇಕು ಎಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಪ್ರಶ್ನಿಸಿದ್ದಾರೆ. ಭಾರತೀಯ ಕಿಸಾನ್ ಸಂಘದ ಕಾರ್ಕಳ ತಾಲೂಕು ಸಮಿತಿಯ ಕಚೇರಿಯಲ್ಲಿ ನಡೆದ ಮಾಸಿಕ ಸಭೆಯಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಚುನಾವಣೆ ಬಂದಾಗ ಮಾತ್ರ ರೈತರ ನೆನಪಾಗಿ, ಮೊಸಳೆ ಕಣ್ಣೀರು ಸುರಿಸುವ ರಾಜಕೀಯ ಪಕ್ಷಗಳು ಈ ವಿಚಾರದಲ್ಲಿ ಕೆಸರೆರಚಾಟ ಬಿಟ್ಟು, ಕುಮ್ಕಿ ಭೂಮಿಯ ಮಂಜೂರಾತಿಗೆ ತಾವೇನು ಮಾಡುವಿರಿ ಎಂಬುದನ್ನು ಜನತೆಗೆ ತಿಳಿಸಲಿ. ಸರ್ವೋಚ್ಚ ನ್ಯಾಯಾಲಯದ ತೀರ್ಪಿನಿಂದಾಗಿ ಕರಾವಳಿ ಹಾಗೂ ಮಲೆನಾಡಿನ ಕುಮ್ಕಿ, ಕಾನ, ಬಾಣೆ, ಸೊಪ್ಪಿನ ಬೆಟ್ಟ ಭೂಮಿಯನ್ನು ಹೊಂದಿರುವ ರೈತರಲ್ಲಿ ಆತಂಕ ಮೂಡಿದೆ. ಈ ನಿಟ್ಟಿನಲ್ಲಿ ನ್ಯಾಯಾಂಗ ಹಾಗೂ ಶಾಸಕಾಂಗ ಮುಖಾಂತರ ಕುಮ್ಕಿದಾರರ ಸಮಸ್ಯೆಗಳ ಪರಿಹಾರಕ್ಕೆ ನಿರಂತರವಾಗಿ ಉಡುಪಿ ಜಿಲ್ಲಾ ಭಾ.ಕಿ.ಸಂಘ ಹೋರಾಟ ನಡೆಸುತ್ತದೆ ಎಂದರು.
ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ ಶೆಟ್ಟಿ ನಿಟ್ಟೆ ಮಾತನಾಡಿ, ಜಿಲ್ಲೆಯಲ್ಲಿ ಕುಮ್ಕಿ ಭೂಮಿ ಹೊಂದಿರುವವರ ಸಮಗ್ರ ಮಾಹಿತಿ ಸಂಗ್ರಹಿಸಲು ಸಂಘಟನೆ ತೀರ್ಮಾನಿಸಿದೆ. ಕುಮ್ಕಿ ಭೂಮಿ ಹೊಂದಿರುವ ರೈತರು ತಮ್ಮ ಭೂಮಿಗೆ ಸಂಬಂಧಿಸಿದ ಸ್ವ-ವಿವರವನ್ನು ಸಂಘದ ಕಚೇರಿಯಲ್ಲಿ ಲಭ್ಯವಿರುವ ನಮೂನೆ ಪ್ರತಿಯಲ್ಲಿ ತುಂಬಿಸಿ ಕೊಡುವಂತೆ ಕೋರಿದರು. ತಾಲೂಕು ಉಪಾಧ್ಯಕ್ಷ ಸುಂದರ ಶೆಟ್ಟಿ ಮುನಿಯಾಲು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧ್ಯಕ್ಷ ಬಿ.ವಿ. ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು. ಹರೀಶ್ ಕುಮಾರ್ ಕಲ್ಯಾ ಕಾರ್ಯಕ್ರಮ ನಿರೂಪಿಸಿದರು.
ಬಾರ್ಕೂರು: ಸ್ವರಕ್ಷಾ ಮಕ್ಕಳ ಜಾಗೃತಿ ಅಭಿಯಾನ
ಬ್ರಹ್ಮಾವರ, ಫೆ.12: ಉಡುಪಿ ನೇಟಿವ್ ಆರ್ಗನೈಝೇಶನ್ ಹಾಗೂ ಉಡುಪಿ ಬನ್ನಂಜೆ ಲಯನೆಸ್ ಕ್ಲಬ್‌ನ ಜಂಟಿ ಆಶ್ರಯದಲ್ಲಿ ಸ್ವರಕ್ಷಾ ಮಕ್ಕಳ ಜಾಗೃತಿ ಅಭಿಯಾನವು ಬಾರ್ಕೂರು ರಂಗನಕೇರಿಯ ಶ್ರೀದುರ್ಗಾಪರಮೇಶ್ವರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ನೇಟಿವ್ ಆರ್ಗನೈಝೇಶನ್ ಅಧ್ಯಕ್ಷ ಪ್ರೇಮಾನಂದ ಕಲ್ಮಾಡಿ ಮಾತನಾಡಿ, ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗಟ್ಟಲು ಮಕ್ಕಳು ಸದಾ ಜಾಗೃತರಾಬೇಕು ಎಂದು ಹೇಳಿದರು. ಲಯನೆಸ್ ಸಂಸ್ಥೆಯ ಜಿಲ್ಲಾ ಸಂಯೋಜಕಿ ನಿರುಪಮಾ ಕಡೆಕಾರ್, ಲಯನೆಸ್ ಕ್ಲಬ್ ಅಧ್ಯಕ್ಷೆ ವಿದ್ಯಾ ಉದಯಕುಮಾರ್ ಶೆಟ್ಟಿ, ಇಂದು ರಮಾನಂದ್ ಭಟ್ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಗಣೇಶ್ ವಾಕುಡೆ ಕಾರ್ಯಕ್ರಮ ನಿರೂಪಿಸಿದರು.