ಫೇಸ್ ಬುಕ್‌ನಲ್ಲಿ ಮುಸ್ಲಿಮ್ ವಿರೋಧಿ ಕಾಮೆಂಟ್‌ ; ಅಸ್ಸಾಂನ ಡಿವೈಎಸ್‌ಪಿ ಬೋರಾ ಸಸ್ಪೆಂಡ್‌ ...!

Update: 2016-02-14 05:15 GMT

ಗುವಾಹಟಿ, ಫೆ.14: ಫೇಸ್‌ಬುಕ್‌ನಲ್ಲಿ ಮುಸ್ಲಿಮ್‌ ವಿರೋಧಿ ಹೇಳಿಕೆಯನ್ನು ಪ್ರಕಟಿಸಿ‌ದ ಕರ್ಬಿ ಅಂಗ್‌ಲಾಂಗ್‌ ಜಿಲ್ಲೆಯ ಪೊಲೀಸ್‌ ಉಪಾಧೀಕ್ಷಕರಾದ ಅಂಜನ್‌ ಬೋರಾ ಅವರನ್ನು ಸರಕಾರ ಅಮಾನತು ಮಾಡಿದೆ.
ಅಂಜನ್‌ ಬೋರಾ ಫೇಸ್ ಬುಕ್‌ನಲ್ಲಿ ಮಸೀದಿಯಲ್ಲಿ  ಪ್ರಾರ್ಥನೆಗಾಗಿ ಮೊಳಗುವ ಅಝಾನ್‌ ಕರೆಯ ಬಗ್ಗೆ ಟೀಕಿಸಿದ್ದರು. ಅಲ್ಪಸಂಖ್ಯಾತ ಸಮುದಾಯದ ಕಾಂಗ್ರೆಸ್‌ ಕಾರ್ಯಕರ್ತ ರಫೀಕುಲ್‌ ಇಸ್ಲಾಮ್‌ ಸೇರಿದಂತೆ ಹಲವರನ್ನು ತಾನು ಕೊಂದಿರುವುದಾಗಿ ಹೇಳಿಕೊಂಡಿದ್ದರು.
" ಜೈಶ್ರೀರಾಮ್‌, ಜೈ ಹಿಂದೂಸ್ತಾನ್‌, ಜೈ ಜೈ ಶ್ರೀ ರಾಮ ಜೈ, ಹಿಂದೂಭೂಮಿ, ಹಿಂದುಸ್ತಾನದಿಂದ ಮುಸ್ಲಿಮ್ರನ್ನು ತೊಲಗಿಸಲು ಹಿಂದೂಗಳು ಪರಸ್ಪರ ಕೈಜೋಡಿಸಬೇಕು " ಎಂದು ಅಂಜನ್‌ ಬೋರಾ ಫೇಸ್ಬುಕ್‌ನಲ್ಲಿ ತನ್ನ ಅಭಿಪ್ರಾಯ ವ್ಯಕ್ತಪಡಿಸಿ ವಿವಾದವನ್ನುಂಟು ಮಾಡಿದ್ದರು.
ಬೋರಾ  ಅವರನ್ನು ಡಿವೈಎಸ್ಪಿ ಹುದ್ದೆಯಿಂದ ತೆಗೆದುಹಾಕುವಂತೆ ಆಗ್ರಹ ಕೇಳಿ ಬಂದಿತ್ತು. ಬೊಡೊಲ್ಯಾಂಡ್‌ ಅಲ್ಪಸಂಖ್ಯಾತ ಘಟಕ(ಎಬಿಎಂಎಸ್‌ಯು) ಪತ್ರಿಕಾ ಕಾರ್ಯದರ್ಶಿ ಕೆ. ಅಲಿ ಅವರು ಬೋರಾ ವಿರುದ್ಧ ಪೊಲೀಸ್‌ ಠಾಣೆಯೊಂದರಲ್ಲಿ ಕೇಸು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News