ಪುತ್ತೂರು : ಬೇಳ್ಪಾಡಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಐದು ಜತೆ ಸಾಮೂಹಿಕ ವಿವಾಹ.

Update: 2016-02-14 14:25 GMT

 ಪುತ್ತೂರು : ಕುಂತೂರು ಬೇಳ್ಪಾಡಿ ಚಾರಿಟೇಬಲ್ ಟ್ರಸ್ಟ್(ರಿ) ಇದರ ಅಧ್ಯಕ್ಷರಾದ ಮಹಮ್ಮದ್ ಸಫ್ವಾನ್ ಕುಂತೂರು ಇವರ ವಿವಾಹ ಮತ್ತು ಬಡ ಕುಟುಂಬದ ಐದು ಜೋಡಿಗಳ ಸಾಮೂಹಿಕ ವಿವಾಹವು ಕುಂತೂರು ಮುಡಿಪಿನಡ್ಕ ಮಹಮ್ಮದ್ ಹಾಜಿ ವೇದಿಕೆಯಲ್ಲಿ ಭಾನುವಾರದಂದು ನಡೆಯಿತು. ಸಫ್ವಾನ್ ರವರ ತಂದೆ ಮರ್ಹೂಂ ಮಹಮ್ಮದ್ ರವರು ತನ್ನ ಮಗನ ಮದುವೆ ಸಂದರ್ಭದಲ್ಲಿ ಒಂದು ಬಡ ಜೋಡಿಯ ವಿವಾಹವಾದರೂ ನಡೆಸಬೇಕೆಂಬ ಕನಸಿನಂತೆ ಭಾನುವಾರದಂದು ಐದು ಜತೆ ಬಡ ಜೋಡಿಯ ವಿವಾಹವನ್ನು ನೆರವೇರಿಸಲಾಯಿತು. ಇದರಲ್ಲಿ ವಧೂ ವರರಿಗೆ ತಲಾ ಒಂದು ಲಕ್ಷದಂತೆ ನಗದು, ವಧುವಿಗೆ 10 ಪವನ್ ಚಿನ್ನಾಭರಣ ಹಾಗೂ ಮದುವೆಯ ಸಂಪೂರ್ಣ ಖರ್ಚನ್ನು ನೀಡಲಾಯಿತು.

        ಬೆಳ್ತಂಗಡಿ ತಾಲೂಕು ಅಜಿಕುರಿ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರಿ ಫೌಝಿಯಾ ಎಂಬಾಕೆಯನ್ನು ಉಪ್ಪಿನಂಗಡಿ ಕುಂಜಿಬೆಟ್ಟು ನಿವಾಸಿ ಉಮ್ಮರ್ ಎಂಬವರ ಪುತ್ರ ಶರಾಫತ್ ಆಲಿ ಎಂಬವರು ವಿವಾಹವಾದರು.

        ಮಂಗಳೂರು ಬೋಳಿಯಾರ್ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರಿ ನುಸೈಬಾ ಎಂಬಾಕೆಯನ್ನು ಬೋಳಿಯಾರ್ ನಿವಾಸಿ ಹೈದರ್ ಎಂಬವರ ಪುತ್ರ ಅಬ್ದುಲ್ ನಾಸಿರ್ ಎಂಬವರು ವಿವಾಹವಾದರು.

        ಮರ್ಧಾಳ ಪಟ್ಟೆ ಮನೆ ನಿವಾಸಿ ಶೇಖ್ ಇಸ್ಮಾಯಿಲ್ ಎಂಬವರ ಪುತ್ರಿ ಹಸೀನಾ ಬಾನು ಎಂಬಾಕೆಯನ್ನು ಕಡಬ ನಿವಾಸಿ ಮಹಮ್ಮದ್ ಹನೀಫ್ ಎಂಬವರ ಪುತ್ರ ಮಹಮ್ಮದ್ ಶಾಹಿದ್ ಎಂಬವರು ವರಿಸಿದರು.

