×
Ad

ಫೆ.19ರಂದು ಅಲೋಶಿಯಸ್ ಕಾಲೇಜಿನಲ್ಲಿ ಇಟಾಲಿಯನ್ ತಿನಿಸುಗಳ ಕಾರ್ಯಾಗಾರ

Update: 2016-02-14 11:26 IST

ಮಂಗಳೂರು, ಫೆ.14: ನಗರದ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಫೆ.19ರಂದು ಇಟಾಲಿಯನ್ ತಿನಿಸುಗಳ ಬಗ್ಗೆ ಅಂತಾರಾಷ್ಟ್ರೀಯ ಕಾರ್ಯಾಗಾರವನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9 ಗಂಟೆಗೆ ಕಾಲೇಜಿನ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಪ್ರಯೋಗಾಲಯ(ಎಫ್‌ಎಸ್‌ಟಿ ಲ್ಯಾಬ್)ದ ಎಲ್‌ಸಿಆರ್‌ಐನಲ್ಲಿ ಈ ಕಾರ್ಯಾಗಾರ ನಡೆಯಲಿದೆ.
ಕಾಲೇಜಿನ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಈ ಕಾರ್ಯಾಗಾರವನ್ನು ಆಯೋಜಿಸುತ್ತಿದ್ದು, ಅರ್ಲ್ಬಟೊ ಪೆಸಾನಿ ಮತ್ತು ಸಿಲ್ವಾನ ರಿಝ್ಝಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಲಿದ್ದಾರೆ. ಪಸ್ತಾ ಆಸೆರ್ಟ್, ಪಸ್ತಾ ವಿದ್ ಪೆಸ್ತಾ ಸಾಸ್, ಕಾಟ್ಲೆಟ್ ಮಿಲನೀಸ್, ಆ್ಯಪಲ್ ಕೇಕ್ ಎಂಬ ತಿನಿಸುಗಳು ಕಾರ್ಯಾಗಾರದ ವಸ್ತು ವಿಷಯವಾಗಿರುತ್ತವೆ.

ಕಾಲೇಜಿನ ಆರೋಗ್ಯ ವಿಜ್ಞಾನ ಮತ್ತು ತಂತ್ರಜ್ಞಾನ ವಿಭಾಗವು ಆಯೋಜಿಸಿರುವ ಅಂತಾರಾಷ್ಟ್ರೀಯ ಎಂಟನೆ ಸರಣಿ ಕಾರ್ಯಾಗಾರಗಳಲ್ಲಿ ಆಯೋಜಿತ 3ನೆ ಇಟಾಲಿಯನ್ ಕಾರ್ಯಾಗಾರ ಇದಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿಗೆ ಎಫ್‌ಎಸ್‌ಟಿ ಸಂಯೋಜಕ ಡಾ.ಮೆಲ್ವಿನ್ ಡಿಕುನ್ಹ ಎಸ್.ಜೆ. ಅವರನ್ನು ಸಂಪರ್ಕಿಸಬಹುದು. ಅವರ ಮೊ. ಸಂಖ್ಯೆ ಹಾಗೂ ಇಮೇಲ್ ವಿಳಾಸ: 9449664651
ಞಛ್ಝಿಡಿಢ್ಞಜಿಃಜಞಜ್ಝಿ.್ಚಟಞ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News