ಮತದಾನಕ್ಕೆ ಅವಕಾಶ ನೀಡಲು ಸೂಚನೆ
Update: 2016-02-12 23:59 IST
ಉಡುಪಿ, ಫೆ.12: ಜಿಪಂ ಮತ್ತು ತಾಪಂ ಚುನಾ ವಣೆಯ ದಿನವಾದ ಫೆ.20ರಂದು ಎಲ್ಲ ಮತದಾರರು ಮತ ಚಲಾಯಿಸಬೇಕು. ಇದಕ್ಕೆ ಅನುಕೂಲ ವಾಗುವಂತೆ ಆಯಾ ಜಿಲ್ಲೆಗಳಲ್ಲಿರುವ ಎಲ್ಲ ಅಂಗಡಿ, ವಾಣಿಜ್ಯ ಸಂಸ್ಥೆಗಳು, ಕಾರ್ಖಾನೆ ಮತ್ತು ಇತರ ಸಂಸ್ಥೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಸಂವಿಧಾನಾತ್ಮಕ ಹಕ್ಕಾದ ಮತವನ್ನು ಚಲಾಯಿಸಲು ಸಾಧ್ಯವಾಗುವಂತೆ ರಜೆ/ಅನುವು ಮಾಡಿಕೊಡಲು ಮಾಲಕರು/ ನಿಯೋಜಕರಿಗೆ ಸೂಚಿಸಲಾಗಿದೆ ಎಂದು ಕಾರ್ಮಿಕ ಇಲಾಖೆ ಪ್ರಕಟನೆ ತಿಳಿಸಿದೆ.