×
Ad

ಸಿಯಾಚಿನ್‌ನಲ್ಲಿ ಅರ್ಧಗಂಟೆ ಹುದುಗಿ ಬದುಕಿ ಬಂದ ಯೋಧ ವರುಣ್

Update: 2016-02-12 23:23 IST

ಜಮ್ಮು, ಫೆ.12: ಭಾರತೀಯ ಭೂ ಸೇನೆಯ ಮೇಜರ್ ವರುಣ್ ಖಜುರಿಯಾ 6 ವರ್ಷಗಳ ಹಿಂದೆಯೇ ಕಂಡುಕೊಂಡಂತೆ, ಹಿಮಪಾತದಡಿ ಹೂತು ಹೋಗುವುದು ಹಾಗೂ ರಕ್ಷಣೆ ಸಹ ಒಮ್ಮಮ್ಮೆ ನೋವಿನ ರೂಪದಲ್ಲಿ ಬರುತ್ತದೆ.
ತಾನು ಹಿಮದಡಿ ಹೂತು ಹೋಗಿದ್ದೆ. ಒಮ್ಮಿಂದೊಮ್ಮೆಲೇ ನೀರ್ಗಲ್ಲು ಸರಳೊಂದು (ಹಿಮದಲ್ಲಿ ಹೂತು ಹೋದವರನ್ನು ಹುಡುಕಲು ಒಳಗೆ ತೂರಿಸುವ ಒಂದು ಸರಳು ) ತನ್ನ ತಲೆಗೆ ಬಡಿಯಿತು. ರಕ್ತ ಸುರಿಯಲಾರಂಭಿಸಿತು. ಇದು ರಕ್ಷಕರು, ತಾನು ಹಿಮದೊಳಗೆ ಹೂತು ಹೋಗಿದ್ದೇನೆಂದು ತಿಳಿದುಕೊಂಡ ವಿಧಾನವಾಗಿತ್ತು ಎಂದವರು ವಿವರಿಸಿದ್ದಾರೆ.
ರಕ್ಷಿಸಲ್ಪಟ್ಟ ಕೆಲವೇ ನಿಮಿಷಗಳಲ್ಲಿ ಮೇಜರ್ ಖಜುರಿಯಾ ರಕ್ಷಕನಾಗಿ ಬದಲಾದರು.ಅನೇಕ ಸೈನಿಕರು ಇನ್ನೂ ಟನ್‌ಗಟ್ಟಲೆ ಹಿಮದ ಅಡಿಯಲ್ಲಿದ್ದರು.
ಕಾಶ್ಮೀರದ ಗುಲ್ಮಾರ್ಗ್‌ನ ಸಮೀಪದ ಅಫರ್ವತ್‌ನಲ್ಲಿ ತರಬೇತಿ ಪಡೆಯುತ್ತಿದ್ದ ಕನಿಷ್ಠ 22 ಮಂದಿ ಸೈನಿಕರು. 2010ರ ಫೆ.8ರಂದು ಇಳುಕಲಲ್ಲಿ ಸಂಭವಿಸಿದ್ದ ಹಿಮಪಾತದಡಿಯಲ್ಲಿ ಹೂತು ಹೋಗಿದ್ದರು. ಆ ಸಮಯ ಸುಮಾರು 17 ಸೈನಿಕರು ಸಾವಿಗೀಡಾಗಿದ್ದರು. ರಕ್ಷಣಾ ಕಾರ್ಯ ಒಂದು ವಾರದ ಕಾಲ ನಡೆದಿತ್ತು.
ರಕ್ಷಣಾ ಕಾರ್ಯಾಚರಣೆಯಲ್ಲಿ ಮಾಡಿದ ಕೆಲಸಕ್ಕಾಗಿ ಮೇಜರ್ ವರುಣ್‌ರಿಗೆ ಭೂ ಸೇನೆಯಿಂದ ಸೇನಾ ಪದಕ ಲಭಿಸಿತ್ತು.
ಕೇವಲ 20 ನಿಮಿಷಗಳ ಕಾಲವಾಗಿದ್ದರೂ, ಹಿಮದಡಿಯಲ್ಲಿ ಹೂತು ಹೋಗಿದ್ದ ಸ್ವಾನುಭವ ಹೊಂದಿರುವ ವರುಣ್, ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಸಿಯಾಚಿನ್‌ನಲ್ಲಿ 25 ಅಡಿ ಹಿಮದಾಳದಲ್ಲಿ 6 ದಿನಗಳ ಕಾಲ ಬದುಕಿದ್ದುದು ಪವಾಡಕ್ಕಿಂತ ಕಡಿಮೆಯೇನಲ್ಲ ಎನ್ನುತ್ತಾರೆ.
ಇದು, ಅದ್ಭುತ ಸಹನೆ ಹಾಗೂ ಸಂಕಲ್ಪ ಶಕ್ತಿಗೆ ಪುರಾವೆಯಾಗಿದೆಯೆಂದು ಅವರು ಹೇಳಿದ್ದಾರೆ.
ಸಿಯಾಚಿನ್‌ನಲ್ಲಿ ಫೆ.3ರಂದು ಸಂಭವಿಸಿದ್ದ ಹಿಮಪಾತದಿಂದಾಗಿ ಲ್ಯಾನ್ಸ್ ನಾಯ್ಕ್ ಹನುಮಂತಪ್ಪ ಹಾಗೂ 9 ಮಂದಿ ಸಹ-ಯೋಧರು ಮಂಜುಗಡ್ಡೆಯ ರಾಶಿಯಡಿ ಹೂತು ಹೋಗಿದ್ದರು. ಚಿಂತಾಜನಕ ಸ್ಥಿತಿಯಲ್ಲಿ ಸೋಮವಾರ ಹನುಮಂತಪ್ಪನವರೊಬ್ಬರೇ ಜೀವಂತವಾಗಿ ರಕ್ಷಿಸಲ್ಪಟ್ಟವರಾಗಿದ್ದರು. ಆದರೆ, ಅವರು ಗುರುವಾರ ದಿಲ್ಲಿಯ ಸೇನಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News