ಮೈಟ್ ಕಾಲೇಜಿನಲ್ಲಿ ರಕ್ತದಾನ ಶಿಬಿರ
ಮೂಡುಬಿದಿರೆ, ಫೆ.12: ಇಲ್ಲಿಗೆ ಸಮೀಪದ ಬಡಗ ಮಿಜಾರಿನಲ್ಲಿರುವ ಮಂಗಳೂರು ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಆ್ಯಂಡ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಎನ್ನೆಸ್ಸೆಸ್ (ಮೈಟ್ ಘಟಕ), ಲಯನ್ಸ್ ಕ್ಲಬ್ ಬೆಂದೂರ್ ವೆಲ್ ಮತ್ತು ಲಯನ್ಸ್ ಕ್ಲಬ್ ತುಳುನಾಡು ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರ ಜರಗಿತು.
ಇಂಡಿಯನ್ ರೆಡ್‌ಕ್ರಾಸ್ ಸೊಸೈಟಿ ಬ್ಲಡ್‌ಬ್ಯಾಂಕ್ ಮಂಗಳೂರು, ಕೆ.ಎಮ್.ಸಿ., ವೆನ್ಲಾಕ್, ತೇಜಸ್ವಿನಿ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ಗಳ ಸಹಭಾಗಿತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 60 ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಸ್ವಯಂಪ್ರೇರಿತರಾಗಿ ರಕ್ತದಾನ ಮಾಡಿದರು.
ಶಿಬಿರವನ್ನು ಮಂಗಳೂರಿನ ರಾಜಲಕ್ಷ್ಮೀ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾಜೇಶ್ ಚೌಟ ಉದ್ಘಾಟಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ಈಶ್ವರ ಪ್ರಸಾದ್,ಲ.ಶ್ರಿನಾಥ್ ಕೊಂಡೆ, ಲ.ದೇವದಾಸ್ ಭಂಡಾರಿ,ಲ.ನಾಗೇಶ್‌ಕುಮಾರ್ ಎನ್.ಜೆ., ವೆನ್ಲಾಕ್ ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಶರತ್ ಕುಮಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಲ.ನಾಗೇಶ್ ಕುಮಾರ್, ಡಾ.ಶರತ್ ಕುಮಾರ್, ರಕ್ತದಾನದ ಮಹತ್ವವನ್ನು ವಿವರಿಸಿದರು. ಲ.ದೇವದಾಸ್ ಭಂಡಾರಿ ಪ್ರಸ್ತಾವನೆಗೈದರು. ಡಾ.ಈಶ್ವರ ಪ್ರಸಾದ್ ಸ್ವಾಗತಿಸಿದರು. ಎನ್ನೆಸ್ಸೆಸ್ ಸಂಚಾಲಕ ಸತ್ಯನಾರಾಯಣ ವಂದಿಸಿದರು. ಲಯನ್ಸ್ ಕ್ಲಬ್ ತುಳುನಾಡಿನ ಅಧ್ಯಕ್ಷ ಲ.ಅಶ್ವಿನ್ ಶೆಟ್ಟಿ ಉಪಸ್ಥಿತರಿದ್ದರು.