        ಬೆಳ್ತಂಗಡಿ ಮಾಪಲ ಮನೆ ನಿವಾಸಿ ಅಬ್ಬಾಸ್ ಎಂಬವರ ಪುತ್ರಿ ಸಹಲಾ ಬಾನು ಎಂಬಾಕೆಯನ್ನು ಬೆಳ್ತಂಗಡಿ ತಾಲೂಕು ಕರಾಯ ನಿವಾಸಿ ಎನ್.ಅಬೂಬಕ್ಕರ್ ಎಂಬವರ ಪುತ್ರ ಅಬ್ದುಲ್ ರಹಿಮಾನ್ ವಿವಾಹವಾದರು.

ಬಹುಮಾನ್ಯರಾದ ಅಲಿ ತಂಞಳ್, ಸುಳ್ಯ ಶಾಸಕರಾದ ಎಸ್.ಅಂಗಾರ, ಪುತ್ತೂರು ಬ್ಲಾಕ್ ಕಾಂಗ್ರೇಸ್ ಮಾಜಿ ಅಧ್ಯಕ್ಷ ಹೇಮಾನಾಥ ಶೆಟ್ಟಿ, ಜಯಕರ್ನಾಟಕದ ತಾಲೂಕು ಅಧ್ಯಕ್ಷ ನೆಲ್ಲಿಕಟ್ಟೆ ಜಗನ್ನಾಥ ಶೆಟ್ಟಿ, ಪೆರಾಬೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ, ಉಪ್ಪಿನಂಗಡಿ ಕೇಂದ್ರ ಜುಮ್ಮಾ ಮಸೀದಿ ಅಧ್ಯಕ್ಷ ಮುಸ್ತಾಫ ಕೆಂಪಿ, ಪುತ್ತೂರು ಯುವ ಕಾಂಗ್ರೇಸ್‌ನ ರವಿಪ್ರಸಾದ್ ಶೆಟ್ಟಿ, ಮಾಜಿ ಜಿಲ್ಲಾಪಂಚಾಯತ್ ಸದಸ್ಯ ಬಾಲಕೃಷ್ಣ ಬಾಣಜಾಲು, ಎಂಡೋ ವಿರೋಧಿ ಹೋರಾಟ ಸಮಿತಿಯ ಫೀರ್ ಮಹಮ್ಮದ್, ಆಲಂಕಾರು ಸುಬ್ರಹ್ಮಣ್ಯ ದೇವಸ್ಥಾದ ರಾಮಮೋಹನ ರೈ, ದುರ್ಗಾಂಬಾ ಸ್ಕೂಲಿನ ಮಾಜಿ ಪ್ರಿನ್ಸಿಪಾಲ್ ವಿಠಲ ರೈ, ಎಪಿಎಂಸಿಯ ರಾಯಿ ಅಬ್ರಹಾಂ, ಪುತ್ತೂರು ಪುರಸಭೆಯ ಅನ್ವರ್ ಕಾಸಿಂ, ಕೊಲ ಪಂಚಾಯತ್ ಸದಸ್ಯ ಕೆ. ಸುಲೇಮಾನ್,ಆತೂರು ಬದ್ರಿಯಾ ಮಸೀದಿ ಅಧ್ಯಕ್ಷ ಹೆಚ್.ಆದಂ, ಮೆಸ್ಕಾಂ ಸಲಹ ಸಮಿತಿಯ ಮಹಮ್ಮದ್ ಕುಂಙ್ಞ, ನೆಕ್ಕರೆ ಮಸೀದಿಯ ಅಧ್ಯಕ್ಷ ಅಬ್ದುಲ್ಲಾ ಕುಂಙ್ಞ, ಪೆರಾಬೆ ಮಾಜಿ ಪಂಚಾಯತ್ ಉಪಾಧ್ಯಕ್ಷ ಯಾಖುಬ್, ಕಡಬ ವಿಶೇಷ ತಹಶೀಲ್ದಾರ್ ಬಿ. ಲಿಂಗಯ್ಯ ಸೇರಿದಂತೆ ಹಲವು ಗಣ್ಯಾತಿಗಣ್ಯರು, ಉಲಮಾ ಉಮರಾ ನೇತಾರರು ಭಾಗವಹಿಸಿದರು. ಕಾರ್ಯಕ್ರಮದಲ್ಲಿ ಟ್ರಸ್ಟಿ ಗಳಾದ ಉಮ್ಮರ್ ಉದವಿ, ಅಬ್ದುಲ್ ಖಾದರ್, ಅಬ್ದುಲ್ ಮುಡಿಪಿನಡ್ಕ ವಿವಿಧ ಕಾರ್ಯಕ್ರಮ ನಿರ್ವಹಿಸಿದರು. ಐ್ರಸ್ಟ್ ಸಂಚಾಲಕರಾದ ಅಬ್ಬಾಸ್ ಕುಂತೂರು ಹಾಗೂ ಪತ್ರಕರ್ತ ನಝಿರ್ ಕೊಲ, ಸಿದ್ದೀಕ್ ಮುಡಿಪಿನಡ್ಕ ಅಥಿತಿಗಳನ್ನು ಬರಮಾಡಿಕೊಂಡು ಸ್ವಾಗತಿಸಿ ವಂದಿಸಿದರು.ಇದೇ ವೇಳೆ ಕವ್ವಾಲಿ ಹಾಡು ಹಾಗೂ ಕೇರಳ ತಂಡದಿಂದ ಬುರ್ದಾಮಜ್ಲಿಸ್ ನಡೆಯಿತು.

