ಭಾರತ ಮೂಲದ ವಕೀಲ ಶ್ರೀನಿವಾಸನ್‌ ಅಮೆರಿಕ ಸುಪ್ರೀಮ್ ಕೋರ್ಟ್ ಜಡ್ಜ್‌ ನೇಮಕ ಸಂಭವ...!

Update: 2016-02-14 04:27 GMT

ವಾಷಿಂಗ್ಟನ್‌, ಫೆ.14: ಭಾರತ ಮೂಲದ ವಕೀಲ ಶ್ರೀನಿವಾಸನ್‌ ಅಮೆರಿಕದ ಸುಪ್ರೀಮ್‌ ಕೋರ್ಟ್‌‌ನ ನ್ಯಾಯಮೂರ್ತಿಯಾಗಿ ನೇಮಕವಾಗುವುದು ಬಹುತೇಕ ಖಚಿತವಾಗಿದೆ.
ಇತ್ತೀಚೆಗೆ ನಿಧನರಾದ ನ್ಯಾಯಮೂರ್ತಿ ಆಂಟೋನಿನ್ ಸ್ಕಾಲಿಯ  ಅವರ ಉತ್ತರಾಧಿಕಾರಿಯಾಗಿ ಶ್ರೀನಿವಾಸನ್‌ ನೇಮಕವಾಗಲಿದ್ದಾರೆ.
49ರ ಹರೆಯದ ಶ್ರೀನಿವಾಸನ್‌ ಅವರನ್ನು ಬರಾಕ್‌ ಒಬಾಮ ಸರಕಾರ ಆಯ್ಕೆ ಮಾಡಿದ್ದು, ನೇಮಕಾತಿ ಆದೇಶ ಇನ್ನಷ್ಟೇ ಹೊರಬೀಳಲಿದೆ. ಶ್ರೀನಿವಾಸನ್‌ ನ್ಯಾಯಮೂರ್ತಿಯಾಗಿ ನೇಮಕಗೊಂಡಲ್ಲಿ ಅವರು ಭಾರತ ಮೂಲದ ಮೊದಲ ಅಮೆರಿಕದ ನ್ಯಾಯಮೂರ್ತಿ ಎನಿಸಿಕೊಳ್ಳಲಿದ್ದಾರೆ.
ಚಂಡಿಗಢದಲ್ಲಿ ಜನಿಸಿದ ಶ್ರೀನಿವಾಸನ್‌  ಅವರ ತಂದೆ-ತಾಯಿ ಶಿಕ್ಷಕರು. ತಂದೆ ಕಾನ್ಸಾಸ್‌  ವಿವಿ ಗಣಿತ ಪ್ರಾಧ್ಯಾಪಕ. ತಾಯಿ ಕಾನ್ಸಾಸ್‌ ಸಿಟಿ ಆರ್ಟ್‌ ಇನ್ಸಿಟ್ಯೋಟ್‌ನಲ್ಲಿ ಶಿಕ್ಷಕಿ.  ಶ್ರೀನಿವಾಸ್‌ ತಂದೆ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಸ್ನೇಹಿತರಾಗಿ ಉತ್ತಮ ಸಂಬಂಧ ಹೊಂದಿದ್ದಾರೆ.
ಶ್ರೀನಿವಾಸನ್ ಸ್ಟ್ಯಾನ್‌ಫೋರ್ಡ್‌ ವಿವಿಯಲ್ಲಿ ಕಾನೂನು ಪದವಿ ಪಡೆದವರು. ಈ ಹಿಂದೆ ಶ್ರೀನಿವಾಸನ್‌ ಸರ್ಕ್ಯೂಟ್ ಜಡ್ಜ್‌ ಆಗಿ ಪ್ರಮಾಣ ವಚನ ಸ್ವೀಕರಿಸುವ ಸಮಾರಂಭದಲ್ಲಿ ಡಾ.ಮನಮೋಹನ್‌ ಸಿಂಗ್‌ ಕುಟುಂಬ ಭಾಗವಹಿಸಿತ್ತು. ಶ್ರೀನಿವಾಸನ್‌ ಇದೀಗ ಸುಪ್ರೀಮ್‌ ಕೊರ್ಟ್‌ನ ನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸುವ ಹಾದಿಯಲ್ಲಿದ್ದಾರೆ.
   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News