×
Ad

ಸುನಂದಾ ಪುಷ್ಕರ‍್ ಸಾವು ಪ್ರಕರಣ; ಮಾಜಿ ಸಚಿವ ತರೂರ್‌ ವಿಚಾರಣೆ

Update: 2016-02-14 12:03 IST

ದಿಲ್ಲಿ, ಫೆ.14: ಸುನಂದಾ ಪುಷ್ಕರ‍್  ಸಾವಿನ  ಪ್ರಕರಣಕ್ಕೆ ಸಂಬಂಧಿಸಿ ಅವರ ಪತಿ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್‌ ಅವರನ್ನು  ದಿಲ್ಲಿ ಪೊಲೀಸರು ಶನಿವಾರ ಐದು ಘಂಟೆಗಳ ಕಾಲ ವಿಚಾರಣೆಗೊಳಪಡಿಸಿದ್ದಾರೆ.ಸುನಂದಾ ಪುಷ್ಕರ್ ಅವರು ವಿಷ ಸೇವಿಸಿ ಸಾವಿಗೀಡಾಗಿದ್ದಾರೆ ದೆಹಲಿಯ ಅಖಿಲ ಭಾರತೀಯ ವೈದ್ಯ­­ಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಡಿ.29­ರಂದು ನೀಡಿರುವ ಬಳಿಕ ಶಶಿ ತರೂರ್‌ನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ.
ಜನವರಿ 17, 2014ರಂದು ಹೋಟೆಲ್‌ ಕೊಠಡಿ­ಯಲ್ಲಿ ಸುನಂದಾ ಪುಷ್ಕರ್‌ ಶವ ಪತ್ತೆ­ಯಾಗಿತ್ತು. ಆಗ ಶಶಿ ತರೂರ್‌ ಅವರು  ಮನಮೋಹನ್ ಸಿಂಗ್‌ ಅವರ ಯುಪಿಎ ಸರ್ಕಾರದಲ್ಲಿ ಮಾನವ ಸಂಪ­ನ್ಮೂಲ ಅಭಿವೃದ್ಧಿ ಸಚಿವರಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News