ಕುಂತೂರು ಪೆರಾಬೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಡಿಪಿನಡ್ಕದ ಆರು ಎಕ್ರೆ ಪ್ರದೇಶದಲ್ಲಿ ಚಾರಿಟೇಬಲ್ ಟ್ರಸ್ಟ್ ಐವತ್ತು ಕೋಟಿಯ ಯೋಜನೆಗಳಾದ ಆಸ್ಪತ್ರೆ, ಇಂಜಿನೀಯರಿಂಗ್ ಕಾಲೇಜು, ಲಾಡ್ಜಿಂಗ್ ರೂಪಿಸಿಕೊಂಡಿದ್ದು ಇದರ ಪ್ರಾತ್ಯಕ್ಷತೆಯ ಮೂಲಕ ಯೋಜನೆಯನ್ನು ವಿವರಿಸಿದರು ಅದಲ್ಲದೇ ಪ್ರತೀ ವರ್ಷವೂ ಸಹೃದಯಿ ಬಂಧುಗಳ ಸಹಕಾರದೊಂದಿಗೆ ಟ್ರಸ್ಟಿ ಇನ್ನು ಬಡವರನ್ನು ಗುರುತಿಸಿಕೊಂಡು ಇಂತಹ ಸಮೂಹಿಕ ವಿವಾಹಕ್ಕೆ ಹೆಜ್ಜೆ ಇಡುತ್ತೇವೆ ಎಂಬ ವಿಚಾರವನ್ನು ಟ್ರಸ್ಟಿ ಕಾರ್ಯದರ್ಶಿ ಉಮ್ಮರ್ ಉದವಿಯವರು ಬಹಿರಂಗ ಪಡಿಸಿದ್ದಾರೆ. ಇದೇ ವೇಳೆ ಟ್ರಸ್ಟಿ ಅಧ್ಯಕ್ಷ ವರ ಸಫ್ವಾನಿಗೆ ಕೇರಳ ಮೂಲದ ಟ್ರಸ್ಟ್ ನಿರ್ಧೇಶಕ ಅಬ್ದುಲ್ ಖಾದರ್ ಎಂಬವರು ದುಭಾರಿ ಬೆಲೆಯ ಹಾಡೀ ಕಾರೊಂದನ್ನು ಗಿಪ್ಟಾಗಿ ನೀಡಿದ್ದಾರೆ ಇದಲ್ಲದೇ ವಧುವಿನ ಮಾವ ಐ20 ಕಾರು ಕೂಡಾ ಗಿಪ್ಟ್ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News