ಪ್ರತ್ಯೇಕ ಪ್ರಕರಣ: ಇಬ್ಬರ ನಾಪತ್ತೆ

Update: 2016-02-13 18:40 GMT

ಕಾಪು, ಫೆ.13: ಮಲ್ಲಾರು ಗ್ರಾಮದ ರಾಣೆಕೇರಿ ನಿವಾಸಿ ಪ್ರೇಮಾ ಎಂಬವರ ಮಗಳು ಪ್ರವೀಣಿ(25) ಎಂಬಾಕೆ ಫೆ.10ರಂದು ಮನೆಯಿಂದ ಹೋದವಳು ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಾರ್ಕಳ: ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ ಮಹಾಬಲ ಕುಲಾಲ್(38) ಎಂಬವರು ಫೆ.10ರಂದು ಆಸ್ಪತ್ರೆಯಿಂದ ಹೊರಗೆ ಹೋದವರು ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News