ಕೇರಳ ಬಜೆಟ್ ಸೋರಿಕೆ: ಅಚ್ಯುತಾನಂದನ್
ತಿರುವನಂತಪುರ,ಫೆ.12: ಕೇರಳ ಮುಖ್ಯಮಂತ್ರಿ ಉಮ್ಮನ್‌ಚಾಂಡಿ ವಿಧಾನಸಭೆಯಲ್ಲಿ ಶುಕ್ರವಾರ ಮಂಡಿಸಿದ ರಾಜ್ಯಬಜೆಟ್, ಮೊದಲೆ ಸೋರಿಕೆಯಾಗಿತ್ತೆಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ವಿ.ಎಸ್.ಅಚ್ಯುತಾನಂದನ್ ಆರೋಪಿಸಿದ್ದಾರೆ. ಉಮ್ಮನ್‌ಚಾಂಡಿ ಬಜೆಟ್ ಮಂಡಿಸಲು ಆರಂಭಿಸುತ್ತಿದ್ದಂತೆ, ಬಾರ್‌ಲಂಚ ಹಾಗೂ ಸೋಲಾರ್ ಲಂಚ ಹಗರಣಗಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಶಾಮೀಲಾಗಿದ್ದಾರೆಂದು ಆರೋಪಿಸಿ ಅಚ್ಯುತಾನಂದನ್, ಎಡರಂಗದ ಶಾಸಕರೊಂದಿಗೆ ಸಭಾತ್ಯಾಗ ಮಾಡಿದರು. ಆನಂತರ ಅವರು ಸುದ್ದಿಗಾರರ ಜೊತೆ ಮಾತನಾಡುತ್ತಾ, ಸದನದಲ್ಲಿ ಬಜೆಟ್ ಮಂಡನೆಯಾಗುವ ಮುನ್ನವೇ ಸೋರಿಕೆಯಾಗಿತ್ತೆಂದು ಆಪಾದಿಸಿದರು. ತಾನು ಪ್ರಯೋಜನ ಪಡೆದುಕೊಂಡ ವಿವಿಧ ವ್ಯಕ್ತಿಗಳಿಗೆ ಸರಕಾರವು ಬಜೆಟ್‌ನಲ್ಲಿ ಸವಲತ್ತುಗಳನ್ನು ನೀಡಿದೆಯೆಂದು ಅವರು ಆರೋಪಿಸಿದರು.
ಬಾರ್‌ಲಂಚ ಹಾಗೂ ಸೋಲಾರ್ ಹಗರಣಗಳಲ್ಲಿ ಮುಖ್ಯಮಂತ್ರಿ ಹಾಗೂ ಅವರ ಸಂಪುಟದ ಕೆಲವು ಸಚಿವರು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ತಮಗೆ ಚಾಂಡಿಯ ಬಜೆಟ್‌ನ ಅಗತ್ಯವಿಲ್ಲವೆಂದವರು ಹೇಳಿದ್ದಾರೆ.