ಉಡುಪಿ ಜಿಪಂ: 10 ಕಡೆ ನೇರ, 11 ಕಡೆ ತ್ರಿಕೋನ ಸ್ಪರ್ಧೆ

Update: 2016-02-13 18:45 GMT

ಉಡುಪಿ, ಫೆ.13: ಉಡುಪಿ ಜಿಪಂಗಾಗಿ ಫೆ.20ರಂದು ನಡೆಯುವ ಚುನಾವಣೆಯ ಸ್ಪಷ್ಟ ಚಿತ್ರಣ ಹೊರಬಿದ್ದಿದ್ದು, ಜಿಲ್ಲೆಯ 10 ಕಡೆಗಳಲ್ಲಿ ನೇರ ಸ್ಪರ್ಧೆ, 11 ಕಡೆಗಳಲ್ಲಿ ತ್ರಿಕೋನ, ತಲಾ ಎರಡು ಕಡೆಗಳಲ್ಲಿ ಚತುಷ್ಕೋನ ಹಾಗೂ ಪಂಚಕೋನ ಸ್ಪರ್ಧೆ ನಡೆಯಲಿವೆ. ಶಿರೂರು ಕ್ಷೇತ್ರದಲ್ಲಿ ಅತ್ಯಧಿಕ ಆರು ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಜಾತಿವಾರು ಪ್ರಾತಿನಿಧ್ಯವನ್ನು ನೋಡುವಾಗ ಕಾಂಗ್ರೆಸ್ 11 ಹಾಗೂ ಬಿಜೆಪಿ 9 ಬಿಲ್ಲವ ಸ್ಪರ್ಧಿಗಳಿಗೆ ಮಣೆಹಾಕಿದೆ. ಎರಡೂ ಪಕ್ಷಗಳಲ್ಲಿ ತಲಾ 8 ಮಂದಿ ಬಂಟರು ಸ್ಪರ್ಧಿಸುತ್ತಿದ್ದಾರೆ. ಕಾಂಗ್ರೆಸ್ ಆರು ಸ್ಥಾನಗಳನ್ನು ಪರಿಶಿಷ್ಟ ಮತ್ತು ಇತರ ಹಿಂದುಳಿದ ಜಾತಿಗೆ ನೀಡಿದ್ದರೆ, ಒಂದು ಕಡೆ ಅಲ್ಪಸಂಖ್ಯಾತರನ್ನು (ಶಿರ್ವ- ಕ್ರಿಶ್ಚಿಯನ್) ಸ್ಪರ್ಧೆಗೆ ಇಳಿಸಿದೆ. ಬಿಜೆಪಿ 9 ಕಡೆಗಳಲ್ಲಿ ಪರಿಶಿಷ್ಟ ಮತ್ತು ಇತರ ಹಿಂದುಳಿದ ಜಾತಿಗಳಿಗೆ ಟಿಕೆಟ್ ನೀಡಿದೆ.
ಎರಡೂ ಪಕ್ಷಗಳು ಮಹಿಳಾ ಮೀಸಲಾತಿ ಇರುವ 13 ಕ್ಷೇತ್ರಗಳಲ್ಲಿ ಮಾತ್ರ ಮಹಿಳೆಯರಿಗೆ ಟಿಕೆಟ್‌ಗಳನ್ನು ನೀಡಿವೆ. ಉಡುಪಿ ಜಿಪಂನ 26 ಕ್ಷೇತ್ರಗಳಲ್ಲಿ ಅಂತಿಮವಾಗಿ ಸ್ಪರ್ಧಾಕಣದಲ್ಲಿ ಉಳಿದುಕೊಂಡಿರುವ ಅಭ್ಯರ್ಥಿಗಳ ವಿವರ ಹೀಗಿದೆ.
1.ಶಿರೂರು (ಸಾಮಾನ್ಯ): ಬಟವಾಡಿ ಸುರೇಶ (ಬಿಜೆಪಿ), ಎಸ್.ಮದನ ಕುಮಾರ್ (ಕಾಂಗ್ರೆಸ್), ರಾಜು ದೇವಾಡಿಗ(ಜೆಡಿಎಸ್), ರವಿಚಂದ್ರ ವಿ.ಕೆ. (ಪಕ್ಷೇತರ), ಸುರಯ್ಯೆ ಬಾನು(ಪ), ಸೈಯದ್ ಅಬ್ದುಲ್ ಖಾದರ್ (ಪ).

