ಆಲಡ್ಕ: ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್ ಕಚೇರಿ ಉದ್ಘಾಟನೆ,
ವಿಟ್ಲ, ಫೆ.12: ಎಸ್ಕೆಎಸ್ಸೆಸ್ಸೆಫ್ ಆಲಡ್ಕ ಪಾಣೆಮಂಗಳೂರು ಶಾಖಾ ಅಧೀನದಲ್ಲಿರುವ ಶಂಸುಲ್ ಉಲಮಾ ಇಸ್ಲಾಮಿಕ್ ಸೆಂಟರ್‌ನ ನೂತನ ಕಚೇರಿ ಉದ್ಘಾಟನಾ ಸಮಾರಂಭ, ಶಂಸುಲ್ ಉಲಮಾ ಮತ್ತು ಅಗಲಿದ ಸಮಸ್ತ ನೇತಾರರ ಅನುಸ್ಮರಣಾ ಸಮ್ಮೇಳನ ಹಾಗೂ ತೋಡಾರ್ ಶಂ-ಎ-ಮದೀನಾ ಬುರ್ದಾ ತಂಡದಿಂದ ಬುರ್ದಾ ಮಜ್ಲಿಸ್ ಕಾರ್ಯಕ್ರಮವು ಆಲಡ್ಕ ಶಂಸುಲ್ ಉಲಮಾ ನಗರದ ಮರ್‌ಹೂಂ ಶೈಖುನಾ ಸಜಿಪ ಉಸ್ತಾದ್ ವೇದಿಕೆಯಲ್ಲಿ ನಡೆಯಿತು. ಸಮಸ್ತ ಕೇಂದ್ರ ಮುಶಾವರ ಸದಸ್ಯ ಶೈಖುನಾ ಹಾಜಿ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಮಿತ್ತಬೈಲು ಕಚೇರಿ ಉದ್ಘಾಟಿಸಿದರು. ಸೈಯದ್ ಹಾದಿ ತಂಙಳ್ ಅಲ್-ಮಶ್‌ಹೂರ್ ಮೊಗ್ರಾಲ್ ದುಆ ನೆರವೇರಿಸಿದರು. ಎಸ್ಕೆಎಸ್ಸೆಸ್ಸೆಫ್‌ಶಾಖಾಧ್ಯಕ್ಷ ಅಬ್ದುಲ್ ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಸಜಿಪ ಕೇಂದ್ರ ಜುಮಾ ಮಸೀದಿ ಖತೀಬ್ ಅಶ್ಫಾಕ್ ಪೈಝಿ ಅನುಸ್ಮರಣಾ ಭಾಷಣಗೈದರು. ಮುಖ್ಯ ಅತಿಥಿಗಳಾಗಿ ಹಾಜಿ ಜಿ. ಅಬೂಬಕರ್ ಗೋಳ್ತಮಜಲು, ಹಾಜಿ ಕೆ.ಎಸ್. ಇಸ್ಮಾಯೀಲ್ ಕಲ್ಲಡ್ಕ, ಹಾಜಿ ಪಿ.ಎಸ್. ಅಬ್ದುಲ್ ಹಮೀದ್ ನೆಹರೂ ನಗರ, ಅಬೂಬಕರ್ ಸಿದ್ದೀಕ್‌ಗುಡ್ಡೆ ಅಂಗಡಿ, ಮುಹಮ್ಮದ್ ಹನೀಫ್ ಮೆಲ್ಕಾರ್, ಹಾಜಿ ಎಚ್.ಎಸ್. ಉಸ್ಮಾನ್ ಪಾಣೆಮಂಗಳೂರು, ಪಿ.ಎಂ. ಅಹ್ಮದ್ ಬಾವಾ ಯಾಸೀನ್, ಖಾದರ್ ಮಾಸ್ಟರ್ ಬಂಟ್ವಾಳ, ಅಬ್ದುಲ್ ರವೂಫ್ ನಂದಾವರ ಭಾಗವಹಿಸಿದ್ದರು. ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಪದಾಧಿಕಾರಿಗಳಾದ ಪಿ.ಬಿ. ಹಾಮದ್ ಹಾಜಿ, ಅಬ್ದುಲ್ ಖಾದರ್ ಹಾಜಿ, ಮುಹಮ್ಮದ್ ಸಾದಿಕ್ ಗುಡ್ಡೆಅಂಗಡಿ, ಮುಹಮ್ಮದ್ ಹನೀಫ್ ಹಾಸ್ಕೋ, ಖಲೀಲ್ ದಾರಿಮಿ, ಶುಕೂರ್ ದಾರಿಮಿ, ಅಬೂಬಕರ್ ಎನ್.ಬಿ. ಉಪಸ್ಥಿತರಿದ್ದರು. ಆಲಡ್ಕ ಎಸ್ಕೆಎಸ್ಸೆಸ್ಸೆಫ್ ಕ್ಲಸ್ಟರ್ ಅಧ್ಯಕ್ಷ ಅಬ್ದುಲ್ ಅಝೀಝ್ ಪಿ.ಐ. ಧ್ವಜಾರೋಹಣಗೈದರು. ಅಬ್ದುಲ್ ಬಶೀರ್ ಅಝ್‌ಹರಿ ಸ್ವಾಗತಿಸಿದರು. ಅಬ್ದುಲ್ ಅಝೀಝ್ ಕಿರಾಅತ್ ಪಠಿಸಿದರು. ಮುಹಮ್ಮದ್ ಶಫೀಕ್ ಆಲಡ್ಕ ವಂದಿಸಿದರು. ಶಹೀದ್ ಗುಡ್ಡೆಅಂಗಡಿ ಕಾರ್ಯಕ್ರಮ ನಿರೂಪಿಸಿದರು.