ರಾಮಕೃಷ್ಣ ಮಠದ ಸ್ವಚ್ಛತಾ ಅಭಿಯಾನ ಸಮಾರೋಪಕ್ಕೆ ಸಚಿವ ವೆಂಕಯ್ಯ ನಾಯ್ಡು ಆಗಮನ
Update: 2016-02-14 13:50 IST
ಮಂಗಳೂರು, ಫೆ.14: ನಗರದಲ್ಲಿರುವ ರಾಮಕೃಷ್ಣ ಮಠದ ವತಿಯಿಂದ ಮಂಗಳೂರು ಮಹಾ ನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಹಮ್ಮಿಕೊಳ್ಳಲಾಗಿದ್ದ 40 ವಾರಗಳ ಸ್ವಚ್ಛತಾ ಅಭಿಯಾನದ ಸಮಾರೋಪ ಸಮಾರಂಭವು ಇಂದು ಮಂಗಳಾದೇವಿ ಬಳಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಆಡಿಟೋರಿಯಂನಲ್ಲಿ ನಡೆಯಿತು. ಸಮಾರಂಭದ ಮುಖ್ಯ ಅತಿಥಿಯಾಗಿ ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು ಆಗಮಿಸಿ ಮಾತನಾಡಿದರು.
ನಿಟ್ಟೆ ವಿಶ್ವ ವಿದ್ಯಾನಿಲಯದ ಕುಲಪತಿ ಶ್ರೀ ವಿನಯ ಹೆಗ್ಡೆ ,ಸಂಸದ ನಳಿನ್ ಕುಮಾರ್ ಕಟೀಲ್,ಶಾಸಕ ಗಣೇಶ್ ಕಾರ್ಣಿಕ್, ಎಂಆರ್‌ಪಿ ಎಲ್‌ನ ಆಡಳಿತ ನಿರ್ದೇಶಕ ಎಚ್.ಕುಮಾರ್, ಜಿಜಿಎಂ ಲಕ್ಷ್ಮೀ ನಾರಾಯಣ ಪುಣೆ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಶ್ರೀಕಂಠನಂದಾಜಿ, ರಾಮಕೃಷ್ಣ ಮಠದ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದ ಮೊದಲಾದವರು ಉಪಸ್ಥಿತರಿದ್ದರು.