ಕೊಣಾಜೆ: ಕಾಂಗ್ರೆಸ್ ಪ್ರಚಾರಕ್ಕೆ ಮುತ್ತಕ್ಕನ ಪಾಡ್ದನ ಶೈಲಿಯ ಹಾಡು

Update: 2016-02-14 13:30 GMT

ಕೊಣಾಜೆ : ಮತದಾನದ ಸಂದರ್ಭದಲ್ಲಿ ವಿನೂತನ ರೀತಿಯಲ್ಲಿ ಮತಯಾಚನೆ ಮಾಡುವುದು ಸಹಜ. ಹಾಗೆಯೇ ಕೊಣಾಜೆಯಲ್ಲಿ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ಕೊಣಾಜೆ ಪಂಚಾಯಿತಿಯ ಹಿರಿಯ ಸದಸ್ಯೆ ಮುತ್ತು ಶೆಟ್ಟಿ ಅವರು ಪಾಡ್ದನದ ದಾಟಿಯಲ್ಲಿ ಪದ ಹಾಡುವುದರ ಮೂಲಕ ಅಸೈಗೋಳಿ ಸೈಟ್‌ನಲ್ಲಿ ಮತ ಯಾಚಿಸಿದರು.

    ಅಸೈಗೋಳಿ ಸೈಟ್‌ನಲ್ಲಿ ಪ್ರಚಾರ ಸಂದರ್ಭದಲ್ಲಿ ಮತದಾರರು, ಅಭ್ಯರ್ಥಿ ಹಾಗೂ ಕಾರ್ಯುಕರ್ತರಿಗೆ ಮುತ್ತು ಶೆಟ್ಟಿ ಹುರುಪು ತುಂಬಿದರು. ಮುತ್ತಕ್ಕ ಎಂದೇ ಜನಜನಿತರಾಗಿರುವ ಮುತ್ತು ಶೆಟ್ಟಿ ಹಿಂದಿನಿಂದಲೂ ಕೃಷಿಯಲ್ಲಿ ತೊಡಗಿಸಿಕೊಂಡವರು. ಈ ಮೂಲಕ ಪಾಡ್ದನದಲ್ಲಿ ಹೆಸರು ಗಳಿಸಿದ್ದು ಕೊಣಾಜೆ ಹಾಗೂ ಸುತ್ತಮುತ್ತಲಿನ ಗ್ರಾಮದಲ್ಲಿ ನಡೆಯುವ ಯಾವುದೇ ಕೃಷಿ ಸಂಬಂಧಿ ಕಾರ್ಯಕ್ರಮಗಳಿಗೆ ಪಾಡ್ದನ ಮೂಲಕ ಚಾಲನೆ ನೀಡಲು ಮುತ್ತಕ್ಕ ಆಗಮಿಸುತ್ತಾರೆ. ಜಿಲ್ಲಾ ಪಂಚಾಯಿತಿಯ ಅಭ್ಯರ್ಥಿ ರಶೀದಾ ಬಾನು ಹಾಗೂ ತಾ.ಪಂ.ಅಭ್ಯರ್ಥಿ ಪದ್ಮಾವತಿ ಅವರು ಕಾಂಗ್ರೆಸ್ ಮುಖಂಡರ ಜೊತೆ ಕ್ಷೇತ್ರ ವ್ಯಾಪ್ತಿ ಮನೆ ಮನೆ ಪ್ರಚಾರ ಬಿರುಸಿನಿಂದ ನಡೆಸುತ್ತಿದ್ದಾರೆ.

    ಈ ಸಂದರ್ಭದಲ್ಲಿ ಮಾಜಿ ಸದಸ್ಯ ಮಹಮ್ಮದ್ ಮುಸ್ತಫಾ ಹರೇಕಳ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶೌಕತ್ ಅಲಿ, ಉಪಾಧ್ಯಕ್ಷೆ ಲಲಿತಾ ನಾಯಕ್, ಸ್ಥಳೀಯ ಮುಖಂಡರಾದ ಹಾಜಿ ಟಿ.ಎಸ್.ಅಬ್ದುಲ್ಲಾ ಸಾಮಣಿಗೆ, ಸಂತೋಷ್ ಶೆಟ್ಟಿ, ನಝರ್ ಪಟ್ಟೋರಿ, ನಾಸೀರ್ ಸಾಮಣಿಗೆ, ಹಾಲಿ ಮಾಜಿ ಜನಪ್ರತಿನಿಧಿಗಳು ಪ್ರಚಾರ ಕಾರ್ಯದಲ್ಲಿ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News