ಉತ್ತರಪ್ರದೇಶ : ಪತ್ನಿಮಕ್ಕಳನ್ನು ಗುಂಡಿಟ್ಟು ಕೊಂದು ಆತ್ಮಹತ್ಯೆ ಮಾಡಿಕೊಂಡ ಬಿಜೆಪಿ ನಾಯಕ
ಕಟ್ನಿ:ಬದೊರಿಬಂದ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶುಕ್ರವಾರ ರಾತ್ರಿ ಹನ್ನೆರಡು ಗಂಟೆ ಸಮಯದಲ್ಲಿ ಬಿಜೆಪಿ ನಾಯಕನೊಬ್ಬ ಪತ್ನಿ ಹಾಗೂ ಇಬ್ಬರು ಮಕ್ಕಳ ಜೊತೆ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಹತ್ಯೆ- ಆತ್ಮಹತ್ಯೆ ಎಂಬುದರ ನಡುವೆ ಈಗ ವಿವಾದ ಸೃಷ್ಟಿಯಾಗಿದ್ದು ಪೊಲೀಸರು ಈವರೆಗೂ ಸ್ಪಷ್ಟಪಡಿಸಿಲ್ಲ. ಶನಿವಾರ ಬೆಳಗ್ಗೆ ನೋಡುವಾಗ ಮನೆಯಲ್ಲಿ ಶವಗಳು ಬಿದ್ದಿದ್ದವು ಅಲ್ಲದೆ ಎರಡು ಲೆಬ್ರೋಡರ್ ನಾಯಿಗಳಿಗೆ ಗುಂಡು ಹೊಡೆದು ಸಾಯಿಸಲಾಗಿತ್ತು.
ಸ್ಥಳೀಯ ಬಿಜೆಪಿ ನಾಯಕ ಶಶಾಂಕ್ ತಿವಾರಿ, ಪತ್ನಿ ಮಿನಿ, ಮಗಳು ಮಣಿ ಯಾನೆ ಚಾಹತ್, ಪುತ್ರ ಅಭಿ ಯಾನೆ ಅಭೇಂದ್ರ ರಕ್ತದ ಮಡುವಿನಲ್ಲಿ ಬಿದ್ದಿದ್ದರೆಂದು ಪೊಲೀಸರು ತಿಳಿಸಿದ್ದಾರೆ.ಪೊಲೀಸರು ಮನೆಗೆ ತಲುಪಿದಾಗ ಟಿವಿ ಚಾಲನೆಯಲ್ಲಿತ್ತು. ಶಶಾಂಕ್‌ರ ಮೊಬೈಲ್ ರಿಂಗ್ ಆಗುತ್ತಿತ್ತು. ಶಂಶಾಕ್ ತನ್ನ ಪತ್ನಿಮಕ್ಕಳಿಗೆ ಗುಂಡಿಟ್ಟು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಹೇಳಲಾಗುತ್ತಿದೆ. ಬಿಜೆಪಿ ನಾಯಕ ಮತ್ತು ಕುಟುಂಬದ ಸಾವಿನ ಸುದ್ದಿ ಹರಡಿ ಜನರು ಬಂದು ಸೇರತೊಡಗಿದ್ದರು.
ಶಶಾಂಕ್ ಪತ್ನಿ ಮಕ್ಕಳಿಗೆ ಗುಂಡು ಹೊಡೆದು ಸಾಯಿಸಿದ ಮೇಲೆ ಪೆಟ್ರೋಲ್ ಬಂಕ್‌ನ್ನು ಯಾರು ಖರೀದಿಸಬೇಡಿ. ನಾಶವಾಗಿ ಹೋಗುತ್ತೀರಾ ಎಂದು ಕಟ್ನಿಯ ಎಸ್ಪಿಗೆ ಆತ್ಮಹತ್ಯೆ ಪತ್ರ ಬರೆದು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೋಟ್ಯಂತರ ರೂ. ಸಾಲದಲ್ಲಿ ಸಿಲುಕಿದ್ದ ಈ ಬಿಜೆಪಿ ನಾಯಕ ತುಂಬ ನೊಂದುಕೊಂಡಿದ್ದರು. ಕಳೆದ ಚುನಾವಣೆಯಲ್ಲಿ ಸಮಾಜವಾದಿ ಪಕ್ಷದಿಂದ ಟಿಕೆಟ್ ಕೇಳಿದ್ದ ಶಶಾಂಕ್‌ರಿಗೆ ಅದುದೊರಕಿರಲಿಲ್ಲ. ಅವರ ಪೆಟ್ರೋಲ್ ಬಂಕ್ ಹಲವು ಬಾರಿಮುಚ್ಚಿತ್ತು.
ಶನಿವಾರದಂದು ಅದರ ಪುನರಾರಂಭ ಸಮಾರಂಭವಿತ್ತು. ಅದರ ಆಮಂತ್ರಣ ಪತ್ರಿಕೆ ಹಂಚಿದ್ದರು.