"ಹಫೀಜ್ಹ್ ಸಯೀದ್ ಬೆಂಬಲ"ಕ್ಕೆ ರಾಜ್ ನಾಥ್ ಸಾಕ್ಷ್ಯ ನೀಡಲಿ: ಯೆಚೂರಿ

Update: 2016-02-14 14:13 GMT

ಹೊಸದಿಲ್ಲಿ , ಫೆ. ೧೪ : ಜೆಎನ್ ಯು ಘಟನೆಗೆ ಹಫೀಜ್ಹ್ ಸಯೀದ್ ಬೆಂಬಲ ಇತ್ತು ಎಂಬ ಗೃಹ ಸಚಿವ ರಾಜನಾಥ್ ಸಿಂಗ್ ಅವರ ಹೇಳಿಕೆಗೆ ತೀವ್ರ ಅಸಮಾಧಾನ ವ್ಯಕ್ತವಾಗಿದೆ. " ನಿನ್ನೆ ನಾವು ಅವರನ್ನು ಭೇಟಿಯಾದಾಗ ಈ ವಿಷಯವನ್ನೇ ಅವರು ಪ್ರಸ್ತಾಪಿಸಲಿಲ್ಲ. ಈಗ ಇಂತಹ ಗಂಭೀರ ಆರೋಪ ಮಾಡಿದ್ದಾರೆ. ಇದಕ್ಕೆ ಅವರ ಬಳಿ ಪ್ರಬಲ ಸಾಕ್ಷ್ಯಾಧಾರಗಳು ಇವೆ ಎಂದು ನಾವು ಭಾವಿಸುತ್ತೇವೆ. ಇದು ಜೆಎನ್ ಯು ಗೌರವಕ್ಕೆ ಮಸಿ ಬಳಿಯುವ ಏಕೈಕ ಉದ್ದೇಶದಿಂದ ನಡೆಯುತ್ತಿರುವ ಪ್ರಯತ್ನ ಎಂಬಂತೆ ಕಾಣುತ್ತಿದೆ" ಎಂದು ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರು ಹೇಳಿದ್ದಾರೆ. 

" ಈ ಎನ್ ಡಿ ಎ ಸರಕಾರದ ಮಾನದಂಡದಿಂದ ನೋಡಿದರೂ ವಿದ್ಯಾರ್ಥಿಗಳ ಮೇಲೆ ಹೀಗೆ ದೌರ್ಜನ್ಯ ನಡೆಸುವುದು ಹಾಗು ಅದನ್ನು ಹಫೀಜ್ಹ್ ಸಯೀದ್ ನ ಹೆಸರಲ್ಲಿ ಸಮರ್ಥಿಸಿಕೊಳ್ಳುವುದು ಅತ್ಯಂತ ಕೀಳು ಮಟ್ಟದ ರಾಜಕೀಯ. ಜೆಎನ್ ಯು ವಿದ್ಯಾರ್ಥಿಗಳ ವಿರುದ್ಧ ಮಾಡಿರುವ ಈ ಆರೋಪದ ಬಗ್ಗೆ ಅವರಿಗೆ ಲಭ್ಯವಾಗಿರುವ ಸಾಕ್ಷ್ಯಗಳನ್ನು ಗೃಹ ಸಚಿವರು ಬಹಿರಂಗಪಡಿಸಬೇಕು" ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯ ಮಂತ್ರಿ ಒಮರ್ ಅಬ್ದುಲ್ಲಾ ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News