ಹೃದಯಾಘಾತದಿಂದ ಕೂಲಿ ಕಾರ್ಮಿಕ ಮೃತ್ಯು
Update: 2016-02-14 22:03 IST
ಪುತ್ತೂರು: ಅಡಿಕೆ ಕೊಯ್ಯುತ್ತಿದ್ದ ವೇಳೆಯಲ್ಲಿ ತೀವ್ರ ಹೃದಯಾಘಾತಕ್ಕೊಗಾದ ಕೂಲಿಕಾರ್ಮಿಕರೊಬ್ಬರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲಿ ಮೃತಪಟ್ಟ ಘಟನೆ ಭಾನುವಾರ ಪುತ್ತೂರು ತಾಲೂಕಿನ ಬಲ್ನಾಡು ಗ್ರಾಮದ ಬುಳೇರಿಕಟ್ಟೆ ಎಂಬಲ್ಲಿ ನಡೆದಿದೆ.
ಬುಳೇರಿಕಟ್ಟೆಯ ಬೀಡುಮನೆ ನಿವಾಸಿ ಲಿಂಗಪ್ಪ ಪೂಜಾರಿ (55) ಮೃತಪಟ್ಟವರು. ಇವರು ತಮ್ಮ ಮನೆಯ ಪಕ್ಕದ ವ್ಯಕ್ತಿಯೊಬ್ಬರ ತೋಟದಲ್ಲಿ ಅಡಿಕೆ ಗೊನೆ ಕೀಳುತ್ತಿದ್ದ ಸಂದರ್ಭದಲ್ಲಿ ಮರದ ಮೇಲೆಯೇ ಹೃದಯಾಘಾತಕ್ಕೊಳಗಾಗಿದ್ದರು. ತಕ್ಷಣವೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ದಾರಿ ಮದ್ಯೆ ಕೊನೆಯುಸಿರೆಳೆದರು.
ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.