ಕೂಳೂರು: ಕಂದಕಕ್ಕೆ ಉರುಳುವುದರಿಂದ ಪಾರಾದ ಲಾರಿ
Update: 2016-02-14 09:35 IST
ಸುರತ್ಕಲ್, ಫೆ.14: ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತಡೆಗೋಡೆಯನ್ನು ಭೇದಿಸಿ ಕಂದಕಕ್ಕೆ ಬೀಳುವ ಅಪಾಯದಿಂದ ಪಾರಾದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕೂಳೂರು ಸೇತುವೆಯ ಬಳಿ ಇಂದು ಮುಂಜಾವ ನಡೆದಿದೆ.
ಉಡುಪಿ ಕಡೆಯಿಂದ ಕೇರಳಕ್ಕೆ ಸರಕು ಸಾಗಾಟದ ಲಾರಿ ಇದೆಂದು ಹೇಳಲಾಗಿದೆ. ಲಾರಿಯು ಕೂಳೂರು ಸೇತುವೆಯನ್ನು ಸಮೀಪಿಸುವಲ್ಲಿ ಚಾಲಕನ ನಿಯಂತ್ರಣ ರಸ್ತೆ ಬದಿಯ ತಡೆಗೋಡೆಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ತಡೆಗೋಡೆ ಕುಸಿದು ಲಾರಿ ಮುನ್ನುಗಿದೆ. ಇನ್ನೂ ಸ್ವಲ್ಪ ಎಡವಟ್ಟಾಗಿದ್ದರೂ ಲಾರಿ ಕಂದಕಕ್ಕೆ ಉರುಳುವ ಅಪಾಯವಿತ್ತು. ಇದೀಗ ಘಟನೆಯಲ್ಲಿ ಯಾರಿಗೂ ಯಾವುದೇ ಅಪಾಯವಾಗಿರುವ ಬಗ್ಗೆ ತಿಳಿದುಬಂದಿಲ್ಲ.