×
Ad

ತುಂಬೆ: ಗ್ಯಾಸ್‌ಟ್ಯಾಂಕರ್ ಪಲ್ಟಿ - ಚಾಲಕ ಮ್ರತ್ಯು

Update: 2016-02-14 16:30 IST

ಬಂಟ್ವಾಳ: ಗ್ಯಾಸ್‌ ತುಂಬಿದ ಟ್ಯಾಂಕರೊಂದು ತಾಲೂಕಿನ ತುಂಬೆ ಬಿ.ಎ. ಕಾಲೆಜಿನ ಬಳಿ ಪಲ್ಟಿಯಾಗಿ ಚಾಲಕ ಮ್ರತಪಟ್ಟ ಘಟನೆ ರವಿವಾರ ಮಧ್ಯಾಹ್ನ 4 ಗಂಟೆಯ ವೇಳೆಗೆ ಸಂಭವಿಸಿದೆ. ಮಂಗಳೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ಈ ಟ್ಯಾಂಕರ್, ಬಿ.ಎ. ಶಾಲೆಯ ಬಳಿಯ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆಗೆ ಪಲ್ಟಿಯಾಗಿದೆ.ಟ್ಯಾಂಕರ್ ಪಲ್ಟಿಯಾದ ಜಾಗ ಜನನಿಬಿಡ ಪ್ರದೇಶವಾಗಿದ್ದು, ಅನಿಲ ಸೋರಿಕೆಯಾಗದಿದ್ದರಿಂದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ. ಆದರೆ, ಟ್ಯಾಂಕರ್‌ನಲ್ಲಿದ್ದ ಡಿಸೆಲ್ ಸೋರಿಕೆಯಾಗಿ ರಸ್ತೆಯಲ್ಲಿ ಹರಿದಿದೆ..ಸ್ಥಳದಲ್ಲಿ ಕೆಲವೊತ್ತು ಸಂಚಾರ ಸ್ಥಗಿತಗೊಳಿಸಲಾಗಿತ್ತು.

ಸ್ಥಳಕ್ಕೆ ಸಂಚಾರಿಠಾಣೆ, ಗ್ರಾಮಾಂತರಠಾಣೆ ಪೊಲೀಸರು, ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಮುಂದಿನ ಕ್ರಮಕೈಗೊಂಡಿದ್ದಾರೆ.

ಟ್ಯಾಂಕರ್ ಪಲ್ಟಿ ನೋಡಲು ಬಂದ ಯುವಕನಿಗೆ ಟ್ಯಾಂಕರ್‌ಢಿಕ್ಕಿ: ಗಂಭೀರ


ಬಂಟ್ವಾಳ: ತಾಲೂಕಿನ ತುಂಬೆ ಬಿ.ಎ. ಕಾಲೇಜಿನ ಬಳಿ ಗ್ಯಾಸ್‌ಟ್ಯಾಂಕರೊಂದು ಪಲ್ಟಿಯಾದ ಸುದ್ದಿ ಕೇಳಿ ನೋಡಲೆಂದು ಸ್ಕೂಟರ್‌ನಲ್ಲಿ ಬರುತ್ತಿದ್ದ ಯುವಕನಿಗೆ ಟ್ಯಾಂಕರೊಂದು ಢಿಕ್ಕಿಯಾದ ಘಟನೆ ಕೆಳಗಿನ ತುಂಬೆಯಲ್ಲಿ ನಡೆದಿದೆ.
ಕೆಳಗಿನ ತುಂಬೆ ಎಸ್.ಐ. ಆನಂದ್ ಎಂಬವರ ಪುತ್ರ ವಿನೋದ್‌ ಗಾಯಗೊಂಡ ಯುವಕ.ಈತನನ್ನುತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಗ್ಯಾಸ್‌ಟ್ಯಾಂಕರ್ ಪಲ್ಟಿಯಾಗಿದ್ದರಿಂದ ಒಂದು ಬದಿಯ ರಸ್ತೆಯನ್ನು ಮುಚ್ಚಿ ಇನ್ನೊಂದು ಬದಿಯ ರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿತ್ತು.ಇದರ ಅರಿವಿಲ್ಲದೆ ಒಳ ರಸ್ತೆಯಿಂದ ಒಮ್ಮೆಲೆ ಹೆದ್ದಾರಿಗೆ ಸ್ಕೂಟರ್‌ನಲ್ಲಿ ಪ್ರವೇಶಿಸಿದಾಗ ಹಿಂಭಾಗದಲ್ಲಿ ಬರುತ್ತಿದ್ದ ಟ್ಯಾಂಕರ್ ಲಾರಿಢಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News