2.ಬೈಂದೂರು(ಹಿಂ.ಅ ವರ್ಗ): ರಾಜು ಪೂಜಾರಿ (ಕಾ), ಶಂಕರ ಪೂಜಾರಿ ಯಡ್ತರೆ (ಬಿ). 3.ಕಂಬದಕೋಣೆ (ಸಾಮಾನ್ಯ ಮಹಿಳೆ): ಗೌರಿ ದೇವಾಡಿಗ (ಕಾ), ಪ್ರಿಯದರ್ಶಿನಿ ದೇವಾಡಿಗ (ಬಿ), ರೇವತಿ ಪೂಜಾರ್ತಿ (ಜೆ).
4.ತ್ರಾಸಿ (ಸಾಮಾನ್ಯ ಮಹಿಳೆ): ಯಮುನಾ ಎಸ್. ಪೂಜಾರಿ (ಸಿಪಿಎಂ), ಶೋಭಾ ಜಿ.ಪುತ್ರನ್ (ಬಿ), ಸಾಧು ಎಸ್.ಬಿಲ್ಲವ (ಕಾ).
 
5.ವಂಡ್ಸೆ (ಸಾಮಾನ್ಯ): ಕೆ. ಬಾಬು ಶೆಟ್ಟಿ (ಬಿ), ಸುರೇಶ್ ಕಲ್ಲಾಗರ (ಸಿಪಿಎಂ), ಹರ್ಕೂರು ಮಂಜಯ್ಯ ಶೆಟ್ಟಿ (ಕಾ).
6.ಕಾವ್ರಾಡಿ (ಅನುಸೂಚಿತ ಜಾತಿ ಮಹಿಳೆ): ಜ್ಯೋತಿ ಎಂ.(ಕಾ), ಪೂರ್ಣಿಮಾ (ಸಿಪಿಎಂ), ಸುಶೀಲಾ (ಬಿ).
7.ಕೋಟೇಶ್ವರ (ಸಾಮಾನ್ಯ ಮಹಿಳೆ): ಗೀತಾ ಶಂಭು ಪೂಜಾರಿ (ಕಾ), ಎಚ್.ಜ್ಯೋತಿ ಉಪಾಧ್ಯ (ಸಿಪಿಎಂ), ಲಕ್ಷ್ಮೀ ಮಂಜು ಬಿಲ್ಲವ (ಬಿ).
 8.ಬೀಜಾಡಿ (ಸಾಮಾನ್ಯ ಮಹಿಳೆ): ಜ್ಯೋತಿ ಎ.ಶೆಟ್ಟಿ (ಕಾ), ಶ್ರೀಲತಾ ಸುರೇಶ್ ಶೆಟ್ಟಿ (ಬಿ).
9.ಸಿದ್ದಾಪುರ (ಹಿಂ.ಬ ವರ್ಗ): ಸಂಪಿಗೇಡಿ ಸಂಜೀವ ಶೆಟ್ಟಿ (ಕಾ), ಹಾಲಾಡಿ ತಾರಾನಾಥ ಶೆಟ್ಟಿ (ಬಿ).
10.ಹಾಲಾಡಿ (ಹಿಂ. ಅ ವರ್ಗ ಮಹಿಳೆ): ಆಶಾಲತಾ ಚಂದ್ರಶೇಖರ ಪೂಜಾರಿ (ಕಾ), ಸುಪ್ರೀತಾ ಉದಯ ಕುಲಾಲ್ (ಬಿ).
11.ಕೋಟ (ಸಾಮಾನ್ಯ): ತಿಮ್ಮಪ್ಪ (ಕಾ), ರಾಘವೇಂದ್ರ (ಬಿ), ದಿನೇಶ್ ಕೆ. (ಪ), ಪ್ರವೀಣ (ಪ), ಕೆ.ಸಂತೋಷ ಪ್ರಭು (ಪ).
12.ಮಂದರ್ತಿ (ಸಾಮಾನ್ಯ): ಕಿಶೋರ ಕುಮಾರ್(ಕಾ), ಪ್ರತಾಪ್ (ಬಿ).

13.ಪೆರ್ಡೂರು (ಸಾಮಾನ್ಯ): ಅಣ್ಣಯ್ಯ ನಾಯಕ್ (ಜೆ), ಚಂದ್ರ (ಬಿಎಸ್ಪಿ), ಶಂಕರ ಪೂಜಾರಿ ಬಿ.ಎನ್.(ಬಿ), ಸುಧಾಕರ ಎ.ಶೆಟ್ಟಿ (ಕಾ). 14.ಬ್ರಹ್ಮಾವರ (ಸಾಮಾನ್ಯ ಮಹಿಳೆ): ಮಲ್ಲಿಕಾ ಬಿ.ಪೂಜಾರಿ (ಕಾ), ಶೀಲಾ ಕೆ.ಶೆಟ್ಟಿ (ಬಿ).
15.ಕಲ್ಯಾಣಪುರ (ಸಾಮಾನ್ಯ): ಉಮೇಶ ಪೂಜಾರಿ (ಬಿ), ಜನಾರ್ದನ ತೋನ್ಸೆ (ಕಾ), ರಮೇಶ (ಬಿಎಸ್ಪಿ).
16.ಉದ್ಯಾವರ (ಅನುಸೂಚಿತ ಜಾತಿ): ಆನಂದ (ಕಾ), ದಿನಕರ (ಬಿ).

