×
Ad

ದಿಲ್ಲಿ ಸರಕಾರಕ್ಕೆ ಒಂದು ವರ್ಷ: ನೀರು ವಿದ್ಯುತ್ ಬಿಲ್ ಮನ್ನಾ ಘೋಷಿಸಿದ ಕೇಜ್ರಿವಾಲ್!

Update: 2016-02-14 16:46 IST

ಹೊಸದಿಲ್ಲಿ: ದಿಲ್ಲಿ ಸರಕಾರಕ್ಕೆ ಒಂದು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ ಸರಕಾರದ ಕೆಲಸಗಳನ್ನು ಅವಲೋಕನಕ್ಕೆ ಇಳಿದ ಮುಖ್ಯಮಂತ್ರಿ ಕೇಜ್ರಿವಾಲ್ ತನ್ನ ಮಾತು ಪ್ರಾರಂಭಿಸುತ್ತಿದ್ದಂತೆ ದಿಲ್ಲಿನಿವಾಸಿಗಳಿಗೆ ದೊಡ್ಡ ಕೊಡುಗೆಯನು ಘೋಷಿಸಿದ್ದಾರೆ. 2015 ನವೆಂಬರ್ 30ರವರೆಗಿನ ನೀರು ಮತ್ತು ವಿದ್ಯುತ್ ಬಿಲ್‌ನ್ನು ಮನ್ನಾ ಆಗಲಿದೆ.ಎ-ಬಿ ಗ್ರೇಡ್ ಜನರಿಗೆ ಶೆ. 25 ವಿದ್ಯತ್ ಬಿಲ್ ಮನ್ನಾ ಸಿಗ್ರೇಡ್ ಜನರಿಗೆ ಶೆ. 50 ವಿದ್ಯುತ್ ಬಿಲ್ ಮನ್ನಾ ಮಾಡಿದ್ದಾರೆ.

ತಮ್ಮ ಮನೆಯಲ್ಲಿ ನೀರಿನ ಮೀಟರ್ ಅಳವಡಿಸಿಕೊಳ್ಳಿರಿ ಎಂದು ಜನರಿಗೆ ಕರೆ ನೀಡಿರುವ ಅವರು 2017ಕ್ಕಾಗುವಾಗ ಎಲ್ಲ ಮನೆಗಳಿಗೂ ನೀರು ತಲುಪಲಿದೆ. 20,000 ಲೀಟರ್ ನೀರು ಉಚಿತ ನೀಡುವ ನಿರ್ಧಾರವನ್ನು ಶಾಘಿಸಿದ ಅವರು ಇದರಿಂದಾಗಿ ಜನರು ಈಗ ನೀರನ್ನು ಉಳಿಸಿಕೊಳ್ಳಲು ಆರಂಭಿಸಿದ್ದಾರೆ. ಹೀಗಾಗಿ 176 ಕೋಟಿ ರೂ. ರೆವೆನ್ಯೂ ಉಳಿಕೆಯಾಗಿದೆ ಎಂದಿದ್ದಾರೆ.

ಇದೇಸಂದರ್ಭದಲ್ಲಿ ವಾಟರ್‌ಬೋರ್ಡ್ ಮತ್ತು ವಿದ್ಯುತ್ ವಿಭಾಗವನ್ನು ಅವರು ಶ್ಲಾಘಿಸಿದ್ದಾರೆ. ಸರಕಾರ ಹಳೆಯ ವಿದ್ಯುತ್ ಗುತ್ತಿಗೆಯನ್ನು ರದ್ದು ಪಡಿಸಿ ಹೊಸ ಗುತ್ತಿಗೆ ನೀಡಲು ಸರಕಾರ ಶ್ರಮಿಸುತ್ತಿದೆ. ಸರಕಾರ 45 ಹೊಸ ಶಾಲೆಗಳನ್ನು ತೆರೆಯಲು ಸಿದ್ಧತೆ ನಡೆಸಿದೆ. ಜೊತೆಗೆ ನೂರು ಶಾಲೆಗಳಿಗೆ ಭೂಮಿಯ ಹುಡುಕಾಟ ನಡೆಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News