17.ಹಿರಿಯಡ್ಕ (ಅನುಸೂಚಿತ ಪಂಗಡ ಮಹಿಳೆ): ಚಂದ್ರಿಕಾ ಸಿ.ಜೆ. (ಕಾ), ಮಮತ (ಬಿಎಸ್ಪಿ), ಸುನೀತಾ (ಬಿ).
18.ಕುರ್ಕಾಲು (ಹಿಂ.ವರ್ಗ ಅ ಮಹಿಳೆ): ಗೀತಾಂಜಲಿ ಎಂ.ಸುವರ್ಣ (ಬಿ), ಸರಸು ಡಿ.ಬಂಗೇರ (ಕಾ).
19.ಶಿರ್ವ (ಸಾಮಾನ್ಯ): ಕೃಷ್ಣ (ಬಿಎಸ್ಪಿ), ಜಯಂತ್ ಹೆಗ್ಡೆ (ಜೆ), ನವೀನ ಶೆಟ್ಟಿ (ಬಿ), ವಿಲ್ಸನ್ ಹೆರಾಲ್ಡ್ ರಾಡ್ರಿಗಸ್ (ಕಾ), ಅಝೀರ್(ಪ).
20.ಎಲ್ಲೂರು (ಹಿಂ. ಅ ವರ್ಗ ಮಹಿಳೆ): ಕಾಂತಿ (ಕಾ), ಶಿಲ್ಪಾ ಜಿ. ಸುವರ್ಣ (ಬಿ), ಶಾರದಾ ಕೆ.ಪೂಜಾರಿ (ಪ),
21.ಪಡುಬಿದ್ರೆ (ಹಿಂ.ಅ ವರ್ಗ): ಮುಹಮ್ಮದ್ ಇಸ್ಮಾಯೀಲ್ (ಜೆ), ಶಶಿಕಾಂತ್ ಪಡುಬಿದ್ರೆ (ಬಿ), ವೈ.ಸುದೀರ್ ಕುಮಾರ್ (ಕಾ), ಅಬ್ದುಲ್ ಹಮೀದ್ ಕನ್ನಾಂಗರ್ (ಪ).
22.ಹೆಬ್ರಿ(ಸಾಮಾನ್ಯಮಹಿಳೆ): ಜ್ಯೋತಿ ಹರೀಶ್ (ಬಿ), ಯಶೋಧ ಸಂತೋಷ್ ಕುಮಾರ್ ಶೆಟ್ಟಿ (ಕಾ).
23.ಬೆಳ್ಮಣ್ (ಹಿಂ.ಬ ವರ್ಗ ಮಹಿಳೆ): ಚಿತ್ರಾ ದಿವಾಕರ ಶೆಟ್ಟಿ (ಕಾ), ಮೊನಿಕಾ ಪ್ಲೇವಿ ಅಂದ್ರಾದೆ (ಜೆ), ರೇಶ್ಮಾ ಉದಯ ಶೆಟ್ಟಿ (ಬಿ).

24.ಬೈಲೂರು (ಸಾಮಾನ್ಯ): ನೀರೆ ಕೃಷ್ಣ ಶೆಟ್ಟಿ (ಕಾ), ಸುಮಿತ್ ಶೆಟ್ಟಿ (ಬಿ), ನೀರೆ ವಿವೇಕಾನಂದ ಮಲ್ಯ (ಪ).

25.ಮಿಯಾರು (ಹಿಂ.ಅ ವರ್ಗ ಮಹಿಳೆ): ದಿವ್ಯಶ್ರೀ ಗಿರೀಶ್ ಅಮೀನ್ (ಬಿ), ಭಾನು ಭಾಸ್ಕರ್ ಪೂಜಾರಿ (ಕಾ).
26.ಬಜಗೋಳಿ (ಹಿಂ.ಅ ವರ್ಗ): ಉದಯ ಎಸ್.ಕೋಟ್ಯಾನ್ (ಬಿ), ಮಂಜುನಾಥ ಪೂಜಾರಿ (ಕಾ), ತನ್ವೀರ್ ಸಾಹೇಬ್ (ಪ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News